ಉಡುಪಿ: ಅಭಿವೃದ್ಧಿಶೀಲ ದೇಶಗಳಲ್ಲಿ ಬಂಜೆತನದ ಸಮಸ್ಯೆಗಳ ನಿಭಾವಣೆ ಮತ್ತು ಕಡಿಮೆ ವೆಚ್ಚದಲ್ಲಿ ಗರ್ಭಧಾರಣೆ ಚಿಕಿತ್ಸೆ ಲಭ್ಯವಾಗಿಸಲು ಅಲ್ಲಿನ ವೈದ್ಯರಿಗೆ ಭ್ರೂಣ ಶಾಸ್ತ್ರದಲ್ಲಿ ತರಬೇತಿ ನೀಡಲು ಜರ್ಮನಿಯ ಮರ್ಕ್ ಫೌಂಡೇಶನ್ ಮತ್ತು ಮಣಿಪಾಲದ ಮಾಹೆ ಒಪ್ಪಂದ ಮಾಡಿಕೊಂಡಿವೆ.
ಇದರನ್ವಯ ಆಫ್ರಿಕಾ ಮತ್ತು ಏಷ್ಯಾಗಳ ವೈದ್ಯ ಸಮುದಾಯಕ್ಕೆ ಮಣಿ ಪಾಲದ ಎಂಬ್ರಿಯಾಲಜಿ ವಿಭಾಗ ದಲ್ಲಿ ಮೂರು ತಿಂಗಳ ವಿಶೇಷ ತರಬೇತಿ ಯನ್ನು ನೀಡಲಾಗುತ್ತಿದ್ದು ಇದರ ಸಂಪೂರ್ಣ ವೆಚ್ಚವನ್ನು ನಾವು ಭರಿಸುತ್ತೇವೆ ಎಂದು ಮರ್ಕ್ ಫೌಂಡೇ ಶನ್‌ನ ಸಿಇಒ ಡಾ| ರಶಾ ಕೆಲೆಜ್ ಮತ್ತು ಮಾಹೆ ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಇದೇ ಸಂದರ್ಭದಲ್ಲಿ ಮೊದಲ ಬ್ಯಾಚ್ ನಲ್ಲಿ ತರಬೇತಿ ಪಡೆದ ಇಥಿಯೋಪಿಯಾ, ನೇಪಾಲ ಮತ್ತಿತರ ದೇಶ ಗಳ ವಿದ್ಯಾರ್ಥಿಗಳು ಕೋರ್ಸ್‌ನ ಅನುಭವ ಹಂಚಿಕೊಂಡರು. ಮರ್ಕ್ ಎಂಬ್ರಿಯಾಲಜಿ ಟ್ರೈನಿಂಗ್ ಪ್ರೋ ಗ್ರಾಮ್ ಎಂಬ ಅಸಿಸ್ಟಿವ್ ರಿಪ್ರೊಡಕ್ಷನ್ ಮತ್ತು ಎಂಬ್ರಿಯಾಲಜಿ ಸರ್ಟಿ ಫಿ ಕೇಟ್ ಕೋರ್ಸ್ ಅನ್ನು “ಮರ್ಕ್ ಮೋರ್ ದ್ಯಾನ್ ಎ ಮದರ್’ ಅಭಿಯಾನದ ಮೂಲಕ ಪ್ರಾರಂಭಿಸಿದೆ.
ಕೆಎಂಸಿ ಡೀನ್ ಪ್ರೊ| ಪ್ರಜ್ಞಾ ರಾವ್, ತರಬೇತಿ ನೇತೃತ್ವ ವಹಿಸಿದ್ದ ಪ್ರೊ| ಸತೀಶ್ ಅಡಿಗ ಮಾತನಾಡಿದರು. ಮರ್ಕ್ ಫೌಂಡೇಶನ್ ಆಫ್ರಿಕಾ ಮತ್ತು ಏಷ್ಯಾಗಳ 17ಕ್ಕೂ ಹೆಚ್ಚು ದೇಶ ಗಳಲ್ಲಿ 50ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಕ್ಲಿನಿಕಲ್ ಮತ್ತು ಪ್ರಾಯೋಗಿಕ ತರಬೇತಿಯನ್ನು ಫರ್ಟಿಲಿಟಿ ಸ್ಪೆಷಲಿಸ್ಟ್ ಗಳು ಮತ್ತು ಎಂಬ್ರಿಯಾಲಜಿಸ್ಟ್‌ಗಳಿಗೆ ನೀಡುತ್ತಿದೆ. ಮರ್ಕ್ ಫೌಂಡೇಶನ್ ವಿಶೇಷ ಫರ್ಟಿಲಿಟಿ ಕ್ಲಿನಿಕ್‌ಗಳೇ ಇಲ್ಲದ ಆಫ್ರಿಕಾ ರಾಷ್ಟ್ರಗಳಲ್ಲಿ “ಮರ್ಕ್ ಮೋರ್ ದ್ಯಾನ್ ಎ ಮದರ್’ ಮೂಲಕ ಸಿಯೆರ್ರಾ ಲಿಯೋನ್, ಲೈಬೀರಿಯಾ, ಜಾಂಬಿಯಾ, ನೈಗರ್, ಚಾಡ್ ಮತ್ತು ಗಿನಿಯಾಗಳಲ್ಲಿ ತರಬೇತಿ ನೀಡಿದೆ. ಇಥಿಯೋಪಿಯಾ ಮತ್ತು ಉಗಾಂಡ ಗಳಲ್ಲಿ ಮೊದಲ ಸಾರ್ವ ಜನಿಕ ಐವಿಎಫ್ ಕೇಂದ್ರಗಳ ಪ್ರಾರಂಭಕ್ಕೆ ಸಿಬಂದಿಗೆ ಅಗತ್ಯ ತರಬೇತಿ ನೀಡುವ ಮೂಲಕ ಬೆಂಬಲಿಸಿದೆ ಎಂದು ಡಾ| ರಶಾ ವಿವರಿಸಿದರು.
ಮರ್ಕ್ ಫೌಂಡೇಶನ್ ಮಹತ್ತರ ಉದ್ದೇಶಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. ನಾವು ಈ ಪಾಲುದಾರಿಕೆ ಕುರಿತು ಅತ್ಯಂತ ಉತ್ಸುಕರಾಗಿದ್ದೇವೆ ಮತ್ತು ಫೌಂಡೇಶನ್‌ನೊಂದಿಗೆ ದೀರ್ಘಾವಧಿ ಪಾಲುದಾರಿಕೆಯ ಭರವಸೆ ಹೊಂದಿದ್ದೇವೆ.
ಡಾ| ಪೂರ್ಣಿಮಾ ಬಾಳಿಗ ಮಾಹೆ ಸಹಕುಲಪತಿ
ಆಫ್ರಿಕಾ ಮತ್ತು ಏಷ್ಯಾ ಗಳಲ್ಲಿನ ಎಂಬ್ರಿಯಾಲಜಿಸ್ಟ್ ಗಳ ಪ್ಲಾಟ್‌ಫಾರಂಗೆ ಅತ್ಯಾಧುನಿಕ ತರಬೇತಿ ನೀಡಲು ಮಾಹೆ ಸಹಯೋಗ ಹೊಂದಲಾಗುತ್ತಿದೆ. ಆಫ್ರಿಕಾ ಮತ್ತು ಏಷ್ಯಾಗಳಲ್ಲಿ ಪ್ರಮುಖ ಸವಾಲಾಗಿರುವ ತರಬೇತಿ ಮತ್ತು ಕೌಶಲಯುಕ್ತ ವೃತ್ತಿಪರರ ಕೊರತೆ ನಿವಾರಿಸಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಡಿಮೆ ವೆಚ್ಚದಲ್ಲಿ ಗರ್ಭಧಾರಣೆಯ ಚಿಕಿತ್ಸೆ ಲಭ್ಯವಾಗುವಂತೆ ಮಾಡುವ ಈ ಪ್ರಯತ್ನ ನಮಗೆ ಬಹಳ ಸಂತೋಷ ತಂದಿದೆ.
ಡಾ| ರಶಾ ಕೆಲೆಜ್ ಮರ್ಕ್ ಫೌಂಡೇಶನ್‌ಸಿಇಒ