Advertisement

2022 ರಲ್ಲಿ ಅತೀ ಹೆಚ್ಚು ಕಲೆಕ್ಷನ್:‌ ʼಆರ್‌ ಆರ್‌ ಆರ್‌ʼ ಮೀರಿಸಿ‌ ನಿಂತ ʼಕೆಜಿಎಫ್‌ -2ʼ

03:22 PM Dec 31, 2022 | Team Udayavani |

ಮುಂಬಯಿ: 2022 ರಲ್ಲಿ ಭಾರತದಲ್ಲಿ ಕೋಟಿಗಟ್ಟಲೆ ಕಲೆಕ್ಷನ್‌ ಸಿನಿಮಾಗಳು ಬಂದಿವೆ ಅದರೊಂದಿಗೆ ಕೋಟಿಗಳಿಸುತ್ತದೆ ಎನ್ನುವ ನಿರೀಕ್ಷೆ ಹುಟ್ಟಿಸಿ ಲಕ್ಷಗಳಿಸಲೂ ಪರದಾಡಿದ ಸಿನಿಮಾಗಳು ಬಂದಿವೆ. ಈ ವರ್ಷ ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ ಅತೀ ಹೆಚ್ಚು ಕಮಾಯಿ ಮಾಡಿದ ಸಿನಿಮಾಗಳ ಪಟ್ಟಿಯನ್ನು “ಪಿಂಕ್‌ ವಿಲ್ಲಾ” ವರದಿ ಮಾಡಿದೆ.

Advertisement

ಕೋವಿಡ್‌ ಬಳಿಕ ಸಿನಿಮಾ ರಂಗಕ್ಕೆ ನಿಧಾನವಾಗಿ ಒಂದೊಂದೇ ಹಿಟ್‌ ಗಳು ಸಿಕ್ಕಿವೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಭಾರತದ ಸಿನಿಮಾಗಳು ಮಿಂಚಿವೆ. ಕೋವಿಡ್‌ ಸಮಯದಲ್ಲಿ ಓಟಿಟಿಯಲ್ಲೇ ಹೆಚ್ಚು ಸಿನಿಮಾಗಳು ರಿಲೀಸ್‌ ಆಗುತ್ತಿದ್ದವು. ಆ ಬಳಿಕ ಥಿಯೇಟರ್‌ ನಲ್ಲಿ ನಿಧಾನವಾಗಿ ಸಿನಿಮಾಗಳು ತೆರೆ ಕಂಡವು. ಆ ಸಾಲಿನಲ್ಲಿ ಸೌತ್‌ ಇಂಡಿಯನ್‌ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶಸ್ವಿಯಾದವು.

ಅತೀ ಹೆಚ್ಚು ಕಲೆಕ್ಷನ್‌ ಮಾಡಿ 15 ಸಿನಿಮಾಗಳು:

  1. ಕೆಜಿಎಫ್‌ ಚಾಪ್ಟರ್‌ -2 ( 980 ಕೋಟಿ)
  2. ಆರ್‌ ಆರ್‌ ಆರ್‌ (901 ಕೋಟಿ)
  3. ಅವತಾರ: ದಿ ವೇ ಆಫ್ ವಾಟರ್ (15‌ ದಿನದ ಕಲೆಕ್ಷನ್ 315 ಕೋಟಿ, 500 ಕೋಟಿಯ ನಿರೀಕ್ಷೆ)
  4. ಕಾಂತಾರ ( 361 ಕೋಟಿ)
  5. ಪೊನ್ನಿಯಿನ್ ಸೆಲ್ವನ್ ಪಾರ್ಟ್‌ -1 (327 ಕೋಟಿ)
  6. ಬ್ರಹ್ಮಾಸ್ತ್ರ: ಪಾರ್ಟ್‌ -1 ಶಿವ (310 ಕೋಟಿ)
  7. ವಿಕ್ರಂ (307 ಕೋಟಿ)
  8. ದಿ ಕಾಶ್ಮೀರ್‌ ಫೈಲ್ಸ್‌ (281 ಕೋಟಿ)
  9. ದೃಶ್ಯಂ -2 (43 ದಿನಗಳ ಕಲೆಕ್ಷನ್‌ 277 ಕೋಟಿ; 290 ಕೋಟಿ ಮುಟ್ಟುವ ನಿರೀಕ್ಷೆ)
  10. ಭೂಲ್ ಭೂಲೈಯಾ 2‌ (218 ಕೋಟಿ)
  11. ಬೀಸ್ಟ್‌ (170 ಕೋಟಿ)
  12. ಡಾಕ್ಟರ್ ಸ್ಟ್ರೇಂಜ್ ಇನ್‌ ದಿ ಮಲ್ಟಿವರ್ಸ್ ಮ್ಯಾಡ್ನೆಸ್ (164 ಕೋಟಿ)
  13. ಗಂಗೂಬಾಯಿ ಕಾಠಿಯಾವಾಡಿ ( 152 ಕೋಟಿ)
  14. ‘ಸರ್ಕಾರು ವಾರು ಪಾಟ (140 ಕೋಟಿ)
  15. ಭೀಮ್ಲಾ ನಾಯಕ್ (133 ಕೋಟಿ)

ಈ ಲಿಸ್ಟ್‌ ನಲ್ಲಿರುವ ಒಂದು ವಿಶೇಷವೆಂದರೆ ಇದರಲ್ಲಿರುವ 7 ಸಿನಿಮಾಗಳು ಸೀಕ್ವೆಲ್‌ ಆಗಿರುವ ಹಾಗೂ ಆಗಲಿರುವ ಸಿನಿಮಾಗಳಿವೆ.

ʼಲಾಲ್‌ ಸಿಂಗ್‌ ಚಡ್ಡಾʼ, ʼಸಾಮ್ರಾಟ್ ಪೃಥ್ವಿರಾಜ್ʼ, ʼಶಂಶೇರಾʼ, ʼರಾಮ್ ಸೇತುʼ, ʼಆಚಾರ್ಯʼ, ʼರಾಧೆ ಶ್ಯಾಮ್ʼ ನಂತಹ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹೈಪ್‌ ಕ್ರಿಯೇಟ್‌ ಮಾಡಿದ್ದ ಸಿನಿಮಾಗಳು ಆದರೆ ನಿರೀಕ್ಷೆಗೆ ಓಡಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next