Advertisement

ಇಂದಿನಿಂದ ಟಿಪಿಎಲ್‌ ಕ್ರಿಕೆಟ್‌:  ಟ್ರೋಫಿ ಅನಾವರಣ

01:20 AM Apr 14, 2017 | Karthik A |

ಕುಂದಾಪುರ: ಇಲ್ಲಿನ ಟಾರ್ಪೆಡೋಸ್‌ ಕ್ರಿಕೆಟ್‌ ಸಂಸ್ಥೆಯ ಆಶ್ರಯದಲ್ಲಿ ಎ.14ರಿಂದ  ಜರಗಲಿರುವ ಅಂತಾರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಟಿಪಿಎಲ್‌- 2017 ಟಿ 10  ಕ್ರಿಕೆಟ್‌ ಕೂಟದ ಟ್ರೋಫಿ ಹಾಗೂ ಜರ್ಸಿ ಅನಾವರಣ ಕಾರ್ಯಕ್ರಮ ಬುಧವಾರ ರಾತ್ರಿ ಜರಗಿತು. ಯುವ ಉದ್ಯಮಿ ಅಭಿನಂದನ್‌ ಶೆಟ್ಟಿ ಅವರು ಟ್ರೋಫಿ ಹಾಗೂ ಜರ್ಸಿ ಅನಾವರಣಗೊಳಿಸಿ ಶುಭ ಕೋರಿದರು. ಕುಂದಾಪುರ ಗಾಂಧಿ ಮೈದಾನದಲ್ಲಿ ಜರಗಲಿರುವ ಕ್ರಿಕೆಟ್‌ ಕೂಟದ ಉದ್ಘಾಟನೆ ಎ.14ರ ಸಂಜೆ 6.30ಕ್ಕೆ ಜರಗಲಿದ್ದು,  ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಕೂಟವನ್ನು ಉದ್ಘಾಟಿಸಲಿದ್ದಾರೆ.

Advertisement

ಈ ಕೂಟದಲ್ಲಿ ಸುಮಾರು 12 ವಿದೇಶದ ಹಾಗೂ ಭಾರತದ ತಂಡಗಳು ಭಾಗವಹಿಸುತ್ತಿವೆ. ಶ್ರೀಲಂಕಾದ ಸಪರ್‌ ಫ್ಯಾಷನ್‌, ಕ್ಯಾಂಡಿ ಶ್ರೀಲಂಕಾ, ಅಲೆಯನ್ಸ್‌ ಕತಾರ್‌, ಹನನ್‌ ವಾರಿಯರ್ ಕತಾರ್‌, ಪಯೋನಿಯರ್‌ ಕ್ರಿಕೆಟರ್ಸ್ ಸೌದಿ ಅರೇಬಿಯಾ, ಇಲೆವೆನ್‌ ವಾರಿಯರ್ಸ್, ದುಬೈ, ಈಸ್ಟರ್ನ್ ಬ್ಲೂಸ್‌ ಸೌದಿ ಅರೇಬಿಯಾ, ಸಿಟಿ ಬಾಯ್ಸ್ ಕೇರಳ, ಎಸ್‌ಕೆಸಿ ವಾರಿಯರ್ ಗೋವಾ, ಜೋಫ್‌ ಬಾಕ್ಸ್ ಗೋವಾ ತಂಡಗಳೊಂದಿಗೆ ಉಡುಪಿಯ ಉಡುಪಿ ಬಾಯ್ಸ್ ಹಾಗೂ ಕುಂದಾಪುರದ ತಂಡ ಕೂಟದಲ್ಲಿ ಪಾಲ್ಗೊಳ್ಳಲಿವೆ. ವಿಜೇತರಿಗೆ 10 ಲಕ್ಷ ರೂ. ಹಾಗೂ ಟ್ರೋಫಿ, ರನ್ನರ್ಸ್‌ ಅಪ್‌ ತಂಡಕ್ಕೆ ಟ್ರೋಫಿ ಮತ್ತು ರೂ. 5 ಲಕ್ಷ ಹಾಗೂ ಸರಣಿಶ್ರೇಷ್ಠ ಆಟಗಾರ ಬೈಕ್‌ ಪಡೆಯಲಿದ್ದಾರೆ ಎಂದು ಸಂಘಟಕ ಟಾರ್ಪೆಡೋಸ್‌ ಸಂಸ್ಥೆಯ ಅಧ್ಯಕ್ಷ  ಗೌತಮ್‌ ಶೆಟ್ಟಿ  ತಿಳಿಸಿದರು. ಉದ್ಯಮಿಗಳಾದ ಗಣೇಶ್‌ ಕಾಮತ್‌, ಚಂದ್ರಕಾಂತ್‌ ಶೆಣೈ, ಶ್ರೀಲಂಕಾ ಸಾಫ್ಟ್ಬಾಲ್‌ ಕ್ರಿಕೆಟ್‌ ಅಸೋಸಿಯೇಶನ್‌ ಅಧ್ಯಕ್ಷ ಲೆಸ್ಟರ್‌, ಫಿಲಾನ್‌ ತುಸ್ಕರ್‌ ಮಿರಾಂದ, ಉದ್ಯಮಿ ಸದಾನಂದ ನಾವಡ, ನಾಗಭೂಷಣ್‌ ರೆಡ್ಡಿ ಉಪಸ್ಥಿತರಿದ್ದರು. ಅಜಿತ್‌ ಕಾರ್ಯಕ್ರಮ ನಿರ್ವಹಿಸಿದರು. ಉದಯ ಶೆಣೈ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next