Advertisement
ಪ್ರವಾಸೋದ್ಯಮಕ್ಕೂ ತನ್ನದೇಯಾದ ಕೊಡುಗೆಗಳನ್ನು ನೀಡುತ್ತ ಬಂದಿದೆ.
Related Articles
ಇತಿಹಾಸ ಪ್ರಸಿದ್ಧ ಸೋಮನಾಥ ದೇಗಲ ಇಲ್ಲಿನ ಪ್ರಮುಖ ಆರ್ಕಷಕ ಕೇಂದ್ರಗಳಲ್ಲಿ ಒಂದು. ಭಾರತದಲ್ಲಿ 7 ಬಾರಿ ಪುನರ್ನಿಮಾಣವಾದ ದೇಗುಲ ಇದು ಎಂಬ ಖ್ಯಾತಿಯನ್ನು ಹೊಂದಿದೆ. 11ನೇ ಶತಮಾನದಲ್ಲಿ ಸೋಲಂಕಿ ರಾಜಪೂತರಿಂದ ನಿರ್ಮಾಣಗೊಂಡಿದೆ. 1951ರಲ್ಲಿ ಕೊನೆಯ ಬಾರಿ ಪುನರ್ ನಿರ್ಮಾಣವಾಗಿದೆ. ಈ ದೇಗುಲದಲ್ಲಿ ಅಪಾರ ಶ್ರೀಮಂತಿಕೆ ಮತ್ತು ಕೀರ್ತಿಯ ಕಾರಣಕ್ಕೆ ಹಲವು ಬಾರಿ ಸತತವಾಗಿ ದಾಳಿಗೆ ಒಳಗಾಗಿತ್ತು. ಅದ್ಭುತವಾದ ಕೆತ್ತನೆ, ಬೆಳ್ಳಿಯ ಬಾಗಿಲು, ಶಿಬಲಿಂಗ, ನಂದಿಯ ಪ್ರತಿಮೆ ಬಹಳ ಪ್ರಸಿದ್ಧಿ ಹೊಂದಿದೆ.
Advertisement
ಗುಜರಾತಿನ ಗಿರ್ ಅಭಯಾರಣ್ಯದಲ್ಲಿ ಅತಿ ಹೆಚ್ಚು ಏಷ್ಯಾದ ಸಿಂಹಗಳ ಸಂತತಿ ಇದೆ. ಇಲ್ಲಿನ ಸಫಾರಿ ತುಂಬಾ ಖ್ಯಾತವಾಗಿದ್ದು, ಮೈ ರೋಮಾಂಚನಗೊಳ್ಳುವ ಅನುಭವಗಳನ್ನು ನೀಡುತ್ತದೆ. ಜುನಾಗಢ ಜಿಲ್ಲೆಯಲ್ಲಿರುವ ಗಿರ್ ಗಿರಿಶ್ರೇಣಿಯ ತಳಭಾಗದಲ್ಲಿರುವ ಅತ್ಯಂತ ಸುಂದರ ವರ್ಣಮಯ ಅರಣ್ಯ ಪ್ರದೇಶ ಇದಾಗಿದೆ. 1,412 ಕಿ.ಮೀ. ವಿಸ್ತ್ರೀರ್ಣ ಹೊಂದಿದೆ. ಸಫಾರಿ ಪ್ರಿಯರಿಗೆ ಬಲು ಇಷ್ಟದ ಅರಣ್ಯಗಳಲ್ಲಿ ಇದು ಒಂದಾಗಿದೆ.
ರಾಷ್ಟ್ರಪಿತ ಮಹಾತ್ಮ ಗಾಂಧೀ ಅವರು 1917ರಲ್ಲಿ ಸ್ಥಾಪಿಸಿದ ಸಾಬರಮತಿ ಆಶ್ರಮ ಕೂಡ ಅತೀ ಹೆಚ್ಚು ಪ್ರವಾಸಿಗಳು ಆಗಮಿಸುವ ಪ್ರವಾಸಿ ಸ್ಥಳವಾಗಿದೆ. ಅಹಮದಾಬಾದ್ ನ ಸಾಬರಮರಿ ನದಿ ದಂಡೆಯಲ್ಲಿ ಈ ಆಶ್ರಮವಿದೆ. ಸಾಬರಮತಿಯಲ್ಲಿ ಮಗನ್ ನಿವಾಸ್, ಉಪಾಸನಾ ಮಂದಿರ, ಹೃದಯ್ ಕುಂಜ್, ವಿನೋಬಾ -ಮೀರಾ ಕುಟೀರ್, ನಂದಿನಿ, ಉದ್ಯೋಗ್ ಮಂದಿರ್, ಸೋಮನಾಥ್ ಛಾತ್ರಾಲಯ, ಶಿಕ್ಷಕರ ನಿವಾಸ್, ಗಾಂಧೀ ಸ್ಮಾರಕ್ ಸಂಗ್ರಹಾಲಯ, ವರ್ಣಚಿತ್ರಗಳ ಗ್ಯಾಲರಿ ಇಲ್ಲಿ ಗಾಂಧೀಜಿಯವರಿಗೆ ಸೇರಿದ ಪತ್ರಗಳು ಮತ್ತು ಛಾಯಾಚಿತ್ರಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಗಿದೆ.
ಈ ಕೆರೆಯನ್ನು ಸುಲ್ತಾನ್- ಖುತುಬ್-ಉದ್-ದಿನ್ ನ ಕಾಲದಲ್ಲಿ ನಿರ್ಮಿಸಲಾಗಿದೆ. ಕೆಳಭಾಗದಲ್ಲಿ ನಗಿನ ವಾಡಿ ಎಂಬ ದ್ವೀಪದಲ್ಲಿ ಬೇಸಗೆ ಅರಮನೆಯನ್ನು ನಿರ್ಮಿಸಲಾಗಿದೆ. ಈ ಅರಮನೆಯ ಸುತ್ತ ಒಂದು ಸುಂದರವಾದ ಉದ್ಯಾನವನವಿದೆ. ಈ ಕೆರೆಯು ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ. ದೋಣಿ ವಿಹಾರ ಕೇಂದ್ರ, ಮೃಗಾಲಯ ಮತ್ತು ಪ್ರಾಕೃತಿಕ ಇತಿಹಾಸದ ವಸ್ತು ಸಂಗ್ರಹಾಲಯವಿದೆ. ಇಡೀ ಕೆರೆಯ ಆವರಣದಲ್ಲಿ ಬಣ್ಣ ಬಣ್ಣದ ದೀಪದ ವ್ಯವಸ್ಥೆಯನ್ನು, ನೀರಿನ ಕಾರಂಜಿಗಳನ್ನು ಅಳವಡಿಸಲಾಗಿದೆ. ಮನಮೋಹಕ ಕೆರೆಗಳಲ್ಲಿ ಇದು ಒಂದಾಗಿದೆ.
ವಿಶ್ವದ ಅತಿ ಎತ್ತರದ ಪ್ರತಿಮೆ ಎಂದೇ ಗುರುತಿಸಲ್ಪಟ್ಟ ಏಕತಾ ಪ್ರತಿಮೆ ಇರುವುದು ಗುಜರಾತಿನ ಕೆವಾಡಿಯಾ ಪಟ್ಟಣದಿಂದ 3.5 ಕಿ.ಮೀ. ದೂರದಲ್ಲಿದೆ. ಭಾರತದ ಮೊದಲ ಉಪ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರಾದ ಮತ್ತು ಉಕ್ಕಿನ ಮನುಷ್ಯ ಎಂದೇ ಖ್ಯಾತಿಯಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆ ಇಲ್ಲಿದೆ. ಸದಾರರ್ ವಲ್ಲಭಭಾಯಿ ಪಟೇಲ್ ಅವರ 143ನೇ ಜನ್ಮ ದಿನಾಚರಣೆಯ ನೆನಪಿಗಾಗಿ ಅಕ್ಟೋಬರ್ 31, 2018ರಂದು ಈ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದರು. 3,000 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಹೀಗೆ ಗುಜರಾತ್‌ನಲ್ಲಿ 41ಕ್ಕೂ ಹೆಚ್ಚು ಪ್ರವಾಸಿತಾಣಗಳಿವೆ. ದೇಶ ವಿದೇಶಗಳಿಂದ ಸಾಕಾಷ್ಟು ಪ್ರಮಾಣದಲ್ಲಿ ಇಲ್ಲಿಗೆ ಜನ ಸಾಗರದಲ್ಲಿ ಹರಿ ಬರುತ್ತಾರೆ. ಇಲ್ಲಿನ ಸರಕಾರ ಕೂಡ ಪ್ರವಾಸೋದ್ಯಮವನ್ನು ಬಹಳಷ್ಟು ಅಭಿವೃದ್ಧಿ ಪಡಿಸಿದೆ. ಬಾಲಿವುಡ್ ಹೆಸರಾಂತ ನಟ ಅಭಿತಾಬ್ ಬಚ್ಚನ್ ಗುಜರಾತ್ ಪ್ರವಾಸೋದ್ಯಮದ ರಾಯಭಾರಿಯಾಗಿದ್ದಾರೆ. ಧನ್ಯಶ್ರೀ ಬೋಳಿಯಾರು