Advertisement
ಸೋಮವಾರ ರಾತ್ರಿ ಹೊಸಮಠ ಸೇತುವೆ ಮುಳುಗಡೆಯಾಗಿ, ಉಪ್ಪಿನಂಗಡಿ- ಕಡಬ- ಸುಬ್ರಹ್ಮಣ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮತ್ತೆ ನೆರೆ ಉಕ್ಕಿತ್ತು. ಮಧ್ಯಾಹ್ನ ಸ್ವಲ್ಪ ಪ್ರಮಾಣದ ನೀರು ಸೇತುವೆ ಮೇಲೆ ಹರಿಯು ತ್ತಿರುವಾಗಲೇ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದ ಫೋಟೋ ಹಾಗೂ ವೀಡಿಯೋ ವೈರಲ್ ಆಗಿದೆ. ಈ ವಿಚಾರ ಗಮನಕ್ಕೆ ಬಂದಿದ್ದು, ಸಿಬಂದಿ ನಿರ್ಲಕ್ಷ್ಯ ಸಾಬೀತಾದರೆ ಕ್ರಮ ಕೈಗೊಳ್ಳುವು ದಾಗಿ ಕಡಬ ಪಿಎಸ್‌ಐ ಪ್ರಕಾಶ್ ದೇವಾಡಿಗ ಪ್ರತಿಕ್ರಿಯಿಸಿದ್ದಾರೆ.
ಕಡಬ-ಪಂಜ ರಸ್ತೆಯ ಪುಳಿ ಕುಕ್ಕುವಿನಲ್ಲಿ ಕುಮಾರಧಾರಾ ನದಿಗೆ 60 ವರ್ಷಗಳ ಹಿಂದೆ ನಿರ್ಮಿಸಲಾದ ಸೇತುವೆಯಲ್ಲಿ ಸಣ್ಣ ಮಟ್ಟಿನ ಬಿರುಕು ಕಂಡಿದ್ದು, ಕಡಬ ತಹಶೀಲ್ದಾರ್, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಗ್ರಾಮಕರಣಿಕ ಶೇಷಾದ್ರಿ, ಜಿ.ಪಂ. ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದರು. ಸುಳ್ಯ ತಾ.ಪಂ. ಉಪಾಧ್ಯಕ್ಷೆ ಶುಭದಾ ಎಸ್. ರೈ, ಬಿಜೆಪಿ ಮುಖಂಡರಾದ ಪ್ರಕಾಶ್ ಎನ್.ಕೆ,, ಅಶೋಕ್ ಕುಮಾರ್ ಪಿ., ಸ್ಥಳೀಯರಾದ ಕುಂಞಣ್ಣ ಗೌಡ, ಮೋಹನ ಗೌಡ ಕೋಡಿಂಬಾಳ ಉಪಸ್ಥಿತರಿದ್ದರು. ಸುಳ್ಯ ಲೋಕೋಪಯೋಗಿ ಎಂಜಿನಿಯರ್ ಸಾಯಿ ಸಂದೇಶ್ ಪ್ರತಿಕ್ರಿಯೆ ನೀಡಿ, ಇದು ಸಣ್ಣ ಪ್ರಮಾಣದ ಬಿರುಕು. ಅಪಾಯಕಾರಿ ಅಲ್ಲ. ಮಳೆ ಬಿಡುವು ನೀಡಿದರೆ ಕಾಂಕ್ರೀಟ್ ತುಂಬಿಸಿ ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.