Advertisement

ಮತದಾರರಿಗೆ ಆಮಿಷವೊಡ್ಡಿದರೆ ಕಠಿಣ ಕ್ರಮ

09:03 AM Mar 25, 2019 | Team Udayavani |

ರಾಯಚೂರು: ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಆಮಿಷವೊಡ್ಡುವುದು ಅಪರಾಧವಾಗಿದ್ದು, ಅಂಥ ಘಟನೆ ಗಮನಕ್ಕೆ ಬಂದಲ್ಲಿ ಚುನಾವಣೆ ಆಯೋಗ ಕಠಿಣ ಕ್ರಮ ಜರುಗಿಸಲಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಎಚ್ಚರಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆ-2019ರ ಕುರಿತು ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರಿಗಾಗಿ ಮಂಗಳವಾರ ಕರೆದ ಸಭೆಯಲ್ಲಿ ಅವರು ಮಾತನಾಡಿದರು.

ಮತದಾರರು ತಮಗೆ ಇಷ್ಟವಿರುವ ಪಕ್ಷಕ್ಕೆ ಮತ ಹಾಕುತ್ತಾರೆ. ಅವರಿಗೆ ನಮ್ಮದೇ ಪಕ್ಷಕ್ಕೆ ಬೆಂಬಲಿಸಿ, ಮತ ಹಾಕಿ ಎಂದು ತಾಕೀತು ಮಾಡುವುದು, ಹಣ, ಉಡುಗೊರೆ ನೀಡುವುದು ಸರಿಯಲ್ಲ. ರಾಜಕೀಯ ಪಕ್ಷಗಳು ಯಾವುದೇ ಜಾತಿ, ಧರ್ಮ, ಭಾಷೆಗಳ ಮೇಲೆ ಪ್ರಚೋದನಕಾರಿ ಹೇಳಿಕೆ ನೀಡುವುದಾಗಲಿ, ಯಾವುದೇ ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ ಎಂದರು.

ಚುನಾವಣೆಯಂದು ಮತದಾನದ ಕೇಂದ್ರದೊಳಗೆ ಮತ ಹಾಕುವವರನ್ನು ಹೊರತುಪಡಿಸಿ 100 ಮೀ. ಆಸುಪಾಸು ಯಾರೂ ಹೋಗುವಂತಿಲ್ಲ. ಅಂಗವಿಕಲರು, ವೃದ್ಧರು, ಕುರುಡರು ಮತ್ತು ಇತರ ಅಂಗವೈಕಲ್ಯ ಹೊಂದಿರುವವರನ್ನು ಮತದಾನದ ಕೇಂದ್ರದತ್ತ ಒಳಗಡೆ ಕರೆದುಕೊಂಡು ಹೋಗಲು ಆಯೋಗವೇ ವ್ಯವಸ್ಥೆ ಮಾಡಲಿದೆ ಎಂದರು.

ಸಂವಿಧಾನಾತ್ಮಕವಾಗಿ ಎಲ್ಲರಿಗೂ ಸ್ವಾತಂತ್ರ್ಯ ಇದ್ದು ಮತದಾರರಿಗೆ ಯಾವುದೇ ರೀತಿಯ ಭಯ ಹುಟ್ಟಿಸುವ ಹಾಗೂ ಗಲಾಟೆ ಮಾಡುವ ವಾತಾವರಣ ನಿರ್ಮಿಸಬಾರದು. ಪೋಲಿಂಗ್‌ ಬೂತ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ ಚುನಾವಣಾ ವೀಕ್ಷಕರ ಗಮನಕ್ಕೆ ತರಬೇಕು. ಇದು ಆಯಾ ರಾಜಕೀಯ ಪಕ್ಷಗಳ ಸಂಘಟಕರ ಜವಾಬ್ದಾರಿ. ಯಾವುದೇ ಆಹಿತಕರ ಘಟನೆ ನಡೆಯದಂತೆ ಚುನಾವಣಾ ಆಯೋಗದ ನಿರ್ದೇಶನಗಳನ್ನು ಎಲ್ಲ ಪಕ್ಷಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

Advertisement

ಬಿಜೆಪಿ ಜಿಲ್ಲಾಧ್ಯಕ್ಷ ಜೆ.ಶರಣಪ್ಪ ಗೌಡ, ಜಿಲ್ಲಾ ಕಾರ್ಯದರ್ಶಿ ಕೆ.ಉಮೇಶ ಪಾಟೀಲ, ಯುವ ಕಾರ್ಯದರ್ಶಿ ರಾಜಶೇಖರ ಪಾಟೀಲ, ಕಾಂಗ್ರೆಸ್‌ ಜಿಲ್ಲಾ ಕಾರ್ಯದರ್ಶಿ ಪವನ್‌ ಪಾಟೀಲ ಹಾಗೂ ಎನ್‌.ಪರಪ್ಪ, ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ ಸೇರಿ ಇತರರು ಪಾಲ್ಗೊಂಡಿದ್ದರು ಅನುಮತಿ ಕಡ್ಡಾಯ ಸಾರ್ವಜನಿಕ ಸ್ಥಳ ಹಾಗೂ ಖಾಸಗಿ ವ್ಯಕ್ತಿಗಳ ಮನೆ ಅಥವಾ ಸ್ಥಳಗಳಲ್ಲಿ ಪೋಸ್ಟರ್‌, ಬ್ಯಾನರ್‌ ಹಾಕಬೇಕಾದರೆ ಅನುಮತಿ ಪಡೆಯುವುದು ಕಡ್ಡಾಯ. ರಾಜಕೀಯ ಪಕ್ಷಗಳ ಯಾವುದೇ ಸಭೆ, ಸಮಾರಂಭ ಮಾಡುವ ಮುನ್ನ ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆಯಬೇಕು. ಅವರಿಗೆ ಆ
ಕಾರ್ಯಕ್ರಮದ ಎಲ್ಲ ಮಾಹಿತಿಗಳನ್ನು ನೀಡಬೇಕು.
 ಬಿ. ಶರತ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next