Advertisement
ಕಂದಾವರ ಗ್ರಾಮ ಪಂಚಾಯತ್ನ ಕಟ್ಟಡದಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವ ಗುರುಪುರ ನಾಡಕಚೇರಿ ಹಲವಾರು ಸಮಸ್ಯೆಗಳನ್ನು ಕಂಡಿದ್ದು. ಹೆಂಚಿನ ಕಟ್ಟಡವಾದ ಕಾರಣ ಮಳೆ ನೀರು ಸೋರಿ ಕಂಪ್ಯೂಟರ್ಗಳ ಕಾರ್ಯನಿರ್ವಹಣೆಗೆ ತೊಂದರೆಯಾಗುತ್ತಿತ್ತು. ಸಮರ್ಪಕ ಸ್ಥಳಾವಕಾಶದ ತೊಂದರೆಯೂ ಇಲ್ಲಿತ್ತು.
Related Articles
Advertisement
24 ಗ್ರಾಮಗಳಿಗೆ 9 ಗ್ರಾಮಕರಣಿಕರು 24 ಗ್ರಾಮಗಳಲ್ಲಿ ಕೇವಲ 9 ಗ್ರಾಮಕರಣಿಕರು ಈಗ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮಸ್ಥರಿಗೆ ಅಲೆದಾಟಗಳಿಗೆ ಕಾರಣವಾಗಿದೆ. ಗ್ರಾಮಕರಣಿಕರನ್ನು ನೇಮಿಸುವ ಬಗ್ಗೆ ಗ್ರಾಮಸ್ಥರು ಬೇಡಿಕೆಯನ್ನು ಇಟ್ಟಿದ್ದಾರೆ. ಈ ತನಕ ಯಾವುದೇ ಸ್ಪಂದನೆ ದೊರಕಿಲ್ಲ. 24 ಗ್ರಾಮಗಳ ವ್ಯಾಪ್ತಿ
ಗುರುಪುರ ಹೋಬಳಿಯ 24 ಗ್ರಾಮಗಳು ಗುರುಪುರ ನಾಡಕಚೇರಿಯ ವ್ಯಾಪ್ತಿಗೆ ಬರುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಕುಡುಪು, ಪಚ್ಚನಾಡಿ, ತಿರುವೈಲು ಸಹಿತ 21 ಗ್ರಾಮಗಳಾದ ನೀರುಮಾರ್ಗ, ಅಡ್ಡೂರು, ಮೂಳೂರು, ಬೊಂಡಂತಿಲ, ಮಲ್ಲೂರು, ಉಳಾಯಿಬೆಟ್ಟು, ಬಡಗ ಎಡಪದವು, ಮೂಡುಪೆರಾರ, ಪಡುಪೆರಾರ, ತೆಂಕುಳಿಪಾಡಿ, ಬಡಗುಳಿಪಾಡಿ , ಮೊಗರು, ಅದ್ಯಪಾಡಿ, ಕೊಳಂಬೆ, ಕಂದಾವರ, ಕೊಂಪದವು, ಮುಚ್ಚಾರು, ತೆಂಕ ಎಡಪದವು, ಕಿಲೆಂಜಾರು, ಕೊಳವೂರು, ಮುತ್ತೂರು ಗುರುಪುರ ಹೋಬಳಿ ವ್ಯಾಪ್ತಿಗೆ ಬರುತ್ತದೆ. ಅಡ್ಯಾರು, ಅರ್ಕುಳ ಗ್ರಾಮಗಳು ಈಗ ಇದರಿಂದ ಬೇರ್ಪಟ್ಟಿವೆ. ನಿರ್ಮಿತಿ ಕೇಂದ್ರದಿಂದ ಕಟ್ಟಡ ನಿರ್ಮಾಣ
ಒಟ್ಟು 18.84 ಲಕ್ಷ ರೂ.ಅನುದಾನದಲ್ಲಿ ನಿರ್ಮಿತಿ ಕೇಂದ್ರದಿಂದ ಕಟ್ಟಡ ನಿರ್ಮಾಣಗೊಂಡಿದೆ. ಒಟ್ಟು 700 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಉಪತಹಶೀಲ್ದಾರರ, ಕಂದಾಯ ನಿರೀಕ್ಷಕರ, ದಾಖಲೆ ಇಡುವ ಕೋಣೆಯನ್ನು ಹೊಂದಿದೆ. ಎದುರಿಗೆ ಕಚೇರಿ ಸಿಬಂದಿಗಳ ಹಾಗೂ ನೆಮ್ಮದಿ ಕೇಂದ್ರದ ಕಚೇರಿಯನ್ನು ಹೊಂದಿದೆ. ಈಗಾಗಲೇ ಈ ಕಟ್ಟಡವನ್ನು ನಿರ್ಮಿತಿ ಕೇಂದ್ರ ಮಂಗಳೂರು ತಹಶೀಲ್ದಾರರಿಗೆ ಹಸ್ತಾಂತರಿಸಿದೆ. ಕಂದಾವರ ಗ್ರಾಮ ಪಂಚಾಯತ್ನಿಂದ ಕಂದಾವರ ಪಡ್ಡಾಯಿ ಪದವು ರಸ್ತೆಯಲ್ಲಿ ಸುಮಾರು 500 ಮೀಟರ್ ದೂರದಲ್ಲಿ ನೂತನ ನಾಡಕಚೇರಿ ಕಟ್ಟಡ ನಿರ್ಮಾಣವಾಗಿದ್ದು ಒಟ್ಟು 10 ಸೆಂಟ್ಸು ಜಾಗವನ್ನು ಹೊಂದಿದೆ. ಇದರ ಸಮೀಪದಲ್ಲಿಯೇ ಗುರುಪುರ ರೈತ ಸಂಪರ್ಕ ಕೇಂದ್ರ, ಪ್ರಾಥಮಿಕ ಆರೋಗ್ಯ ಉಪಕೇಂದ್ರ, ಅಂಗನವಾಡಿ ಕೇಂದ್ರವೂ ಇದೆ. ಇದರಿಂದ ರೈತರಿಗೆ, ಗ್ರಾಮಸ್ಥರಿಗೆ ಹೆಚ್ಚು ಅನುಕೂಲವಾಗಲಿದೆ.