Advertisement

ಐಪಿಎಸ್‌, ಐಎಎಸ್‌ ಅಧಿಕಾರಿಗಳ ವರ್ಗ

10:23 PM Jun 17, 2019 | Lakshmi GovindaRaj |

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರ ಐಪಿಎಸ್‌ ಹಾಗೂ ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ನಗರ ಪೊಲೀಸ್‌ ಆಯಕ್ತ ಟಿ. ಸುನೀಲ್‌ಕುಮಾರ್‌ ಸೇರಿ 19 ಮಂದಿ ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ ಮಾಡಿದೆ.

Advertisement

ಅಚ್ಚರಿಯ ಬೆಳವಣಿಗೆಯಲ್ಲಿ ಐಜಿಪಿ ಹುದ್ದೆಯಿಂದ ಎಡಿಜಿಪಿ ಹುದ್ದೆಗೆ ಬಡ್ತಿ ಪಡೆದಿರುವ ಅಲೋಕ್‌ ಕುಮಾರ್‌, ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಐಎಂಎ ಪ್ರಕರಣದ ಎಸ್‌ಐಟಿ ಮುಖ್ಯಸ್ಥರಾಗಿರುವ ಡಿಐಜಿ ಡಾ.ಬಿ.ಆರ್‌ ರವಿಕಾಂತೇಗೌಡ ಸಿಸಿಬಿ ಮುಖ್ಯಸ್ಥರಾಗಿ ನಿಯುಕ್ತಿಗೊಂಡಿದ್ದಾರೆ.

ವರ್ಗಾವಣೆ ವಿವರ: ಟಿ.ಸುನೀಲ್‌ ಕುಮಾರ್‌, ಎಡಿಜಿಪಿ (ನೇಮಕಾತಿ), ಬಿ.ಕೆ ಸಿಂಗ್‌, ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ಅಮೃತ್‌ ಪೌಲ್‌, ಐಜಿಪಿ ( ಪೂರ್ವ ವಲಯ), ಉಮೇಶ್‌ ಕುಮಾರ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ ಪಶ್ಚಿಮ ವಿಭಾಗ, ಸೌಮೇಂದು ಮುಖರ್ಜಿ, ಐಜಿಪಿ (ಐಎಸ್‌ಡಿ) ರಾಘವೇಂದ್ರ ಸುಹಾಸ, ಐಜಿಪಿ (ದಕ್ಷಿಣ ವಲಯ)ಅಮಿತ್‌ ಸಿಂಗ್‌, ಕಮಾಂಡೆಂಟ್‌(ಗೃಹರಕ್ಷಕ ಹಾಗೂ ನಾಗರಿಕ ಸೇವೆ).

ಎಂ.ಎನ್‌ ಅನುಚೇತ್‌, ಎಸ್‌ಪಿ ( ರೈಲ್ವೇ ಬೆಂಗಳೂರು ನಗರ), ಡಾ. ಭೀಮಶಂಕರ್‌ ಗುಳೇದ್‌, ಡಿಸಿಪಿ ( ಬೆಂಗಳೂರು ಈಶಾನ್ಯ ವಿಭಾಗ). ಡಾ.ರಾಮ್‌ನಿವಾಸ್‌ ಸೆಪೆಟ್‌, ಎಸ್‌ಪಿ (ಎಸಿಬಿ) ರವಿ ಡಿ ಚೆನ್ನಣ್ಣವರ್‌, ಎಸ್‌ಪಿ, (ಸಿಐಡಿ) ಎನ್‌.ವಿಷ್ಣುವರ್ಧನ, ಎಸ್‌ಪಿ(ಆಡಳಿತ ವಿಭಾಗ ಬೆಂಗಳೂರು ನಗರ ಪೊಲೀಸ್‌ ವಲಯ).

ಮೊಹಮದ್‌ ಸುಜೀತಾ ಎಂ.ಎಸ್‌, ಎಸ್‌ಪಿ (ಕೆಜಿಎಫ್), ಟಿ.ಪಿ ಶಿವಕುಮಾರ್‌ ಎಸ್‌ಪಿ (ಬೆಂಗಳೂರು ಗ್ರಾಮಾಂತರ)ಸಿ.ಬಿ.ರಿಷ್ಯಂತ್‌, ಎಸ್‌ಪಿ. (ಮೈಸೂರು) ಕಲಾ ಕೃಷ್ಣಸ್ವಾಮಿ, ನಿರ್ದೇಶಕರು, (ವಿಧಿವಿಜ್ಞಾನ ಪ್ರಯೋಗಾಲಯ).

Advertisement

ಐಎಎಸ್‌ ಅಧಿಕಾರಿಗಳು: ಪಿ.ರವಿಕುಮಾರ್‌- ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮಹೇಂದ್ರ ಜೈನ್‌- ಇಂಧನ ಇಲಾಖೆ ಜತೆಗೆ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬಿ.ಎಚ್‌. ಅನಿಲ್‌ ಕುಮಾರ್‌- ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ರಾಕೇಶ್‌ ಸಿಂಗ್‌- ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಡಾ.ಎನ್‌. ಮಂಜುಳಾ- ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಹುದ್ದೆ ಜತೆಗೆ ಬಿಡಿಎ ಆಯುಕ್ತರು,

ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌- ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ನಿರ್ದೇಶಕಿ, ಎಸ್‌.ಎಸ್‌. ನಕುಲ್‌- ಬಳ್ಳಾರಿ ಜಿಲ್ಲಾಧಿಕಾರಿ, ಡಾ.ವಿ.ರಾಮ್‌ ಪ್ರಶಾಂತ್‌ ಮನೋಹರ್‌- ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತ, ಜಿ.ಸಿ.ವೃಷಭೇಂದ್ರ ಮೂರ್ತಿ ಅವರನ್ನು ರೇಷ್ಮೆ ಅಭಿವೃದ್ಧಿ ಆಯುಕ್ತರು, ರೇಷ್ಮೆ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ (ಪಂಚಾಯತ್‌ ರಾಜ್‌) ನಿರ್ದೇಶಕ ಕೆ. ಯಾಲಕ್ಕಿಗೌಡ ಅವರನ್ನು ಮಂಡ್ಯ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ವರ್ಗಾಯಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next