Advertisement

ಹೊಸ ಪ್ರವಾಸೋದ್ಯಮ ನೀತಿ ಶೀಘ್ರ : ಸಿ.ಟಿ.ರವಿ

09:46 AM May 27, 2020 | sudhir |

ಚಿಕ್ಕಮಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರವಾಸೋದ್ಯಮ ನೀತಿಗೆ ಅನುಗುಣವಾಗಿ ಜಿಲ್ಲೆಯಲ್ಲಿ ನೂತನ ಪ್ರವಾಸೋದ್ಯಮ ನೀತಿಯನ್ನು ಜೂನ್‌ ಅಂತ್ಯದೊಳಗೆ ಜಾರಿಗೆ ತರುವುದಾಗಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.

Advertisement

ಮಂಗಳವಾರ ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಪ್ರವಾಸೋದ್ಯಮ ನೀತಿ ರೂಪಿಸುವ ಸಂಬಂಧ ಸಾರ್ವಜನಿಕರ ಸಲಹೆ,
ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಪ್ರವಾಸೋದ್ಯಮ ನೀತಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರವಾಸೋದ್ಯಮ ನೀತಿಗಳಿಗೆ ಪೂರಕವಾಗಿರಬೇಕು. ನೀತಿ ರೂಪಿಸಲು ಅವಕಾಶವಿದೆ. ಕಾನೂನು ಮಾಡಲು ಸಾಧ್ಯವಿಲ್ಲ.
ಸಾರ್ವಜನಿಕರ ಸಲಹೆ ಕ್ರೋಢೀಕರಿಸಿ ಜೂನ್‌ ಅಂತ್ಯದೊಳಗೆ ಜಿಲ್ಲಾ ಪ್ರವಾಸೋದ್ಯಮ ನೀತಿ ಜಾರಿಗೆ ತರಲಾಗುವುದು ಎಂದರು.

ವೈಲ್ಡ್‌ಕ್ಯಾಟ್‌ ಸೀ ಮ್ಯಾನೇಜಿಂಗ್‌ ಟ್ರಸ್ಟಿ ಶ್ರೀದೇವ್‌ ಹುಲಿಕೆರೆ ಮಾತನಾಡಿ, ಜಿಲ್ಲೆಯಲ್ಲಿ ಟ್ರಕಿಂಗ್‌ ಹಾಗೂ ಜಲಸಾಹಸ ಕ್ರೀಡೆ ಅಭಿವೃದ್ಧಿಪಡಿಸಲು ಅವಕಾಶವಿದೆ. ಗುಡ್ಡ- ಬೆಟ್ಟದಲ್ಲಿ ಹುಟ್ಟಿ ಹರಿಯುವ ಜಲಪಾತಗಳ ಸಂರಕ್ಷಣೆ ನಮ್ಮ ಹೊಣೆಯಾಗಿದೆ.
ಹೋಮ್‌ಸ್ಟೇಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಬೇಕು. 15ವರ್ಷದಿಂದ ಜಮೀನು ಮಾಲೀಕತ್ವ ಹೊಂದಿದವರಿಗೆ ಹೋಮ್‌ಸ್ಟೇ ಕಟ್ಟಲು ಅವಕಾಶ ನೀಡಬೇಕು ಎಂದರು.

ಓನ್‌ ಅರ್ಥ್ ಟ್ರಸ್ಟ್‌ ಸಿ.ವಿ.ಭರತ್‌ ಮಾತನಾಡಿ, ಜಲಾಶಯಗಳ ಹಿನ್ನೀರಿನಲ್ಲಿ ಸಾಹಸ ಕ್ರೀಡೆಗಳಿಗೆ ಅವಕಾಶ ಕಲ್ಪಿಸಬೇಕು. ಜಿಲ್ಲೆ ಕಾಫಿ ಬೆಳೆಗೆ ಹೆಸರುವಾಸಿಯಾಗಿದ್ದು, ಕಾಫಿ ಟೂರಿಸಂ ಬೆಳೆಸುವುದರಿಂದ ಸ್ಥಳೀಯ ಕಾಫಿ ಬ್ರಾಂಡ್‌ ಉತ್ತಮಪಡಿಸಲು ಸಾಧ್ಯವಾಗುತ್ತದೆ. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಜಿಲ್ಲೆ ಬಯಲುಸೀಮೆಯನ್ನು ಒಳಗೊಂಡಿದ್ದು,
ಬಾಸೂರು ಕಾವಲು ಕೃಷ್ಣಮೃಗ ಮತ್ತು ತೋಳಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಸ್ಥಳವನ್ನು ಅಭಿವೃದ್ಧಿಪಡಿಸುವುದರಿಂದ ಬಯಲುಸೀಮೆ ಭಾಗದಲ್ಲೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಜಿಲ್ಲಾ ಪ್ರವಾಸೋದ್ಯಮ ನೀತಿ ಜನಸ್ನೇಹಿಯಾಗಿರಬೇಕು ಎಂದರು.

ಗ್ರೀನ್‌ ಫೋರ್ಸ್‌ ಎನ್‌ಜಿಓ ಸಂಸ್ಥೆಯ ದೀಪ್‌ಗೌಡ ಮಾತನಾಡಿ, ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡಬೇಕು. ಪ್ರವಾಸಿ ತಾಣಗಳಿಗೆ ಕರೆದೊಯ್ಯುವ ಜೀಪ್‌ ಮಾಲೀಕರು ಪ್ರವಾಸಿಗರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದರು. ಹೋಮ್‌ಸ್ಟೇ ಅಸೋಸಿಯೇಷನ್‌ ಅಧ್ಯಕ್ಷ ಉತ್ತಮ್‌ ಹುಲಿಕೆರೆ ಮಾತನಾಡಿ, ಹೋಟೆಲ್‌
ಮತ್ತು ರೆಸಾಲ್ಟ್ ಗಳಿಗೆ ಸಬ್ಸಿಡಿ ನೀಡಬೇಕು. ಕೈಮರದಲ್ಲಿ ಕಲ್ಚರಲ್‌ ಹಬ್‌ ನಿರ್ಮಾಣಕ್ಕೆ ಒತ್ತು ನೀಡಬೇಕು. ಪ್ರತಿ ಗ್ರಾಮ ಪಂಚಾಯತ್‌ಗಳಲ್ಲೂ ಪ್ಲಾಸ್ಟಿಕ್‌ ರೀ ಸೈಕ್ಲಿಂಗ್‌ ಯೂನಿಟ್‌ ತೆರೆಯಬೇಕು ಎಂದರು. ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ
ಆನಂದ್‌ಕುಮಾರ್‌ ಶೆಟ್ಟಿ ಮಾತನಾಡಿ, ಜಿಲ್ಲೆಯ ಅನೇಕ ವರ್ಷಗಳ ಇತಿಹಾಸ ಹೊಂದಿದ್ದು, ಇತಿಹಾಸವನ್ನು ಪರಿಚಯಿಸುವ ಕೆಲಸವಾಗಬೇಕು ಎಂದರು.

Advertisement

ಅಡ್ವೇಚರ್‌ ನ್ಪೋಡ್ಸ್‌ ಕ್ಲಬ್‌ ಉಪಾಧ್ಯಕ್ಷ ಮಂಜುನಾಥ್‌ ಮಾತನಾಡಿ, ಅಯ್ಯನಕೆರೆ, ಮದಗದ ಕೆರೆಗಳಲ್ಲಿ ಜಲಸಾಹಸ ಕ್ರೀಡೆಗಳಿಗೆ
ಅವಕಾಶ ನೀಡಿದಲ್ಲಿ ಬಯಲುಸೀಮೆ ಭಾಗದಲ್ಲೂ ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ಗೌರವ ವನ್ಯಜೀವಿ ಪರಿಪಾಲಕ ವಿರೇಶ್‌ ಮಾತನಾಡಿ, ಪ್ರವಾಸೋದ್ಯಮ ನೀತಿ ರೂಪಿಸಲು ಪ್ರವಾಸೋದ್ಯಮದಲ್ಲಿ ಪರಿಣಿತಿ ಪಡೆದಿರುವ ತಜ್ಞರ ತಂಡವನ್ನು ರಚಿಸಬೇಕು ಎಂದು ತಿಳಿಸಿದರು. ಭದ್ರಾ ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ಗಿರೀಶ್‌ ಮಾತನಾಡಿ, ವೈಲ್ಡ್‌ಲೈಫ್‌ ಟೂರಿಸಂ ಅನ್ನು ಜನರಲ್‌ ಟೂರಿಸಂನಲ್ಲಿ ಸೇರಿಸಬಾರದು. ಸಮಗ್ರ ಮಾಹಿತಿ ಸಿಗುವಂತಿರಬೇಕು ಎಂದರು.
ಹೋಟೆಲ್‌ ಸಂಘದ ಸದಸ್ಯೆ ಶ್ಯಾಮಾಲ ರಾವ್‌, ಅರಣ್ಯಾ ಧಿಕಾರಿ ಧನಂಜಯ್‌, ಪರಿಸರ ಆಸಕ್ತ ಗಿರಿಜಾ ಶಂಕರ್‌ ಮಾತನಾಡಿದರು.

ಸಭೆಯಲ್ಲಿ ಡಿಸಿ ಡಾ| ಬಗಾದಿ ಗೌತಮ್‌, ಎಸ್‌ಪಿ ಹರೀಶ್‌ ಪಾಂಡೆ, ಜಿಪಂ ಸಿಇಒ ಎಸ್‌.ಪೂವಿತಾ, ಅಪರ ಜಿಲ್ಲಾ ಧಿಕಾರಿ ಡಾ| ಕೆ.ಕುಮಾರ್‌, ಎನ್‌ಜಿಓ ಸಂಸ್ಥೆಗಳ ಸದಸ್ಯರು ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿ ಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next