Advertisement

ಅಮೆಜಾನ್, ಫ್ಲಿಪ್ ಕಾರ್ಟ್ ಗಳಿಗೆ ಟಕ್ಕರ್ ನೀಡಲಿದೆಯೇ ‘ಭಾರತ್ ಇ ಮಾರ್ಕೆಟ್’..?

02:44 PM Mar 12, 2021 | |

ನವ ದೆಹಲಿ : ಭಾರತ ಹಂತ ಹಂತವಾಗಿ ದೇಸಿ ಬಳಕೆಯತ್ತ ಮುಖ ಮಾಡುತ್ತಿದೆ. ವೋಕಲ್ ಫಾರ್ ಲೋಕಲ್ ವಿಷನ್‌ ನತ್ತ ಯಶಸ್ವಿ ದಾಪುಗಾಲಿಡುತ್ತಿದೆ ಎನ್ನುವುದರಲ್ಲಿ ಯಾವುದೇ ಸಂಶಯ ಬೇಕಾಗಿಲ್ಲ.

Advertisement

ಆನ್ಲೈನ್ ಮಾರ್ಕೇಟಿಂಗ್ ಕ್ಷೇತ್ರದಲ್ಲಿ ದೈತ್ಯ ಸಂಸ್ಥೆಗಳೆಂದು ಗುರುತಿಸಿಕೊಂಡಿರುವ ಅಮೆಜಾನ್, ಫ್ಲಿಪ್‌ ಕಾರ್ಟ್ ಗಳಿಗೆ ಟಕ್ಕರ್ ನೀಡುವಂತೆ  ಆನ್‌ ಲೈನ್ ಶಾಪಿಂಗ್‌ ಗಾಗಿ ಈಗ ಮತ್ತೊಂದು ದೊಡ್ಡ ಪೋರ್ಟಲ್ ಅಡಿಯಿಟ್ಟಿದೆ.

ಸುಮಾರು 8 ಕೋಟಿ ವ್ಯಾಪಾರಿಗಳ ಸಂಘಟನೆಯಾದ ಕಾನ್ಫಿಡರೆಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ವೆಂಡರ್ ಮೊಬೈಲ್ ಅಪ್ಲಿಕೇಶನ್ ‘ಭಾರತ್ ಇ ಮಾರ್ಕೆಟ್’ ನ್ನು  ಬಿಡುಗಡೆ ಮಾಡಿದೆ.

ಓದಿ : ಕಾಲಮಿತಿ‌ ಇಲ್ಲದ ಮೀಸಲು ಅಧ್ಯಯನ ಸಮಿತಿ ರಚನೆ ಕಣ್ಣೊರೆಸುವ ತಂತ್ರ : ಯತ್ನಾಳ

‘ಭಾರತ್ ಇ ಮಾರ್ಕೆಟ್’ ಅಮೇಜ್ಹಾನ್ ಮತ್ತು ಫ್ಲಿಪ್ ಕಾರ್ಟ್ ಗೆ ನೇರ ಸ್ಪರ್ಧೆ ನೀಡಲಿದೆ ಎಂದು ಹೇಳಲಾಗುತ್ತಿದೆ. ‘ಭಾರತ್ ಇ ಮಾರ್ಕೆಟ್’  (Bharat e Market App) ಸಂಪೂರ್ಣ ದೇಶೀಯ ಇ-ಕಾಮರ್ಸ್ ಪ್ಲ್ಯಾಟ್ ಫಾರ್ಮ್ ಆಗಿದೆ.

Advertisement

‘ಭಾರತ್ ಇ ಮಾರ್ಕೆಟ್’ ನ ಮೊಬೈಲ್ ಆ್ಯಪ್ ಸಂಪೂರ್ಣ ಭಾರತೀಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಎಂದು CAIT ಹೇಳಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿಯವರ ವೋಕಲ್ ಫಾರ್ ಲೋಕಲ್ ವಿಷನ್‌ ನನ್ನು ಆಧರಿಸಿ ಈ ಆ್ಯಪ್ ನನ್ನು ಅಭಿವೃದ್ಧಿಗೊಳಿಸಲಾಗಿದೆ. 2021 ರ ಡಿಸೆಂಬರ್ ವೇಳೆಗೆ ಸುಮಾರು 7 ಲಕ್ಷ ವ್ಯಾಪಾರಿಗಳು ಈ ಪ್ಲಾಟ್‌ ಫಾರ್ಮ್‌ಗೆ ಸೇರುವ ನಿರೀಕ್ಷೆಯಿದೆ ಎಂದು CAIT ಮಾಹಿತಿ ನೀಡಿದೆ

ಓದಿ : ಲೈವ್ ಕಾರ್ಯಕ್ರಮ: ಟಿವಿ ನಿರೂಪಕನ ಮೇಲೆ ಕಳಚಿ ಬಿದ್ದ ಸ್ಟುಡಿಯೋ ಸೆಟ್; ವಿಡಿಯೋ ವೈರಲ್

ದೇಸಿ ‘ಭಾರತ್ ಇ ಮಾರ್ಕೆಟ್’ ನ ವಿಶೇಷತೆ ಏನು?

  1. ಈ ಪೋರ್ಟಲ್‌ನಲ್ಲಿ, ಬ್ಯನಿಸೆನ್ ಟು ಬ್ಯುಸಿನೆಸ್ (B2B) ಮತ್ತು ಬ್ಯುಸಿನೆಸ್ ಟು ಕಸ್ಟಮರ್ (B2C) ಸರಕುಗಳ ಮಾರಾಟ ಮತ್ತು ಖರೀದಿ  ಸಾಧ್ಯ.
  2. ಈ ಪೋರ್ಟಲ್‌ನಲ್ಲಿ ‘ಇ-ಶಾಪ್’ ತೆರೆಯಲು ಬಯಸುವವರು  ಮೊದಲುಮೊಬೈಲ್ಆ್ಯಪ್ ಮೂಲಕ ತಮ್ಮನ್ನು ನೋಂದಾಯಿಸಿಕೊಳ್ಳಬೇಕು.
  3. ಗೌಪ್ಯತೆಯ ವಿಚಾರದಲ್ಲಿ ಬಹಳ ಸುರಕ್ಷಿತವಾಗಿದೆ ಎಂದು CAIT ಹೇಳಿದೆ.  ಡೇಟಾ ಸೋರಿಕೆಯಾಗುವುದಿಲ್ಲ .
  4. ಈ ಪ್ಲಾಟ್‌ ಫಾರ್ಮ್‌ ನಲ್ಲಿ ಯಾವುದೇ ವಿದೇಶಿ ಫಂಡಿಂಗ್ ನ್ನು ಸ್ವೀಕರಿಸಲಾಗುವುದಿಲ್ಲ.
  5. ಈ ಪೋರ್ಟಲ್‌ನಲ್ಲಿ ಚೀನೀ ವಸ್ತುಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
  6. ಸ್ಥಳೀಯ ಕುಶಲಕರ್ಮಿಗಳು, ಮತ್ತು ಸಣ್ಣ ವ್ಯಾಪಾರಿಗಳಿಗೆ  ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಒದಗಿಸಲಾಗುತ್ತದೆ.
  7.  ಈ ಪೋರ್ಟ ಲ್ ನಲ್ಲಿ, ವ್ಯಾಪಾರ ನಡೆಸಲು ಯಾವುದೇ ಕಮಿಷನ್ ವಿಧಿಸಲಾಗುವುದಿಲ್ಲ.

ಇನ್ನು, ‘ಭಾರತ್ ಇ ಮಾರ್ಕೆಟ್’ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿ ಸರಕುಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ‘ಭಾರತ್ ಇ-ಮಾರ್ಕೆಟ್’ ಅತಿ ಕಡಿಮೆ ಬೆಲೆಗೆ ಗ್ರಾಹಕರಿಗೆ ಸರಕುಗಳನ್ನು ಅಥವಾ ಗ್ರಾಹಕರು ಬಯಸಿದ ವಸ್ತುಗಳನ್ನು ಒದಗಿಸಲಿವೆ ಎಂದು ಸಿಎಐಟಿ ಹೇಳಿದೆ.

ಇದು ಹೊಸ ಅತ್ಯಾಧುನಿಕ ತಂತ್ರಜ್ಞಾನ, ವಿತರಣಾ ವ್ಯವಸ್ಥೆ, ಸರಕುಗಳ ಗುಣಮಟ್ಟದ ನಿಯಂತ್ರಣ, ಡಿಜಿಟಲ್ ಪೇಮೆಂಟ್ ಇತ್ಯಾದಿ ಸೌಲಭ್ಯಗಳನ್ನು ಒಳಗೊಂಡಿದೆ.  ಪ್ರಸ್ತುತ, ಈ ಪೋರ್ಟಲ್, ವೆಬ್ ಮತ್ತು ಆಂಡ್ರಾಯ್ಡ್  ಅಪ್ಲಿಕೇಶನ್‌ ನಲ್ಲಿ ಮಾತ್ರ ಲಭ್ಯವಿದೆ.  ಇದನ್ನು  ಗೂಗಲ್ ಪ್ಲೇ ಸ್ಟೋರ್  ನಿಂದ ಡೌನ್‌ ಲೋಡ್ ಮಾಡಿಕೊಳ್ಳಬಹುದು. ಇದು ಶೀಘ್ರದಲ್ಲೇ ಐಒಎಸ್ ನಲ್ಲಿ  ಸಹ ಬಿಡುಗಡೆಯಾಗಲಿದೆ ಎಂದು CAIT ಹೇಳಿದೆ.

ಓದಿ : ಬದುಕು, ಕೊರಗಿಗಷ್ಟೇ ಮೀಸಲಿಟ್ಟ ಕತ್ತಲೆ ಕೋಣೆಯಲ್ಲ..!

Advertisement

Udayavani is now on Telegram. Click here to join our channel and stay updated with the latest news.

Next