Advertisement

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

05:40 PM Dec 23, 2024 | Team Udayavani |

ಮೆಲ್ಬೋರ್ನ್:‌ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿ ರೋಮಾಂಚನಕಾರಿಯಾಗಿ ಸಾಗುತ್ತಿದೆ. ಸರಣಿಯ ನಾಲ್ಕನೇ ಟೆಸ್ಟ್‌ ಗೆ ಮುನ್ನಾ ಎರಡೂ ತಂಡಗಳು ಸಿದ್ದತೆಯಲ್ಲಿದೆ. ಇದರ ನಡುವೆಯೇ ಮೈದಾನದ ಹೊರಗಿನ ಪೈಪೋಟಿಯೂ ಹೆಚ್ಚಾಗುತ್ತಿದೆ. ಇದು ಉಭಯ ತಂಡಗಳ ನಡುವಿನ ಸರಣಿಯ ತೀವೃತೆಯನ್ನು ಹೆಚ್ಚಿಸುತ್ತಿದೆ.

Advertisement

ಇತ್ತೀಚಿನ ಸಂದರ್ಶನವೊಂದರಲ್ಲಿ ಆಸ್ಟ್ರೇಲಿಯಾ ಆಟಗಾರರಿಗೆ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), ಅಂತಾರಾಷ್ಟ್ರೀಐ ಕ್ರಿಕೆಟ್ ಕೌನ್ಸಿಲ್ (ICC), ಮತ್ತು ಭಾರತೀಯ ಕ್ರಿಕೆಟನ್ನು ತಲಾ ಒಂದು ಪದದಲ್ಲಿ ವ್ಯಾಖ್ಯಾನಿಸಲು ಕೇಳಲಾಯಿತು. ಆಸೀಸ್‌ ಆಟಗಾರರು ನೀಡಿದ ಉತ್ತರ ಇದೀಗ ಚರ್ಚೆಯ ವಿಚಾರವಾಗಿದೆ.

ಆಸೀಸ್‌ ಟೆಸ್ಟ್‌ ತಂಡದ ಉಪ ನಾಯಕ ಟ್ರಾವಿಸ್‌ ಹೆಡ್‌ ಬಳಿ ಬಿಸಿಸಿಐ ವ್ಯಾಖ್ಯಾನಿಸಲು ಕೇಳಲಾಯಿತು. ಅವರು ಬಿಸಿಸಿಐ ಅಂದರೆ ಆಡಳಿತಗಾರ (Ruler) ಎಂದು ಕರೆದರು.

ಹೆಡ್‌ ಅವರ ಪದದ ಆಯ್ಕೆಯು ಜಾಗತಿಕ ಕ್ರಿಕೆಟ್‌ನಲ್ಲಿ ಬಿಸಿಸಿಐ ಹೊಂದಿರುವ ಅಪಾರ ಪ್ರಭಾವವನ್ನು ಖಂಡಿತವಾಗಿಯೂ ಸೂಚಿಸುತ್ತದೆ. ಆರ್ಥಿಕ ಸಂಪನ್ಮೂಲಗಳು, ಐಪಿಎಲ್‌ನ ಅಗಾಧ ಯಶಸ್ಸಿನೊಂದಿಗೆ ಬಿಸಿಸಿಐ ಐಸಿಸಿಗಿಂತ ಹೆಚ್ಚಿನ ಹಿಡಿತವನ್ನು ಹೊಂದಿದೆ ಎಂದು ಹಲವರು ನಂಬುವ ಸ್ಥಾನಕ್ಕೆ ಏರಿದೆ.

Advertisement

ಟ್ರಾವಿಸ್ ಹೆಡ್ ಹೇಳಿಕೆ ಅಲ್ಲಿಗೆ ನಿಲ್ಲಲಿಲ್ಲ. ಐಸಿಸಿ ಬಗ್ಗೆ ಕೇಳಿದಾಗ, ಅವರು “ದ್ವಿತೀಯ” ಎಂದು ಶೀಘ್ರವಾಗಿ ಹೇಳಿದರು. ಈ ಪದದ ಆಯ್ಕೆಯು ತೋರಿಕೆಯಲ್ಲಿ ಸರಳವಾಗಿದ್ದರೂ, ಕ್ರೀಡೆಯ ಭವಿಷ್ಯವನ್ನು ರೂಪಿಸುವಲ್ಲಿ ಬಿಸಿಸಿಐಯ ಪ್ರಾಬಲ್ಯಕ್ಕೆ ಐಸಿಸಿ ಎರಡನೇ ಸ್ಥಾನದಲ್ಲಿದೆ ಎಂದು ಸೂಚಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next