Advertisement
ಹೀಗೆ ಬೆಳೆದ ಹುಲ್ಲನ್ನು ಆಕಳುಗಳಿಗೆ ಪೌಷ್ಠಿಕ ಆಹಾರ (ಹುಲ್ಲು)ದಂತೆ ನೀಡುವ ಮೂಲಕ, ಹೆಚ್ಚು ಹಾಲನ್ನು ಪಡೆಯುತ್ತಿದ್ದಾರೆ. ನೀರಿನ ಸಿಂಪರಣೆಯ ಮೂಲಕ ಟ್ರೇಗಳಲ್ಲಿ ಹುಲ್ಲು ಬೆಳೆಯುವುದು ಕೊಪ್ಪಳ ಜಿಲ್ಲೆಯಲ್ಲಿ ಪ್ರಪ್ರಥಮ ಪ್ರಯೋಗ ಅಶೋಕ ಬಳ್ಳೊಳ್ಳಿ, ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರೂ ಸಹ, ಅವರಿಗೆ ಕೃಷಿಯ ಕಡೆ ತುಡಿತವಿದೆ.
ಮೆಕ್ಕೆಜೋಳದ ಬೀಜಗಳನ್ನು ಒಂದು ದಿನ ನೀರಿನಲ್ಲಿ ನೆನೆಸಿ, ಮರು ದಿನ ಬಟ್ಟೆಯಲ್ಲಿ ಕಟ್ಟಿ ಇಡಲಾಗುತ್ತದೆ. ಇಡೀ ದಿನ ನೀರಿನಲ್ಲಿ ನೆನೆಸಿದರೆ, ಬಟ್ಟೆಯಲ್ಲಿ ಕಟ್ಟಿ ಇಟ್ಟರೆ, ಒಂದು ದಿನದಲ್ಲಿ ಮೊಳಕೆ ಬಂದಿರುತ್ತವೆ. ಹೀಗೆ ಮೊಳಕೆ ಬಂದ ಬೀಜಗಳಲ್ಲಿ ಅರ್ಧ ಕೆ.ಜಿಯಷ್ಟನ್ನು ಟ್ರೇನಲ್ಲಿ ಹಾಕಿ ಇಡಲಾಗುತ್ತದೆ. ಅವುಗಳಿಗೆ ಪ್ರತಿದಿನ ಸಣ್ಣ ಸಣ್ಣ ಪೈಪ್‌ಗ್ಳ ಮೂಲಕ ನೀರನ್ನು ಸಿಂಪಡಿಸಲಾಗುತ್ತದೆ. ಅದಕ್ಕಾಗಿ ಅಟೋಮ್ಯಾಟಿಕ್ ಟೈಮರ್ ಅಳವಡಿಸಲಾಗಿದೆ. ಪ್ರತಿ 75 ನಿಮಿಷಗಳಿಗೊಮ್ಮೆ, 25 ಸೆಕೆಂಡ್ ಮಾತ್ರ ಈ ಮೊಳಕೆ ಬಿಟ್ಟ ಬೀಜಗಳಿಗೆ ನೀರು ಸಿಂಪಡಿಸುವ ವ್ಯವಸ್ಥೆ ಮಾಡಲಾಗಿದೆ. ಅದರಂತೆ, ಮೊಳಕೆ ಬೀಜಗಳಿಗೆ 10 ದಿನಗಳ ವರೆಗೆ ನೀರು ಸಿಂಪಡಿಸಲಾಗುತ್ತದೆ. ಈ ಹೊತ್ತಿಗೆ ಒಂದು ಅಡಿ ಎತ್ತರ ಮೆಕ್ಕೆಜೋಳದ ಹುಲ್ಲು ಬೆಳೆಯುತ್ತದೆ. ಅದನ್ನು ನೇರವಾಗಿ ಆಕಳುಗಳಿಗೆ ಆಹಾರವಾಗಿ ನೀಡಲಾಗುತ್ತದೆ.
Related Articles
Advertisement
ಈ ಪೌಷ್ಟಿಕ ಆಹಾರದಿಂದ ನಮ್ಮಲ್ಲಿರುವ 10 ಜವಾರಿ ಆಕಳುಗಳು ಹೆಚ್ಚಿನ ಪ್ರಮಾಣದಲ್ಲಿ ಹಾಲು ನೀಡುತ್ತಿವೆ. ಇದಕ್ಕಾಗಿ ಖರ್ಚಾದ ಒಟ್ಟು ಮೊತ್ತ 28 ಸಾವಿರ ರೂ.ಗಳು ಎಂದುರೈತ ಅಶೋಕ ಬಳ್ಳೊಳ್ಳಿ ವಿವರಿಸಿದರು.
ಮಾಹಿತಿಗೆ: 9739925886
– ಎನ್. ಶಾಮೀದ್ ತಾವರಗೇರಾ