Advertisement

Koratagere ಪ.ಪಂ ಕೈ ಮೇಲುಗೈ: ಮೂವರು ಜೆಡಿಎಸ್ ಸದಸ್ಯರು ಕಾಂಗ್ರೆಸ್ ಸೇರ್ಪಡೆ

09:12 PM Sep 09, 2024 | Team Udayavani |

ಕೊರಟಗೆರೆ: ಗೃಹಸಚಿವರ ಕ್ಷೇತ್ರವಾದ ಕೊರಟಗೆರೆ ಪಟ್ಟಣ ಪಂಚಾಯತ್ ನ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯು ಚುನಾವಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಸೋಮವಾರ (ಸೆ9) ಯಶಸ್ವಿಯಾಗಿ ನಡೆಯಿತು..

Advertisement

ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಮಹಿಳೆ ಮತ್ತು ಸಾಮಾನ್ಯ ವರ್ಗದ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ನಿಗದಿಯಾಗಿತ್ತು. ಅದರಂತೆ ಪಟ್ಟಣಕ್ಕೆ 15 ವಾರ್ಡ್‍ಗಳಿದ್ದು ಇದರಲ್ಲಿ ಒಬ್ಬ ಸದಸ್ಯ ಅನರ್ಹರಾದ ಹಿನ್ನೆಲೆ 14 ಸದಸ್ಯರ ಸಮಬಲದಿಂದ ಅಧ್ಯಕ್ಷೆಯಾಗಿ ಅನಿತಾ ಉಪಾಧ್ಯಕ್ಷೆಯಾಗಿ ಉಸ್ಮಾಫಾರೀಯಾ ಆಯ್ಕೆಯಾಗಿದ್ದು ಈ ಮೂಲಕ ಕೊರಟಗೆರೆ ಕಾಂಗ್ರೆಸ್ ಭದ್ರಕೋಟೆಯೆಂದು ಸಾಬೀತು ಮಾಡಿದೆ.

ನೂತನ ಅಧ್ಯಕ್ಷೆ ಅನಿತಾ ಮಾತನಾಡಿ, ಪಟ್ಟಣದಲ್ಲಿ ಸ್ವಚ್ಛತೆಯನ್ನು ಕಾಪಾಡುವುದೇ ನನ್ನ ಮುಖ್ಯಗುರಿ.ಗೃಹ ಸಚಿವರ ಮಾರ್ಗದರ್ಶನದಲ್ಲಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಪ.ಪಂ ಎಲ್ಲಾ ಸದಸ್ಯರುಅಧ್ಯಕ್ಷ ಸ್ಥಾನಕ್ಕೆ ಅವಿರೋಧಆಯ್ಕೆ ಮಾಡಿ ಜವಬ್ದಾರಿಯುತ ಸ್ಥಾನವನ್ನು ನೀಡಿದ್ದು ಎಲ್ಲರ ವಿಶ್ವಾಸದೊಂದಿಗೆ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ನೂತನ ಉಪಾಧ್ಯಕ್ಷೆ ಉಸ್ಮಾ ಫಾರೀಯ ಮಾತನಾಡಿ, ಪಟ್ಟಣದಲ್ಲಿ ಮೂಲಭೂತ ಸೌಕರ್ಯದಲ್ಲಿ ಕೊರತೆ ಕಂಡು ಬರದಂತೆ ಕರ್ತವ್ಯ ನಿರ್ವಹಿಸಿಕೊಂಡು ಹೋಗುತ್ತೇನೆ. ಗೃಹ ಸಚಿವರ ಆಶೀರ್ವಾದದಂತೆ ಇಂದು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದೇನೆ. ಅಧ್ಯಕ್ಷರ ಜೊತೆಗೂಡಿ ಪಟ್ಟಣದ ಅಭಿವೃದ್ಧಿಗೆ ಶ್ತಮಿಸುತ್ತೇನೆ. ಅಯ್ಮೆ ಮಾಡಿದ ಸದಸ್ಯರಿಗೆ ಅಭಾರಿಯಾಗಿರುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥ್ ನಾರಾಯಣ್, ಅರಕರೆಶಂಕರ್, ಮುಖಂಡರಾದ ಮಹಾಲಿಂಗಪ್ಪ, ನಗರಸಭಾ ಮಾಜಿ ಉಪಾಧ್ಯಕ್ಷ ವಾಲೇಚಂದ್ರು, ಪ.ಪಂ ಸದಸ್ಯರಾದ ಓಬಳರಾಜು, ಎ.ಡಿ ಬಲರಾಮಯ್ಯ, ಪ್ರದೀಪ್‍ಕುಮಾರ್, ನಟರಾಜ್, ನಂದೀಶ್, ಪುಟ್ಟನರಸಪ್ಪ, ಲಕ್ಷ್ಮೀನಾರಾಯಣ್, ನಾಗರಾಜು, ಕಾವ್ಯಶ್ರೀ ರಮೇಶ್, ಮಂಜುಳಾ, ಭಾರತಿ ಸಿದ್ದಮಲ್ಲಪ್ಪ, ಹೇಮಲತಾ, ಮುಖಂಡರಾದ ಕಲೀಂಉಲ್ಲಾ, ಎಸ್ಸಿ ಘಟಕದ ಪ್ರಧಾನಕಾರ್ಯದರ್ಶಿ ನಾಗರಾಜು, ಸೇರಿದಂತೆ ಇತರರು ಹಾಜರಿದ್ದರು.

Advertisement

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಮುಗಿದ ಬಳಿಕ ಪಟ್ಟಣದ ಅಭಿವೃದ್ಧಿಗಾಗಿ ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ, ಸದಸ್ಯ ಮಂಜುಳ ಸತ್ಯನಾರಾಯಣ್, ಪಕ್ಷೇತರವಾಗಿ ಆಯ್ಕೆಯಾಗಿದ್ದ ನಟರಾಜ್ ಸೇರಿ ಒಟ್ಟು ನಾಲ್ಕು ಮಂದಿ ಸದಸ್ಯರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗೃಹ ಸಚಿವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದು, ಸಚಿವರು ಅಭಿನಂದನೆ ಸಲ್ಲಿಸಿ ಶುಭಕೋರಿದ್ದಾರೆ. ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಪುರಸಭೆಯನ್ನಾಗಿ ಮಾಡಲಾಗುವುದು
ಕೊರಟಗೆರೆ ಪ.ಪಂಚಾಯತಿಗೆ ನೂತನ ಅಧ್ಯಕ್ಷೆಯಾಗಿ ಅನಿತಾ ಮತ್ತು ಉಪಾಧ್ಯೆಕ್ಷೆಯಾಗಿ ಉಸ್ಮಾಫಾರಿಯಾ ಆಯ್ಕೆಯಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿರುವುದು ಸಂತಸ ತಂದಿದೆ. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿ. ಅಧ್ಯಕ್ಷರು ಸೇರಿ ಒಟ್ಟು ನಾಲ್ಕು ಮಂದಿ ಸದಸ್ಯರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿರುವುದು ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ ಹೇಳಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next