ನವದೆಹಲಿ:ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಇದೀಗ ರಿಲಯನ್ಸ್ ಜಿಯೋ, ಏರ್ ಟೆಲ್ , ವೋಡಾಫೋನ್ ಹಾಗೂ ಇತರ ಪ್ರಮುಖ ಟೆಲಿಕಾಂ ಸಂಸ್ಥೆಗಳ 4ಜಿ ಸ್ಪೀಡ್ ನ ಡಾಟಾವನ್ನು ಬಿಡುಗಡೆ ಮಾಡಿದೆ. ಡಾಟಾ ಮಾಹಿತಿ ಪ್ರಕಾರ ರಿಲಯನ್ಸ್ ಜಿಯೋಗಿಂತ ಏರ್ ಟೆಲ್ 4ಜಿ ಸ್ಪೀಡ್ ತುಂಬಾ ಅಧಿಕವಾಗಿದೆ ಎಂದು ತಿಳಿಸಿದೆ.
ಟ್ರಾಯ್ ಬಿಡುಗಡೆ ಮಾಡಿರುವ ಜನವರಿ ತಿಂಗಳ ಅಂಕಿಅಂಶದ ಪ್ರಕಾರ, ರಿಲಯನ್ಸ್ ಜಿಯೋಗಿಂತ ಏರ್ ಟೆಲ್ 4ಜಿ ಡೌನ್ ಸ್ಪೀಡ್ ತುಂಬಾ ಅಧಿಕವಾಗಿದೆ. ಭಾರತದಲ್ಲಿ ಏರ್ ಟೆಲ್ ಅತೀವೇಗದ ನೆಟ್ ವರ್ಕ್ ಆಗಿದೆ ಎಂದು ಹೇಳಿದೆ.
ಜನವರಿ ತಿಂಗಳಲ್ಲಿ ರಿಲಯನ್ಸ್ ಜಿಯೋ 4ಜಿ ಡೌನ್ ಲೋಡ್ ಸ್ಪೀಡ್ 8.345ಎಂಬಿಪಿಎಸ್ ಇದ್ದರೆ, ಏರ್ ಟೆಲ್ 4ಜಿ ಡೌನ್ ಲೋಡ್ ಸ್ಪೀಡ್ 11.862ಎಂಬಿಪಿಎಸ್ ಎಂದು ಡಾಟಾ ವಿವರಿಸಿದೆ.
ಟ್ರಾಯ್ ಮೈಸ್ಪೀಡ್ ಆಪ್ ಮೂಲಕ ಈ ಮಾಹಿತಿಯನ್ನು ಕಲೆಹಾಕಿದೆ ಎಂದು ವರದಿ ಹೇಳಿದೆ. ಜನವರಿ ತಿಂಗಳಲ್ಲಿ ಏರ್ ಟೈಲ್, ವೋಡಾಫೋನ್ ಹಾಗೂ ಐಡಿಯಾಗಿಂತ ರಿಲಯನ್ಸ್ 4ಜಿ ಡೌನ್ ಲೋಡ್ ಸ್ಪೀಡ್ ಕಡಿಮೆಯಾಗಿರುವುದಾಗಿ ತಿಳಿಸಿದೆ.
ಡಿಸೆಂಬರ್ ನಲ್ಲಿ ಉಳಿದ ಎಲ್ಲಾ ಕಂಪನಿಗಳಿಗಿಂತ ರಿಲಯನ್ಸ್ ಜಿಯೋ 4ಜಿ ಡೌನ್ ಲೋಡ್ ಸ್ಪೀಡ್ 18.146ಎಂಬಿಪಿಎಸ್ ಇತ್ತು. ಜನವರಿ ತಿಂಗಳಲ್ಲಿ ಐಡಿಯಾ ಕಂಪನಿಯ 4ಜಿ ಡೌನ್ ಲೋಡ್ ಸ್ಪೀಡ್ 10.562ಎಂಬಿಪಿಎಸ್ ಆಗಿದ್ದರೆ, ಡಿಸೆಂಬರ್ ತಿಂಗಳಲ್ಲಿ ಐಡಿಯಾ 4ಜಿ ಡೌನ್ ಸ್ಪೀಡ್ 5.943ಎಂಬಿಪಿಎಸ್.
ವೋಡಾಫೋನ್ ಜನವರಿ ತಿಂಗಳ 4ಜಿ ಡೌನ್ ಲೋಡ್ ಸ್ಪೀಡ್ 10.301ಎಂಬಿಪಿಎಸ್, ಡಿಸೆಂಬರ್ ತಿಂಗಳಲ್ಲಿ 9.666 ಎಂಬಿಪಿಎಸ್.