Advertisement

ಶೋಪಿಯಾನ್: ಭದ್ರತಾ ಪಡೆಯ ಎನ್ ಕೌಂಟರ್ ನಲ್ಲಿ ಲಷ್ಕರ್ ಕಮಾಂಡರ್ ಸೇರಿ ಇಬ್ಬರ ಹತ್ಯೆ

09:03 AM Jul 19, 2021 | Team Udayavani |

ಶೋಪಿಯಾನ್: ನಿಷೇಧಿತ ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ಉನ್ನತ ಕಮಾಂಡರ್ ಸೇರಿದಂತೆ ಇಬ್ಬರು ಭಯೋತ್ಪಾದಕರು ಭದ್ರತಾ ಪಡೆಯ ಎನ್ ಕೌಂಟರ್ ಗೆ ಬಲಿಯಾಗಿರುವ ಘಟನೆ ಸೋಮವಾರ(ಜುಲೈ19) ನಸುಕಿನ ವೇಳೆ ಜಮ್ಮು-ಕಾಶ್ಮೀರದ ಶೋಪಿಯಾನ್ ನಲ್ಲಿ ನಡೆದಿದೆ.

Advertisement

ಇದನ್ನೂ ಓದಿ:ಯಾರಿಗೂ ಹೇಳ್ಬೇಡಿ ಎನ್ನುತ್ತಲೇ ‘ಈ ಮೂವರಲ್ಲಿ ಯಾರೂ ಸಿಎಂ ಆಗಬಹುದು’ ಎಂದ ನಳಿನ್ ಕಟೀಲ್!

ಕಾಶ್ಮೀರ ಕಣಿವೆಯ ಐಜಿಪಿ(ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್) ಮಾಹಿತಿ ಪ್ರಕಾರ, ಭದ್ರತಾ ಪಡೆಯ ಎನ್ ಕೌಂಟರ್ ನಲ್ಲಿ ಲಷ್ಕರ್ ಕಮಾಂಡರ್ ಇಶ್ಫಾಕ್ ದಾರ್ ಅಲಿಯಾಸ್ ಅಬು ಅಕ್ರಮ್ ಸಾವಿಗೀಡಾಗಿರುವುದಾಗಿ ತಿಳಿಸಿದ್ದಾರೆ.

2017ರಿಂದಲೂ ಅಬು ಅಕ್ರಮ್ ಕಾಶ್ಮೀರ ಕಣಿವೆಯಲ್ಲಿ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ, ಭದ್ರತಾ ಪಡೆಯ ಕಾರ್ಯಾಚರಣೆ ವೇಳೆ ಅಕ್ರಮ್ ಹಾಗೂ ಮತ್ತೊಬ್ಬ ಉಗ್ರ ಎನ್ ಕೌಂಟರ್ ಗೆ ಬಲಿಯಾಗಿರುವುದಾಗಿ ಐಜಿಪಿ ಕುಮಾರ್ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next