ಅಡಿಲೇಡ್: ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡವು ಉತ್ತಮ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಆಸೀಸ್ ತಂಡವು 337 ರನ್ ಗಳಿಸಿದ್ದು, 157 ರನ್ ಮುನ್ನಡೆ ಸಾಧಿಸಿದೆ.
ಮೊದಲ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 88 ರನ್ ಮಾಡಿದ್ದ ಆಸೀಸ್ ಗೆ ಶನಿವಾರ ಟ್ರಾವಿಸ್ ಹೆಡ್, ಮಾರ್ನಸ್ ಲಬುಶೇನ್ ನೆರವಾದರು.
ಅಜೇಯ 20 ರನ್ ಗಳಿಸಿದ್ದ ಲಬುಶೇನ್ ಅವರು 64 ರನ್ ಗಳಿಸಿದರು. ಭಾರತದ ವಿರುದ್ದ ಮತ್ತೊಮ್ಮೆ ಉತ್ತಮ ಪ್ರದರ್ಶನ ಮುಂದುವರಿಸಿದ ಟ್ರಾವಿಸ್ ಹೆಡ್ 140 ರನ್ ಮಾಡಿದರು. 141 ಎಸೆತ ಎದುರಿಸಿದ ಹೆಡ್ 140 ರನ್ ಮಾಡಿದರು.
ಭಾರತದ ಪರ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ತಲಾ ನಾಲ್ಕು ವಿಕೆಟ್ ಕಿತ್ತರು. ತಲಾ ಒಂದು ವಿಕೆಟ್ ನಿತೀಶ್ ಕುಮಾರ್ ರೆಡ್ಡಿ ಮತ್ತು ಅಶ್ವಿನ್ ಪಾಲಾಯಿತು.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತವು 180 ರನ್ ಗಳಿಗೆ ಆಲೌಟಾಗಿತ್ತು. ಸದ್ಯ ಆಸೀಸ್ 157 ರನ್ ಹಿನ್ನಡೆಯಲ್ಲಿದೆ.