ನವದೆಹಲಿ: ಭದ್ರತಾ ಪಡೆಯ ಕಾರ್ಯಾಚರಣೆಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್ ಎ ಮೊಹಮ್ಮದ್ ಸಂಘಟನೆಯ ಉನ್ನತ ಕಮಾಂಡರ್ ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಖ್ವಾಸ್ಬಾಯಾರ್ ಪ್ರದೇಶದಲ್ಲಿ ಬುಧವಾರ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:78,303 ರೈತರ ಆತ್ಮಹತ್ಯೆ;ತೋಮರ್ ಸರ್, ವೈಫಲ್ಯ ಮರೆಮಾಡಬೇಡಿ ಎಂದ ಸುರ್ಜೆವಾಲಾ
ವರದಿಯ ಪ್ರಕಾರ, ಜೈಶ್ ಕಮಾಂಡರ್, ಐಇಡಿ (ಸುಧಾರಿತ ಸ್ಫೋಟಕ ಸಾಧನ) ತಜ್ಞ ಯಾಸಿರ್ ಪರ್ರೈ ಹಾಗೂ ಮತ್ತೊಬ್ಬ ಉಗ್ರ ಭದ್ರತಾ ಪಡೆಯ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿರುವುದಾಗಿ ಹೇಳಿದೆ.
ಭದ್ರತಾ ಪಡೆ ಕಾರ್ಯಾಚರಣೆಯಲ್ಲಿ ಐಇಡಿ ತಜ್ಞ, ಜೈಶ್ ಕಮಾಂಡರ್ ಯಾಸಿರ್ ಪರ್ರೈ ಮತ್ತು ವಿದೇಶಿ ಉಗ್ರ ಫರ್ಖಾನ್ ಸಾವನ್ನಪ್ಪಿರುವುದಾಗಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ್ ಕುಮಾರ್ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.
ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವ ಇಬ್ಬರು ಮೋಸ್ಟ್ ವಾಂಟೆಡ್ ಉಗ್ರರಾಗಿದ್ದರು. ಪುಲ್ವಾಮಾದ ಖ್ವಾಸ್ಬಾಯಾರ್ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರೂ ಸಾವಿಗೀಡಾಗಿದ್ದಾರೆ.