Advertisement

Congress: “40 ಪರ್ಸೆಂಟ್‌ ಸಿಎಂ’ಗೆ ಸಾಕ್ಷಿ ಕೊಟ್ಟಿದ್ರ್ಯಾ?: ಸಿಎಂಗೆ ಸಿ.ಟಿ. ರವಿ

09:45 PM Nov 12, 2024 | Team Udayavani |

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್‌ನಿಂದ 700 ಕೋಟಿ ರೂ. ಲೂಟಿ ಆರೋಪಕ್ಕೆ ಸಾಕ್ಷಿ ಕೇಳಿದ ಸರ್ಕಾರಕ್ಕೆ “ಆತ್ಮಸಾಕ್ಷಿ’ಯ ತಿರುಗೇಟು ನೀಡಿರುವ ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ. ರವಿ, “ಅಂಗೈ ಹುಣ್ಣಿಗೆ ಕನ್ನಡಿ ಬೇಡ. ಆತ್ಮಸಾಕ್ಷಿ ಇರುವವರಿಗೆ ಸಾಕ್ಷಿಯ ಅವಶ್ಯಕತೆ ಇಲ್ಲ’ ಎಂದು ತೀಕ್ಷ್ಣವಾಗಿ ಹೇಳಿದರು.

Advertisement

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಯಾವ ಸಾಕ್ಷಿ ಇಟ್ಟುಕೊಂಡು ಪೇ ಸಿಎಂ ಅಂತ ಈ ಹಿಂದೆ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡಿದ್ದಿರಿ? ನಿಮ್ಮ ಸಚಿವರ ಹಣದ ದಾಹದ ಬಗ್ಗೆ ಮದ್ಯ ಮಾರಾಟಗಾರರ ಸಂಘ ಆರೋಪ ಮಾಡಿದೆ. ನಿಮ್ಮ ಭ್ರಷ್ಟಾಚಾರಕ್ಕೆ ಆತ್ಮಸಾಕ್ಷಿಯೇ ಉತ್ತರ ಹೇಳುತ್ತದೆ. ಅದಕ್ಕೆ ಸಾಕ್ಷಿ ಬೇರೆ ಬೇಕಾ’ ಎಂದು ಪ್ರಶ್ನಿಸಿದರು.

“700 ಕೋಟಿ ರೂ. ಲೂಟಿ ಬಗ್ಗೆ ಸಾಕ್ಷಿ ಕೇಳುತ್ತಿದ್ದಾರೆ. ಆತ್ಮಸಾಕ್ಷಿ ಇದ್ದವರು ಯಾರೂ ಈ ರೀತಿ ಹೇಳುವುದಿಲ್ಲ. ಆತ್ಮಸಾಕ್ಷಿ ಸತ್ತು ಹೋದವರು ಮಾತ್ರ ಈ ರೀತಿ ಹೇಳುತ್ತಾರೆ. 40 ಪರ್ಸೆಂಟ್‌ ಸರ್ಕಾರ ಅಂತ ಆರೋಪ ಮಾಡಿದಾಗ ಸಾಕ್ಷಿ ಕೊಟ್ಟಿದ್ರಾ? ನಿಮ್ಮ ಮೇಲೆ (ಕಾಂಗ್ರೆಸ್‌ ಸರ್ಕಾರದ ಮೇಲೆ) ಮದ್ಯ ಮಾರಾಟಗಾರರ ಸಂಘದವರೇ ಆರೋಪ ಮಾಡಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು.

ಮುಜರಾಯಿ ದೇವಸ್ಥಾನಗಳ ದುಡ್ಡು ಬೇರೆ ಉದ್ದೇಶಕ್ಕೆ ಬಳಸುವುದಿಲ್ಲ ಎಂದು ಫ‌ಲಕ ಹಾಕುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, “ನಮ್ಮ ದೇವಸ್ಥಾನಗಳ ಆಸ್ತಿ ಕಿತ್ತುಕೊಂಡರು. ಕಾಂಗ್ರೆಸ್‌ ತಾನು ಮಾಡಿರುವ ಪಾಪಕ್ಕೆ ಪ್ರಾಯಃಶ್ಚಿತ್ತವನ್ನೂ ಮಾಡಿಕೊಳ್ಳಬೇಕು. ನಮಗೆ ಕೊಡಬೇಕಾದ ತಸ್ತೀಕ್‌ ಅನ್ನೂ ಸರಿಯಾಗಿ ಕೊಡುತ್ತಿಲ್ಲ. ಸನಾತನ ಬೋರ್ಡ್‌ ಮಾಡಿ ಆ ಬೋರ್ಡ್‌ಗೆ ಹಣ ಇಡಿ. ಆ ಮೂಲಕ ನಿಮ್ಮ ಪಕ್ಷ ಮಾಡಿರುವ ಪಾಪಕ್ಕೆ ಸನಾತನ ಬೋರ್ಡ್‌ ರಚಿಸಿ ಹಣ ಇಟ್ಟು ಪ್ರಾಯಶ್ಚಿತ್ತ ಮಾಡಿಕೊಳ್ಳಿ’ ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next