ಟ್ರಾಫಿಕ್ ಪೊಲೀಸರು ಸಂತೆಕಟ್ಟೆ ಜಂಕ್ಷನ್‌ನಲ್ಲಿ ಸಂಚಾರ ನಿಯಂತ್ರಿಸುವಲ್ಲಿ ಹರಸಾಹಸ ಪಡುತ್ತಿರುತ್ತಾರೆ. ಅವರ ಕಣ್ಣು ತಪ್ಪಿಸಿ ಆಶೀರ್ವಾದ ಬಸ್ ನಿಲ್ದಾಣದಿಂದ ಕಲ್ಯಾ ಣ ಪುರ ಸಂತೆಕಟ್ಟೆ ಬಸ್ ನಿಲ್ದಾಣದವರೆಗೆ ಸರ್ವಿಸ್ ರಸ್ತೆಯಲ್ಲಿ ಅಲ್ಲಲ್ಲಿ ಕಾರು, ಇತ್ಯಾದಿ ವಾಹನಗಳನ್ನು ಗಂಟೆಗಟ್ಟಲೆ ಪಾರ್ಕ್ ಮಾಡುವ ಪ್ರವೃ ತ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅಂಗಡಿ ಮುಂಗಟ್ಟುಗಳಿಗೆ ಸಾಮಗ್ರಿ ಖರೀದಿಸಲು ಬರುವ ಗ್ರಾಹಕರು ಅಂಗಡಿ ಮುಂದೆ ತಮ್ಮ ವಾಹನವನ್ನು ನಿಲ್ಲಿಸಲು ಸಾಕಷ್ಟು ಜಾಗವಿದ್ದರೂ ರಸ್ತೆ ಬದಿಯಲ್ಲಿಯೇ ನಿಲ್ಲಿಸಿ ಹೋಗುವುದು ನಿತ್ಯ ರೂಢಿಯಾಗಿದೆ.
ಮಲ್ಪೆ: ರಾಷ್ಟ್ರೀಯ ಹೆದ್ದಾರಿ 66 ಬಳಿಯ ಆಶೀರ್ವಾದ ಬಸ್ ನಿಲ್ದಾಣದಿಂದ ಕಲ್ಯಾಣಪುರ ಸಂತೆಕಟ್ಟೆ ಜಂಕ್ಷನ್‌ವರೆಗಿನ ಸರ್ವಿಸ್ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡುವುದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದ್ದು, ಇತರ ವಾಹನಗಳ ಓಡಾಟವೇ ಸಾಧ್ಯವಿಲ್ಲದಂತಾಗಿದೆ.
ಉಡುಪಿಯಿಂದ ಆಗಮಿಸುವ ಸಿಟಿ ಮತ್ತು ಎಕ್ಸ್ ಪ್ರಸ್ ಬಸ್‌ಗಳು ರಾ.ಹೆ. 66ರಿಂದ (ಆಶೀರ್ವಾದ ಚಿತ್ರ ಮಂದಿರದ ಎದುರು) ಮಾರ್ಗ ಬದಲಿಸಿ ಸಂಚರಿಸುವುದರಿಂದ ಸಂಚಾರ ಅಡಚಣೆಯ ಜತೆಗೆ ಅಪಘಾತಕ್ಕೂ ಕಾರಣವಾಗುತ್ತಿವೆ.
ಸರ್ವಿಸ್ ರಸ್ತೆಯಲ್ಲಿ ಪಾರ್ಕಿಂಗ್ ಮಾಡಿದ ವಾಹನಗಳನ್ನು ತಪ್ಪಿಸಲು ಎಕ್ಸ್‌ಪ್ರೆಸ್ ಬಸ್‌ಗಳು ಎಡದಿಂದ ಬಲಕ್ಕೆ, ಮತ್ತೂಮ್ಮೆ ಎಡಭಾಗದಿಂದ ಬಲಕ್ಕೆ ಹೋಗುವುದರಿಂದ ಮುಂದಿನಿಂದ ಬರುವ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ ರಸ್ತೆ ಯಲ್ಲಿ ವಾಹನ ನಿಲುಗಡೆ ಯಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಎಕ್ಸ್‌ಪ್ರೆಸ್ ಬಸ್‌ಗಳು ಕಲ್ಯಾಣಪುರ ಸಂತೆಕಟ್ಟೆಯ ವರೆಗೆ ರಾಷ್ಟ್ರೀಯ ಹೆದ್ದಾರಿ ಯಲ್ಲಿಯೇ ಸಂಚರಿಸಿದರೆ ಸರ್ವಿಸ್ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆಯಾಗಲು ಸಾಧ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕರದು.
ಇದನ್ನೂ ಓದಿ:ಸಿಆರ್‌ಝಡ್ ಅಧಿಸೂಚನೆ 2019ರಲ್ಲಿ ಹೆಚ್ಚಿನ ಚಟುವಟಿಕೆಗೆ ಅವಕಾಶ: ಡಿಸಿ
ವಾಹನ ಸಂಚಾರ ಕಷ್ಟ
ರಸ್ತೆ ಬದಿಯಲ್ಲಿಯೇ ಅಡ್ಡಾದಿಡ್ಡಿಯಾಗಿ ವಾಹನ ಪಾಕಿಂಗ್ ಮಾಡುವುದರಿಂದ ವಾಹನದಲ್ಲಿ ಸಂಚರಿಸುವುದು ಕಷ್ಟಕರ. ಪೊಲೀಸರು ಮತ್ತು ಹೈವೇ ಪೆಟ್ರೋಲ್ ಪೊಲೀಸರು ಸರ್ವಿಸ್ ರಸ್ತೆಯಲ್ಲಿಯೇ ಪಾರ್ಕಿಂಗ್ ಮಾಡಿರುವ ವಾಹನಗಳ ಮೇಲೆ ಉಡುಪಿ ನಗರದಲ್ಲಿ ನಡೆಸುವ ಕಾರ್ಯಾಚರಣೆಯ ಮಾದರಿಯಲ್ಲಿ ಇಲ್ಲಿಯೂ ನಡೆಸಿದರೆ ಉತ್ತಮ.
– ಗಣೇಶ್ ಪ್ರಸಾದ್, ಸ್ಥಳೀಯರು
ಶಾಶ್ವತ ಪರಿಹಾರಕ್ಕೆ ಕ್ರಮ
ಇಲ್ಲಿನ ಸಮಸ್ಯೆಯ ಬಗ್ಗೆ ಈ ಹಿಂದೆಯೇ ಸಂಚಾರಿ ಪೊಲೀಸರ ಗಮನಕ್ಕೆ ತರಲಾಗಿತ್ತು. ಸ್ವಲ್ಪ ಸಮಯ ಸಮಸ್ಯೆ ಬಗೆಹರಿದಿದ್ದರೂ ಮತ್ತೆ ಯಥಾಸ್ಥಿತಿ ತಲುಪಿದೆ. ಮುಂದೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗುವುದು.
-ಮಂಜುಳಾ ನಾಯಕ್, ನಗರಸಭೆ ಸದಸ್ಯರು, ಗೋಪಾಲಪುರ ವಾರ್ಡ್