Advertisement

Election: ಪಟ್ಟಣ ಪಂಚಾಯತ್ ಚುನಾವಣೆ… ತೀರ್ಥಹಳ್ಳಿಯಲ್ಲಿ ರೆಸಾರ್ಟ್ ರಾಜಕೀಯ?

12:43 PM Aug 26, 2024 | sudhir |

ತೀರ್ಥಹಳ್ಳಿ : ಪಟ್ಟಣ ಪಂಚಾಯತ್ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಗೆ ಇನ್ನು ಒಂದೇ ದಿನ ಬಾಕಿ ಇದ್ದು ಯಾರು ಗದ್ದುಗೆ ಏರಲಿದ್ದಾರೆ ಎಂಬ ಕುತೂಹಲ ಒಂದೆಡೆ ಆದರೆ ರಾಜಕೀಯದಲ್ಲಿ ಏನಾದರು ಬದಲಾವಣೆ ಆಗುವ ಸಾಧ್ಯತೆ ಹೆಚ್ಚಿರುವುದರಿಂದ ರೆಸಾರ್ಟ್ ರಾಜಕಾರಣ ಆರಂಭವಾಗಿದೆ.

Advertisement

ಹೌದು ತೀರ್ಥಹಳ್ಳಿಯಲ್ಲಿ ಈ ಹಿಂದೆ 20 ವರ್ಷಗಳಿಗೂ ಅಧಿಕ ಕಾಲ ಬಿಜೆಪಿ ಅಧಿಕಾರವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಜೋಡೆತ್ತುಗಳ ರೀತಿಯಲ್ಲಿ ಅಖಾಡಕ್ಕೆ ಧುಮುಕಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಕಾಂಗ್ರೆಸ್ ರಾಜ್ಯ ನಾಯಕ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್ ಎಂ ಮಂಜುನಾಥ ಗೌಡರ ರಾಜಕೀಯ ತಂತ್ರದಿಂದ ಕಾಂಗ್ರೆಸ್ ತನ್ನತ್ತ ಅಧಿಕಾರವನ್ನು ವಶಪಡಿಸಿಕೊಂಡಿತು. ಅದರಲ್ಲೂ ಎರಡೂವರೆ ವರ್ಷಗಳ ಕಾಲ ಅಧಿಕಾರ ನಡೆಸಿ ಈಗ ಮತ್ತೊಮ್ಮೆ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ ಹಿನ್ನಲೆಯಲ್ಲಿ ಯಾರನ್ನು ಗದ್ದುಗೆಗೆ ಏರಿಸಬೇಕು ಎಂಬುದು ಮುಖಂಡರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

ರೆಸಾರ್ಟ್ ರಾಜಕಾರಣದತ್ತ ರಾಜಕಾರಣಿಗಳು!?
ಈಗಾಗಲೇ ಮತ್ತೊಮ್ಮೆ ಅಧಿಕಾರ ಉಳಿಸಿಕೊಳ್ಳಲು ಪಣ ತೊಟ್ಟಿರುವ ಕಾಂಗ್ರೆಸ್ ಮುಖಂಡರು ಏನೆಲ್ಲಾ ಕಸರತ್ತು ಮಾಡಬೇಕೋ ಅದನ್ನು ಎರಡು ಮೂರು ದಿನಗಳಿಂದ ಮಾಡುತ್ತಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಉದಯವಾಣಿ ಆಪರೇಷನ್ ಕಮಲ ಆಗುವ ಸಾಧ್ಯತೆ ಇದೆ ಎಂಬ ವಿಷಯವನ್ನು ವರದಿ ಮಾಡಿತ್ತು. ವರದಿ ಬೆನಲ್ಲೇ ಎಚ್ಚೆತ್ತ ಮುಖಂಡರು ಪಟ್ಟಣ ಪಂಚಾಯತ್ ಕಾಂಗ್ರೆಸ್ ಜನಪ್ರತಿನಿಧಿಗಳ ಜೊತೆಗೆ ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಸಿ ಬಿಸಿ ಚರ್ಚೆ ನಡೆಸಿ ಸಂಜೆಯ ವೇಳೆಗೆ ಅವರೆಲ್ಲರನ್ನು ರೆಸಾರ್ಟ್ ಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅದರ ಜೊತೆಗೆ ಪ್ರತಿಯೊಬ್ಬ ಸದಸ್ಯರಿಗೂ ಚುನಾವಣೆ ಹಿನ್ನಲೆಯಲ್ಲಿ ವಿಪ್ ಜಾರಿ ಮಾಡಿದ್ದೂ ನಾಳೆ ನಡೆಯುವ ಚುನಾವಣೆ ಭಾರಿ ಕುತೂಹಲ ಮೂಡಿಸಿದೆ. ಅಧ್ಯಕ್ಷರು ಯಾರಾಗ್ತಾರೆ? ನಾಳೆ ಮತ ಚಲಾವಣೆ ಮಾಡುವಾಗ ಏನಾದರು ಬದಲಾವಣೆ ಆಗುತ್ತಾ? ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ.

Advertisement

ಅಸಾದಿಗೆ ಅದೃಷ್ಟ!? ಜಯಪ್ರಕಾಶ್ ಗೆ ಜಯಲಕ್ಷ್ಮಿ ಆಶೀರ್ವಾದ!?
ಆಪರೇಷನ್ ಕಮಲ ಆಗದಂತೆ ನೋಡಿಕೊಂಡಿರುವ ಕಾಂಗ್ರೆಸ್ ಮುಖಂಡರು ಈಗ ಯಾರಿಗೆ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನ ಕೊಡಿಸುತ್ತಾರೆ ಎಂಬ ಚರ್ಚೆಗೆ ಬರುತ್ತಿರುವ ಮೊದಲ ಹೆಸರು ರಹಮತುಲ್ಲಾ ಅಸಾದಿ. ಹೌದು ಜನರ ಜೊತೆಗೆ ನಿಕಟ ಸಂಪರ್ಕ, ಅಧಿಕಾರಿಗಳ ಜೊತೆಗೆ ಚರ್ಚೆ, ಮಂತ್ರಿಗಳಿಂದ ಕೆಲಸ ಮಾಡಿಸಿಕೊಳ್ಳುವ ಚಾಣಾಕ್ಷತನ, ಹಾಗೂ ಈ ಹಿಂದೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ ಅನುಭವ ಇನ್ನೂ ಹೆಚ್ಚು ಹೆಚ್ಚು ಪಟ್ಟಣದ ಅಬಿವೃದ್ಧಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂಬ ಮನದಾಸೆ ಹೊಂದಿರುವ ಅಸಾದಿಗೆ ಅದೃಷ್ಟ ಲಕ್ಷ್ಮೀ ಒಲಿಯುವ ಸಾಧ್ಯತೆ ಬಹುತೇಕ ಖಚಿತವಾಗಿದೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.

ಒಂದು ವೇಳೆ ಮತ ಚಲಾವಣೆಯಲ್ಲಿ ಅಸಾದಿ ಹೊರತು ಪಡಿಸಿದರೆ ಜಯಪ್ರಕಾಶ್ ಶೆಟ್ಟಿಗೆ ಜಯಲಕ್ಷ್ಮಿ ಒಲಿಯುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಜಯಪ್ರಕಾಶ್ ಶೆಟ್ಟಿ ಅಧ್ಯಕ್ಷರಾಗಿ ಕುರ್ಚಿ ಮೇಲೆ ಕೂರಬಹುದು ಎಂಬ ಮಾತು ಕೂಡ ಕೇಳಿ ಬಂದಿದೆ.

ಒಟ್ಟಿನಲ್ಲಿ ನಾಳೆ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ನಡೆಯುವ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ ಭಾರಿ ಕುತೂಹಲ ಮೂಡಿಸಿದ್ದು ಪಟ್ಟಣ ಪಂಚಾಯಿತಿ ಗದ್ದುಗೆ ಕುರ್ಚಿ ಮೇಲೆ ಯಾರು ಕೂರುತ್ತಾರೆ ಎಂದು ಕಾದು ನೋಡಬೇಕಿದೆ. ಇತ್ತ ಈ ವಿಷಯದಲ್ಲಿ ಪಟ್ಟಣದ ಸಾರ್ವಜನಿಕರು ಕುತೂಹಲದಿಂದ ಚರ್ಚೆ ಮಾಡುತ್ತಿರುವ ಬಗ್ಗೆ ಮಾತು ಕೂಡ ಕೇಳಿ ಬರುತ್ತಿದೆ.

ಇದನ್ನೂ ಓದಿ: ಕೊಟ್ಟಿಗೆಹಾರ: ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ… ವಿದ್ಯಾರ್ಥಿಗಳು, ಪೋಷಕರಿಂದ ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next