Advertisement
ಸದುಪಯೋಗಪಡಿಸಿಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರದ ಉಪಪ್ರಧಾನ ವ್ಯವಸ್ಥಾಪಕ ಭವಾನಿ ಪ್ರಭು ಮಾತನಾಡಿ, ತರಬೇತಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡು ಸಮಾಜಕ್ಕೆ ಕೊಡುಗೆ ನೀಡುವಂತಹ ವ್ಯಕ್ತಿಗಳಾಗಿ ನಿರ್ಮಾಣಗೊಳ್ಳಲಿ ಎಂದು ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ನಬಾರ್ಡ್‌ನ ನಿವೃತ್ತ ಅಧಿಕಾರಿ, ವೈ.ವಿ. ಗುಂಡೂರಾವ್ ಅವರು ತಮ್ಮ ತರಬೇತಿ ಕಾರ್ಯಕ್ರಮದಲ್ಲಿ ಸ್ವತಃ ನಾವು ಬದಲಾಗುವುದರೊಂದಿಗೆ ಸಮಾಜವನ್ನು ಬದಲಾವಣೆಯೆಡೆಗೆ ಕೊಂಡೊಯ್ಯುವಂತವರಾಗಬೇಕು, ಇತರರನ್ನು ಟೀಕಿಸುವ, ಅರ್ಥೈಸಿಕೊಳ್ಳುವ ಭರದಲ್ಲಿ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳದೆ ಗೊಂದಲಗಳಿಗೆ, ಕಷ್ಟಗಳಿಗೆ ಸಿಲುಕಿಕೊಳ್ಳುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದೇವೆ. ಜನರು ಸಾತ್ವಿಕ ರಾಜಸಿಕ ತಾಮಸಿಕ ಗುಣಗಳ ಮಿಶ್ರಣವಾಗಿದ್ದು, ಇದಕ್ಕೆ ಸಾರ್ವತ್ರಿಕ ಮೌಲ್ಯಗಳ ದ್ಯೋತಕವಾಗಿರುವ ಆಧ್ಯಾತ್ಮಿಕತೆಯನ್ನು ಬೆರೆಸಿದರೆ ವ್ಯಕ್ತಿಯು ಶಕ್ತಿಯಾಗಿ ನಿರ್ಮಾಣಗೊಳ್ಳುತ್ತಾನೆ ಎಂದರು. ಸಮಾರೋಪದ ಮುಖ್ಯ ಅತಿಥಿ ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ| ಶ್ರೀಶಕುಮಾರ್ ಮಾತನಾಡಿ, ವೃತ್ತಿಯಲ್ಲಿ ಪ್ರೌಢಿಮೆಯನ್ನು ಸಾಧಿಸುವ ಜತೆಗೆ ನಮ್ಮ ಸಮಾಜದ ಅಭ್ಯುದಯಕ್ಕೆ ಕೊಡುಗೆ ನೀಡುವಂತಹ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
Related Articles
ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ವಿನಯ ಕುಮಾರ್ ಕಂದಡ ಮಾತನಾಡಿ, ತರಬೇತಿ ಕಾರ್ಯಕ್ರಮದಲ್ಲಿನ ವಿಷಯಗಳನ್ನು ದಿನನಿತ್ಯದ ಜೀವನದಲ್ಲಿ ಅನುಷ್ಠಾನಗೊಳಿಸಿದಾಗ ಸಫಲತೆಯನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
Advertisement
ಸಹಕಾರ ಸಿಬಂದಿ ರಶ್ಮಿ ಸಾಕಳ್ಕರ್ ಪ್ರಾರ್ಥಿಸಿ, ಸಹಕಾರದ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಅಧಿಕಾರಿ ಪ್ರೇಮಚಂದ್ರ ನಾಯಕ್ ಸ್ವಾಗತಿಸಿದರು. ಸುಕನ್ಯಾ ಎಸ್.ಆರ್. ವಂದಿಸಿದರು. ಸುಧೀರ್ ಬಿ. ನಿರ್ವಹಿಸಿದರು. ಮಂಜುನಾಥ್ ಭಂಡಾರ್ಕರ್ ಅವರು ಕಾರ್ಯಕ್ರಮದಲ್ಲಿ ಸಹಕರಿಸಿದರು.