ಮದ್ದೂರು: ಗೂಡ್ಸ್ ವಾಹನವೊಂದರಲ್ಲಿ ಅಕ್ರಮವಾಗಿಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿಯನ್ನು ಸಾರ್ವಜನಿಕರೇ ಹಿಡಿದುತಹಶೀಲ್ದಾರ್ ವಶಕ್ಕೆ ಒಪ್ಪಿಸಿ ಚಾಲಕನನ್ನು ಪೊಲೀಸರುಬಂಧಿಸಿರುವ ಘಟನೆ ತಾಲೂಕಿನ ಸೋಮನಹಳ್ಳಿಯಲ್ಲಿ ಜರುಗಿದೆ.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ದಿನಸಿ ಅಂಗಡಿಯಲ್ಲಿವ್ಯಾಪಾರ ನಡೆಸುತ್ತಿದ್ದ ವಾಹನ ಚಾಲಕ ಹರೀಶ್ ಬಂಧಿತಆರೋಪಿಯಾಗಿದ್ದು, ಮತ್ತೋರ್ವ ಆರೋಪಿ ದೇವರಾಜುತಲೆಮರೆಸಿಕೊಂದ್ದಾನೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿಪಡಿತರ ಅಂಗಡಿಗಳಿಂದ ಅನ್ನಭಾಗ್ಯ ಅಕ್ಕಿಯನ್ನು ಖರೀದಿಸಿದಾಸ್ತಾನು ಮಾಡಿದ ನಂತರ ತಾಲೂಕಿನಲ್ಲಿರುವ ಹೋಟೆಲ್‌ಗಳು, ಅಂಗಡಿ ಮತ್ತು ಕಾಳಸಂತೆಯಲ್ಲಿ ಕಳೆದ ಹಲವುದಿನಗಳಿಂದಲೂ ಮಾರಾಟ ಮಾಡುತ್ತಿದ್ದರೆನ್ನಲಾಗಿದೆ.
ಸೋಮನಹಳ್ಳಿ ಗ್ರಾಮದಲ್ಲಿ ವಾಹನದ ಮೂಲಕ ಅಕ್ಕಿಸರಬರಾಜು ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆಸೋಮನಹಳ್ಳಿ ಗ್ರಾಮಸ್ಥರು ಟೆಂಪೋ ತಡೆದು ಪರಿಶೀಲನೆನಡೆಸಿದ ವೇಳೆ 60 ಕ್ವಿಂಟಲ್‌ಗೂ ಹೆಚ್ಚು ಅನ್ನಭಾಗ್ಯ ಅಕ್ಕಿ ಸಾಗಾಣೆಪ್ರಕರಣ ಬೆಳಕಿಗೆ ಬಂದಿದ್ದು, ಸಂಗ್ರಹಿಸುತ್ತಿದ್ದ ಅಕ್ಕಿಯನ್ನುಚನ್ನಪಟ್ಟಣ ಹಾಗೂ ಮದ್ದೂರು ತಾಲೂಕಿಗೆಸಾಗಿಸುತ್ತಿದ್ದರೆನ್ನಲಾಗಿದೆ.
ಸ್ಥಳೀಯ ಗ್ರಾಮಸ್ಥರು ವಾಹನ ಚಾಲಕ ಹರೀಶ್‌ರನ್ನುವಿಚಾರಣೆಗೊಳಪಡಿಸಿದ ವೇಳೆ ಸತ್ಯ ಹೊರಬಂದಿದ್ದು ಬಳಿಕತಹಶೀಲ್ದಾರ್ ಎಚ್.ಬಿ. ವಿಜಯಕುಮಾರ್, ಆಹಾರ ಇಲಾಖೆಶಿರಸ್ತೇದಾರ್ ರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಬಳಿಕ ವಾಹನ ಹಾಗೂ ಅಕ್ಕಿ ವಶಕ್ಕೆ ಪಡೆದು ಮಹಜರು ನಡೆಸಿದಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿಯನ್ನು ವಶಕ್ಕೆ ಪಡೆದ ಮದ್ದೂರುಪೊಲೀಸರು ಚನ್ನಪಟ್ಟಣದ ದಿನಸಿ ಅಂಗಡಿ ಮಾಲೀಕನ ವಿರುದ್ಧಅಗತ್ಯ ವಸ್ತು ಕಾಯಿದೆಯನ್ವಯ ಪ್ರಕರಣ ದಾಖಲಿಸಿದ್ದು,ಪರಾರಿಯಾಗಿರುವ ಆರೋಪಿ ಪತ್ತೆಗೆ ಕ್ರಮ ವಹಿಸಿದ್ದಾರೆ.