Advertisement
ಅವೈಜ್ಞಾನಿಕ ವೃತ್ತ: ನಗರದ ಡಿ.ಕ್ರಾಸ್ ಬಳಿ ಇದೀಗ ರೇಲ್ವೆ ಮೇಲ್ಸೇತುವೆ ನಿರ್ಮಾಣವಾಗಿದ್ದು, ಬೆಂಗಳೂರು ಹಿಂದೂ ಪುರ ಹೆದ್ದಾರಿ ಮೂಲಕ ತೆರಳುವ ನೂರಾರು ವಾಹನಗಳು ಯಾವುದೇ ಅಡೆತಡೆ ಇಲ್ಲದೇ, ಡಿ.ಕ್ರಾಸ್ ವೃತ್ತದ ಮಾರ್ಗವಾಗಿ ಚಲಿಸುತ್ತವೆ. ಇಲ್ಲಿನ ವೃತ್ತ ಸಹಅವೈಜ್ಞಾನಿಕವಾಗಿದ್ದು, ಹೆದ್ದಾರಿ ಬದಿಯಲ್ಲಿ ಇರಬೇಕಾದ ರಸ್ತೆ ವ್ಯವಸ್ಥೆ ಇಲ್ಲಿಲ್ಲ. ಇನ್ನು ರಸ್ತೆ ಬದಿಯಲ್ಲಿನ ಅಂಗಡಿಗಳಿಗೆ ಬರುವ ಗ್ರಾಹಕರು ರಸ್ತೆ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸುವುದರಿಂದ, ಭಾರೀ ವಾಹನಗಳು ರಸ್ತೆಯಲ್ಲಿ ಸಂಚರಿಸಲು ತೊಂದರೆಯಾಗುತ್ತಿದೆ.
Related Articles
ವಾಹನ ದಟ್ಟಣೆ ಹೆಚ್ಚಾಗಿ ಹಲವಾರು ಬಾರಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುತ್ತದೆ. ಈ ಹಿನ್ನೆಲೆ ಇಲ್ಲಿ ಸಿಗ್ನಲ್ ದೀಪಗಳನ್ನು ಸಹ ಅಳವಡಿಸ ಲಾಗಿದೆ. ಸಿಗ್ನಲ್ ದೀಪಗಳನ್ನು ಅಳವಡಿಸಿ 5 ವರ್ಷಗಳಾಗಿವೆ. ಆದರೆ ಸಿಗ್ನಲ್ ದೀಪಗಳು ಕಾರ್ಯ ನಿರ್ವಹಿಸದೇ ನೆಪ ಮಾತ್ರಕ್ಕೆ ಮಾತ್ರಕ್ಕೆ ಇವೆ ಎನ್ನುವಂತಾಗಿದೆ. ಸಿಗ್ನಲ್ ದೀಪವಿಲ್ಲದ ಕಾರಣ, ವೇಗವಾಗಿ ಆಗಮಿಸಿ ವೃತ್ತದಲ್ಲಿ ಸಂಧಿಸುವ ವಾಹನಗಳು ಡಿಕ್ಕಿ ಹೊಡಿಸಿಕೊಂಡು.
Advertisement
ಸಣ್ಣ ಅಪಘಾತಗಳಾಗಿ ಜಗಳ ಕಾಯುವ ದೃಶ್ಯಗಳು ನಿತ್ಯ ಸಾಮಾನ್ಯವಾಗಿವೆ. ಶೀಘ್ರವೇ ಸಂಬಂಧಪಟ್ಟವರು ಇಲ್ಲಿ ವಾಹನಗಳ ನಿಯಂತ್ರಣಕ್ಕೆ ಪೊಲೀಸ್ ಸಿಬ್ಬಂದಿ ನೇಮಿಸುವುದರೊಂದಿಗೆ ಟಿ.ಬಿ ವೃತ್ತದ ಬಳಿ ಸಿಗ್ನಲ್ ದೀಪಗಳು ಕಾರ್ಯ ನಿರ್ವಹಿಸುವಂತೆ ಮಾಡಬೇಕಿದೆ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಸರ್ವಿಸ್ ರಸ್ತೆ ಇಲ್ಲಪೊಲೀಸರು ಕೆಲಕಾಲ ಬಂದು ನಿಯಂತ್ರಿಸುವುದು ಬಿಟ್ಟರೆ ಸದಾಕಾಲ ಇಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ವಾಣಿಜ್ಯ ಮಳಿಗೆಗಳಿಗೆ ಹಾಗೂಸ್ಥಳೀಯರು ಸಂಚರಿಸಲು ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆಇಲ್ಲದಂತಾಗಿದೆ. ರಸ್ತೆ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರಕ್ಕೆ ತೊಂದರೆ ಯಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸ ಬೇಕಿದೆ ಎನ್ನುತ್ತಾರೆ ಸ್ಥಳೀಯರಾದ ಬಸವರಾಜ್. ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರು ವಾಗ ಹಾಗೂ ಕೆಲವು ಸಮಯದಲ್ಲಿ ವಾಹನದಟ್ಟಣೆ ಹೆಚ್ಚಾಗುತ್ತಿದ್ದು, ಈ ವೇಳೆ ಡಿ.ಕ್ರಾಸ್ ರಸ್ತೆ ಮೂಲಕ ಹಾದು ಹೋಗುವ ವಾಹನಗಳನ್ನು ಈ ರಸ್ತೆಗೆ ಸಂಪರ್ಕಿಸುವ ಪ್ರಮುಖ ವೃತ್ತಗಳಿಂದ ನಿಯಂತ್ರಿಸಲಾಗುತ್ತಿದೆ. ಡಿ.ಕ್ರಾಸ್ ವೃತ್ತದಲ್ಲಿ ಸಂಚಾರ ನಿಯಂತ್ರಣಕ್ಕೆ ಪೊಲೀಸ್ ವ್ಯವಸ್ಥೆ ಮಾಡಲಾಗುವುದು. ರಸ್ತೆ ಬದಿ ಅನಗತ್ಯ ವಾಹನ ನಿಲುಗಡೆ ತೆರವು ಮಾಡಲು ಕ್ರಮ ವಹಿಸಲಾಗುವುದು.
-ಎಂ.ಬಿ.ನವೀನ್ ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ -ಡಿ.ಶ್ರೀಕಾಂತ