Advertisement

‘ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಹೆಚ್ಚಳ’

10:16 AM Jul 14, 2018 | |

ಮಹಾನಗರ : ಭಾರತದಲ್ಲಿನ ಅಪಘಾತ ಸಂಖ್ಯೆ ಹೆಚ್ಚಳಕ್ಕೆ ಚಾಲಕನ ನಿರ್ಲಕ್ಷ್ಯ ಮತ್ತು ಮಿತಿ ಮೀರಿದ ವೇಗ ಮುಖ್ಯ ಕಾರಣ ಎಂದು ಮಂಗಳೂರು ಪಶ್ಚಿಮ ಪೊಲೀಸ್‌ ಠಾಣೆಯ ಜ್ಞಾನಶೇಖರ ಹೇಳಿದರು.

Advertisement

ನಗರದ ರಥಬೀದಿಯಲ್ಲಿರುವ ಡಾ| ಪಿ. ದಯಾನಂದ ಪೈ-ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು, ರೆಡ್‌ಕ್ರಾಸ್‌, ರೇಂಜರ್ ರೋವರ್ ಮತ್ತು ಪಶ್ಚಿಮ ಪೊಲೀಸ್‌ ಠಾಣೆ, ಮಂಗಳೂರು ಇವುಗಳ ಸಹಯೋಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷಾ  ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ರಸ್ತೆಯಲ್ಲಿ ಸಂಚರಿಸುವಾಗ ಪಾಲಿಸಬೇಕಾದ ಸುರಕ್ಷಾ  ನೀತಿಗಳನ್ನು ಮತ್ತು ಸುಗಮ ಸಂಚಾರಕ್ಕೆ ಅನುಕೂಲವಾಗುವ ವಿಧಾನಗಳ ಬಗ್ಗೆ ಜಾಗೃತಿ ನೀಡಿದರು.

ಚಂದ್ರಶೇಖರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಬ್‌ಇನ್‌ಸ್ಪೆಕ್ಟರ್‌ ಉದಯ್‌, ಮಣಿಕಂಠ, ಯುವ ರೆಡ್‌ಕ್ರಾಸ್‌ ಮತ್ತು ರೋವರ್ ಘಟಕ ಸಂಯೋಜಕ ಡಾ| ಮಹೇಶ್‌ ಕೆ.ಬಿ. ಮತ್ತು ಪ್ರೊ| ಪುರುಷೋತ್ತಮ ಭಟ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಘಟಕ ಸಂಯೋಜಕ ಡಾ| ಶೈಲಾ ರಾಣಿ ಬಿ. ನಿರೂಪಿಸಿದರು. 

ಸಂಚಾರ ನಿಯಮ ಪಾಲಿಸಿ
ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಜಶೇಖರ್‌ ಹೆಬ್ಟಾರ್‌ಸಿ. ಮಾತನಾಡಿ, ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಸಂಚಾರ ನಿಯಮಗಳನ್ನು ಪಾಲಿಸುವುದು ಅತೀ ಆವಶ್ಯಕ. ವಿದ್ಯಾರ್ಥಿಗಳು ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಮತ್ತು ರಸ್ತೆ ದಾಟುವಾಗ ಅತ್ಯಂತ ಜಾಗರೂಕರಾಗಿರಬೇಕು ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next