ಮಡಿಕೇರಿ: ಇಲ್ಲಿನ ಜೀವ ನದಿ ಕಾವೇರಿಯ ಒಡಲಿನಿಂದ ಟನ್‌ಗಟ್ಟಲೆ ತ್ಯಾಜ್ಯ ಪದಾರ್ಥಗಳನ್ನು ಹೊರ
ತೆಗೆಯುವ ಮೂಲಕ ಭಾಗಮಂಡಲ ದಲ್ಲಿ ನದಿ ಸ್ವತ್ಛತಾ ಕಾರ್ಯಕ್ಕೆ ಯುವ ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಚಾಲನೆ ನೀಡಿದರು.
ಬುಧವಾರ ಬೆಳಗ್ಗೆ ಕಾವೇರಿಯ ಉಗಮ ಸ್ಥಾನವಾದ ಶ್ರೀ ತಲಕಾವೇರಿ ಮತ್ತು ಸಂಗಮ ಕ್ಷೇತ್ರ ಭಾಗಮಂಡಲದ ಶ್ರೀ ಭಗಂಡೇಶ್ವರ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕಾವೇರಿಯ ಸ್ವತ್ಛತೆ ಮತ್ತು ಪಾವಿತ್ರ್ಯತೆಯನ್ನು ಸಂರಕ್ಷಿಸುವ ಸಂಕಲ್ಪದೊಂದಿಗೆ ನದಿಯ ಹರಿವಿನ ಪ್ರದೇಶಗಳಲ್ಲಿನ ಸ್ವತ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಕಾವೇರಿ ನದಿ ಸಾಗುವ ಹಾದಿಯಲ್ಲಿ ಬರುವ, ಮೂರ್ನಾಡು ಸನಿಹದ ಬಲ ಮುರಿಯ ಶ್ರೀ ಅಗಸ್ತೆಶ್ವರ ದೇವ ಸ್ಥಾನದ ಸಮೀಪವಿರುವ ಸೇತುವೆಯ ಬಳಿ ಚಕ್ರವರ್ತಿ ಸೂಲಿಬೆಲೆ, ಯುವ ಬ್ರಿಗೇಡ್‌ನ ಮೈಸೂರು ವಿಭಾಗದ ಪ್ರಮುಖರಾದ ಚಂದ್ರು ಮತ್ತು ಅವರೊಂದಿಗಿನ ನುರಿತ ಕಾರ್ಯಪಡೆ, ಕಾವೇರಿ ಸ್ವತ್ಛತಾ ಆಂದೋಲನದ ರಾಜ್ಯ ಸಂಚಾಲಕ ಚಂದ್ರಮೋಹನ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಮಡಿಕೇರಿಯ ಕ್ಲೀನ್ ಸಿಟಿ ಫೋರಂ ಅಧ್ಯಕ್ಷ ಚೆಯ್ಯಂಡ ಸತ್ಯ, ಗ್ರಾಮಸ್ಥರು ಸೇರಿದಂತೆ ಹಲವಾರು ಮಂದಿ ನದಿ ವ್ಯಾಪ್ತಿಯಲ್ಲಿದ್ದ ತ್ಯಾಜ್ಯವನ್ನು ಹೊರತೆಗೆಯುವ ಕಾರ್ಯದಲ್ಲಿ ಭಾಗಿಯಾದರು.
ಬಲಮುರಿ ಸೇತುವೆಯ ಬಳಿ ಯಲ್ಲಿ ಕಾವೇರಿಯಲ್ಲಿದ್ದ ಟನ್‌ಗಟ್ಟಲೆ ಪ್ಲಾಸ್ಟಿಕ್, ವಸ್ತ್ರಗಳ ರಾಶಿಯನ್ನು ಕಾರ್ಯ
ಕರ್ತರು ಹೊರತೆಗೆದು ಹಾಕುವ ಮೂಲಕ, ಜೀವನದಿ ಕಾವೇರಿ ನಿರಾಳ ವಾಗಿ ಉಸಿರಾಡಲು ಅವಕಾಶ ಮಾಡಿಕೊಟ್ಟರು.
ನದಿ ಹರಿವಿನ ಪ್ರದೇಶದ ಉದ್ದಕ್ಕೂ ಪುಣ್ಯ ಕ್ಷೇತ್ರಗಳಿದ್ದು, ಇಲ್ಲೆಲ್ಲ ಕಾವೇರಿಯ ದರ್ಶನಕ್ಕೆ ಬರುವ ಭಕ್ತಾದಿಗಳು ಧಾರ್ಮಿಕ ವಿಧಿ ವಿಧಾನಗಳ ಬಳಿಕ ತಾವೇ ಪೂಜಿಸುವ ಕಾವೇರಿಯಲ್ಲಿ ತೊಟ್ಟ ಬಟ್ಟೆಗಳನ್ನು ವಿಸರ್ಜಿಸಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯುತ್ತಿರುವುದು ಕಾವೇರಿ ಮಲಿನಗೊಳ್ಳಲು ಪ್ರಮುಖ ಕಾರಣವಾಗಿದೆ. ಈ ರೀತಿ ಮಲಿನ ಗೊಳ್ಳುತ್ತಿರುವ ಕಾವೇರಿಯನ್ನು ಸ್ವತ್ಛಗೊಳಿಸುವ ಇರಾದೆಯೊಂದಿಗೆ ಚಕ್ರವರ್ತಿ ಸೂಲಿಬೆಲೆ ಅವರು ಕೈಗೊಂಡಿರುವ ಅಭಿಯಾನಕ್ಕೆ ಬಲಮುರಿ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿರುವುದಲ್ಲದೆ, ಸ್ವತ್ಛತಾ ಕಾರ್ಯದಲ್ಲಿ ಕೈಜೋಡಿಸಿರು ವುದು ವಿಶೇಷವಾಗಿದೆ.
ಸ್ವತ್ಛತಾ ಕಾರ್ಯದಲ್ಲಿ ಮೂರ್ನಾಡು ಗೋ ಗ್ರೀನ್ ಫೋರಂ ಪ್ರಮುಖರಾದ ಅರುಣ್ ಅಪ್ಪಚ್ಚು, ಕ್ಲೀನ್‌ಸಿಟಿ ಫೋರಂನ ಮೋಂತಿ ಗಣೇಶ್, ಅಗಸೆŒà ಶ್ವರ ದೇವಸ್ಥಾನದ ಅಧ್ಯಕ್ಷರಾದ ಸಾಧು ತಿಮ್ಮಯ್ಯ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಉಷಾ ದೇವಮ್ಮ ಪಾಲ್ಗೊಂಡಿದ್ದರು.
ಸ್ವತ್ಛತೆ ಬಗ್ಗೆ ಅರಿವು
ಸ್ವತ್ಛತಾ ಕಾರ್ಯದ ಜತೆ ಸೂಲಿಬೆಲೆ ಮತ್ತು ಅವರ ಸಂಗಡಿಗರು ನದಿ ಹರಿವಿನ ಪ್ರದೇಶದ ಗ್ರಾಮಸ್ಥರದನ್ನು ಭೇಟಿಯಾಗಿ, ನದಿ ಸ್ವತ್ಛತೆಯ ಪ್ರಾಮುಖ್ಯತೆಯ ಬಗ್ಗೆ ಅವರಲ್ಲಿ ಅರಿವು ಮೂಡಿಸಿದರು.