ಕೋಲ್ಕತ್ತ: ರ‍್ಯಾಲಿಯೊಂದರ ಸಂದರ್ಭದಲ್ಲಿ ಟಿಎಂಸಿ ಪಕ್ಷದ ಬೆಂಬಲಿಗರು ‘ಗೋಲಿ ಮಾರೋ’ (ಬಂಗಾಳದ ದೇಶದ್ರೋಹಿಗಳಿಗೆ ಗುಂಡಿಕ್ಕಿ ಕೊಲ್ಲಿ) ಎಂದು ಘೋಷಣೆ ಕೂಗಿರುವುದಕ್ಕೆ ಸ್ಪಷ್ಟನೆ ನೀಡಿದ ಟಿಎಂಸಿ ವಕ್ತಾರ ಕುನಾಲ್ ಘೋಷ್, ಭಾವೋದ್ರೇಕದಿಂದ ಕೆಲವು ಯುವ ಬೆಂಬಲಿಗರು ಹಾಗೆ ಘೋಷಣೆ ಕೂಗಿರಬಹುದು. ಟಿಎಂಸಿ ಪಕ್ಷ ಅಂತದ್ದನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಅರುಣಾಚಲ ಪ್ರದೇಶದ ಮಾಜಿ ರಾಜ್ಯಪಾಲ ಮಾತಾ ಪ್ರಸಾದ್ ನಿಧನ
ರ‍್ಯಾಲಿಗಳಲ್ಲಿ ಅಂತಹ ಘೋಷಣೆ ಕೂಗುವುದನ್ನು ಪಕ್ಷ ಸರಿ ಎನ್ನುವುದಿಲ್ಲ. ಅಂತಹ ಘೋಷಣೆಗಳನ್ನು ಕೂಗಬಾರದು ಎಂದು ಅವರು ಹೇಳಿದರು.
ದಕ್ಷಿಣ ಕೊಲ್ಕತ್ತದಲ್ಲಿ ನಿನ್ನೆ(ಜ. 19) ನಡೆದ ಶಾಂತಿ ರ‍್ಯಾಲಿಯಲ್ಲಿ ಕೆಲವು ಯುವಕರು ‘ಗೋಲಿ ಮಾರೋ’ ಘೋಷಣೆ ಕೂಗಿದ್ದರು. ಅಷ್ಟಲ್ಲದೇ ಆ ರ‍್ಯಾಲಿ ಸಂದರ್ಭದಲ್ಲಿ ಟಿಎಂಸಿ ಪಕ್ಷದ ಇಬ್ಬರು ಸಚಿವರು ಭಾಗವಹಿಸಿದ್ದರಿಂದ ಈ ವಿಷಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇಂದು ಆ ಘೋಷಣೆ ಕೂಗಿದ ಯುವಕರನ್ನು ರಕ್ಷಿಸುವ ಸಲುವಾಗಿ ಹಾಗೂ ಪಕ್ಷಕ್ಕೆ ಅಂಟುವ ಕಳಂಕದಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಟಿಎಂಸಿ ಮಾಡಿದೆ.
ಇದನ್ನೂ ಓದಿ : ಪಿಎಮ್ಎವೈ-ಜಿ ಯೊಜನೆ ಅಡಿಯಲ್ಲಿ ಉ.ಪ್ರ 6.1 ಲಕ್ಷ ಫಲಾನುಭವಿಗಳಿಗೆ ಆರ್ಥಿಕ ನೆರವು