Advertisement

ಪಾರದರ್ಶಕವಾಗಿ ಪಿಯು ಅರ್ಧ ವಾರ್ಷಿಕ ಪರೀಕ್ಷೆ ನಡೆಸಲು ಒತ್ತು

12:57 PM Dec 19, 2021 | Team Udayavani |

ಗುರುಮಠಕಲ್‌: ಪಿಯು ದ್ವಿತೀಯ ಹಾಗೂ ಪ್ರಥಮ ವರ್ಷದ ಅರ್ಧ ವಾರ್ಷಿಕ ಪರೀಕ್ಷೆಗಳು ಸೂಸುತ್ರ ಹಾಗೂ ಪಾರದರ್ಶಕವಾಗಿ ನಡೆಯುತ್ತಿದ್ದು, ಯಾದಗಿರಿ ಜಿಲ್ಲೆಯ ಎಲ್ಲ ಕಾಲೇಜುಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ ಎಂದು ಡಿಡಿಪಿಯು ಚಂದ್ರಕಾಂತ ತಿಳಿಸಿದರು.

Advertisement

ಪಟ್ಟಣದ ಎಸ್‌.ವಿ.ಪಿಯು ಕಾಲೇಜಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾದಗಿರಿ ಜಿಲ್ಲೆಯು ವಾರ್ಷಿಕ ದ್ವಿತೀಯ ಪಿಯು ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ಕಾಲೇಜಿನ ಪ್ರಾಚಾರ್ಯರಿಗೆ ಮಾರ್ಗದರ್ಶನ ನೀಡುತ್ತಿದ್ದೇನೆ. ಶೈಕ್ಷಣಿಕವಾಗಿ ಉತ್ತಮ ಸಾಧನೆಗೆ ಹಲವು ಸಲಹೆಗಳನ್ನು ನೀಡಿದ ನಂತರ ಪ್ರಾಚಾರ್ಯರು ಮತ್ತು ಉಪನ್ಯಾಸಕರ ಜತೆ ಚರ್ಚಿಸುತ್ತಿದ್ದೇನೆ ಎಂದರು.

ಅರ್ಧ ವಾರ್ಷಿಕ ಪರೀಕ್ಷೆಗಳು ಮುಖ್ಯ ಪರೀಕ್ಷೆಯಂತೆ ನಡೆಸಲಾಗುತ್ತಿದೆ ಹಾಗೂ ಕೋವಿಡ್‌ ಮಾರ್ಗದರ್ಶನ ಅನ್ವಯ ಪರೀಕ್ಷೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಬರುವುದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು.

ಈ ವೇಳೆ ಪರೀಕ್ಷೆ ಮುಖ್ಯಸ್ಥ ಚನ್ನಮ್ಮಲ್ಲಪ್ಪ ಕುಲಗೇರಿ, ಸಂಸ್ಥೆ ಕಾರ್ಯದರ್ಶಿ ಎಂ.ಬಿ ನಾಯಕಿನ್‌, ಪ್ರಾಚಾರ್ಯ ಶಿವಕುಮಾರ ರೆಡ್ಡಿ, ನರಸಿಂಹುಲು ಕಾನಾಗಡ್ಡ, ಉಪನ್ಯಾಸಕರಾದ, ನವಾದರೆಡ್ಡಿ, ರಮೇಶ, ಕಿಷ್ಟಪ್ಪ, ಗುಂಡಪ್ಪ ಸಜ್ಜನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next