ಬೆಂಗಳೂರು: “ರಾಜಧಾನಿಯಲ್ಲಿ ಟ್ರಾಫಿಕ್ ಸಮಸ್ಯೆ ಹಿಮಾಲಯದ ಬೆಟ್ಟದಷ್ಟು ದೊಡ್ಡದಾಗಿದೆ’ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
“ಬೆಂಗಳೂರು ಮಾಸ್ಟರ್ ಪ್ಲಾನ್ -2031′ ಬಿಡಿಎ ಸಲ್ಲಿಸಲಿರುವ ಕರಡು ಪ್ರಸ್ತಾವನೆಗೆ ತಡೆಯಾಜ್ಞೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಆಲಿಸುತ್ತಿರುವ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ, ಸೂಕ್ತ ಯೋಜನೆಯಿಲ್ಲದ ಕಾರಣ, ಬೆಂಗಳೂರಿನಲ್ಲಿ ಮುಂಬೈ ನಗರಕ್ಕಿಂತಲೂ ಹೆಚ್ಚು ವಾಹನ ದಟ್ಟಣೆಯಿದೆ.
ಟ್ರಾಫಿಕ್ ಸಮಸ್ಯೆಗೆ ಪರಿಹಾರೋಪಾಯಗಳು, ವಿದ್ಯುತ್ ಅಭಾವ, ನೀರು ನಿರ್ವಹಣೆ, ಇನ್ನಿತರೆ ಎಲ್ಲ ಕ್ಷೇತ್ರಗಳ ತಜ್ಞರ ಜತೆ ಸಮಾಲೋಚಿಸಿ ಏಕರೂಪದ ಮಾಸ್ಟರ್ ಪ್ಲಾನ್ ರೂಪಿಸಿ ಎಂದು ಬಿಡಿಎಗೆ ನ್ಯಾಯಾಲಯ ಮೌಖೀಕ ಸಲಹೆ ನೀಡಿ ವಿಚಾರಣೆ ಮುಂದೂಡಿತು.
ಸಂವಿಧಾನ ಬದ್ಧ ನಿಯಮಾವಳಿಗಳ ಪ್ರಕಾರ ಮಹಾನಗರ ಯೋಜನೆಗಳ ಮಾಸ್ಟರ್‌ಫ್ಲಾನ್ ರೂಪಿಸುವ ಅಧಿಕಾರ ಬೆಂಗಳೂರು ಮಹಾನಗರ ಸಮಿತಿಗೆ ಸೇರಿದೆ. ಆದರೆ, ನೆಪಮಾತ್ರಕ್ಕೆ ಸಮಿತಿ ರಚನೆಯಾಗಿದ್ದು ಮಾಸ್ಟರ್‌ಫ್ಲಾನ್ ತಯಾರಿಸುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಬಳಸಿಕೊಂಡಿಲ್ಲ.
ಸಮಿತಿಯನ್ನು ಸಂರ್ಪೂರ್ಣವಾಗಿ ಕಡೆಗಣಿಸಲಾಗಿದೆ. ಜೊತೆಗೆ ಬಿಡಿಎ ನಿಯಮಗಳನ್ನು ಉಲ್ಲಂ ಸಿ ಮಾಸ್ಟರ್‌ಫ್ಲ್ಯಾನ್ ಸಿದ್ಧಪಡಿಸಲಾಗಿದೆ ಎಂದು ಆಕ್ಷೇಪಿಸಿ ನಮ್ಮ ಬೆಂಗಳೂರು ಫೌಂಡೇಶನ್ ಹಾಗೂ ಸಿಟಿಜನ್ ಆ್ಯಕ್ಷನ್ ಫೋರಂ ಪಿಐಎಲ್ ಸಲ್ಲಿಸಿವೆ.