Advertisement

‘ಔನ್ನತ್ಯದೊಂದಿಗೆ ನಿನ್ನ ಆಗಸ ಚುಂಬನ – Happy Landing’: Rafaleಗೆ INS ಕೊಲ್ಕತಾ ಸಂದೇಶ

03:17 PM Jul 29, 2020 | Hari Prasad |

ಹೊಸದಿಲ್ಲಿ: ಭಾರತೀಯ ವಾಯುಸೇನೆಗೆ ಅಮಿತ ಬಲವನ್ನು ತುಂಬಲು ಫ್ರಾನ್ಸ್ ನಿಂದ ಆಗಮಿಸುತ್ತಿರುವ ಐದು ರಫೇಲ್ ಫೈಟರ್ ಜೆಟ್ ಗಳು ಭಾರತದ ಸಾಗರ ವಲಯವನ್ನು ಪ್ರವೇಶಿಸಿವೆ.

Advertisement

ಫ್ರಾನ್ಸ್ ನಿಂದ ಯು.ಎ.ಇ.ಗೆ ಬಂದು ಅಲ್ಲಿಂದ ಹರ್ಯಾಣದ ಅಂಬಾಲ ವಾಯುನೆಲಗೆ ಸಾಗುವ ಹಾದಿಯಲ್ಲಿರುವ ಈ ಯುದ್ಧ ವಿಮಾನಗಳು ಅರಬ್ಬೀ ಸಮುದ್ರದ ಮೂಲಕ ಭಾರತದ ವ್ಯಾಪ್ತಿ ವಲಯವನ್ನು ಪ್ರವೇಶಿಸುತ್ತಿದ್ದಂತೆ ಇಲ್ಲಿ ನಿಯೋಜಿತ ಗಸ್ತು ನೌಕೆ ಐ.ಎನ್.ಎಸ್. ಕೊಲ್ಕತಾ ‘ರಫೇಲ್’ ಜೆಟ್ ಗಳನ್ನು ಹಾರ್ಧಿಕವಾಗಿ ಬರಮಾಡಿಕೊಳ್ಳುವ ರೆಡಿಯೋ ಸಂದೇಶವನ್ನು ಕಳುಹಿಸಿದೆ.

‘ನಿನ್ನ ಔನ್ನತ್ಯದೊಂದಿಗೆ ಆಗಸವನ್ನು ಸ್ಪರ್ಶಿಸು – ಹ್ಯಾಪಿ ಲ್ಯಾಂಡಿಂಗ್’ ಎಂಬ ರೆಡಿಯೋ ಸಂದೇಶ ಐ.ಎನ್.ಎಸ್. ಕೊಲ್ಕತಾ ಸಮರ ನೌಕೆಯಿಂದ 5 ರಫೇಲ್ ಜೆಟ್ ಗಳಿಗೆ ಸಂವಹನಗೊಂಡಿದೆ.

ಇದಕ್ಕೆ ಪ್ರತಿಯಾಗಿ ರಫೇಲ್ ಜೆಟ್ ಗಳ ಕಪ್ತಾನ ‘ವಿಶ್ ಯು ಫೇರ್ ವಿಂಡ್ಸ್. ಹ್ಯಾಪಿ ಹಂಟಿಂಗ್. ಓವರ್ ಆಂಡ್ ಔಟ್’ ಎಂದು ಪ್ರತಿ ಸಂದೇಶವನ್ನು ರವಾನಿಸಿದ್ದಾರೆ.

Advertisement


ಎರಡು ಸುಖೋಯ್ SU-30 MKI ಯುದ್ಧ ವಿಮಾನಗಳ ಎಸ್ಕಾರ್ಟ್ ನೊಂದಿಗೆ 5 ರಫೇಲ್ ಜೆಟ್ ಗಳು ಭಾರತೀಯ ಆಗಸದಲ್ಲಿ ಹಕ್ಕಿಗಳಂತೆ ಹಾರಿ ಬರುತ್ತಿರುವ ಸುಂದರ ವಿಡಿಯೋ ಒಂದನ್ನು ರಕ್ಷಣಾ ಸಚಿವರ ಸಚಿವಾಲಯದ ಟ್ವಿಟ್ಟರ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಲಾಗಿದೆ.

ಈ ಐದು ರಫೇಲ್ ಫೈಟರ್ ಜೆಟ್ ಗಳು ಅಂಬಾಲದಲ್ಲಿರುವ ವಾಯುನೆಲೆಯಲ್ಲಿ ಐ.ಎ.ಎಫ್.ನ 17ನೇ ಸ್ಕ್ಯಾಡ್ರನ್ ಗೆ ‘ಚಿನ್ನದ ಬಾಣಗಳಾಗಿ’ ಸೇರ್ಪಡೆಗೊಳ್ಳಲಿವೆ.

 

Advertisement

Udayavani is now on Telegram. Click here to join our channel and stay updated with the latest news.

Next