Advertisement

ನಾಳೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ

11:54 AM May 14, 2018 | |

ಬೆಂಗಳೂರು: ಬೆಂಗಳೂರು ಜಲಮಂಡಳಿಯ ಕಾವೇರಿ ನೀರು ಸರಬರಾಜು ಯೋಜನೆ 1, 2 ಹಾಗೂ 3ನೇ ಹಂತದ ಟಿ.ಕೆ.ಹಳ್ಳಿ, ಹಾರೋಹಳ್ಳಿ ಹಾಗೂ ತಾತಗುಣಿಯ ಯಂತ್ರಾಗಾರಗಳ ಉನ್ನತೀಕರಣ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಮೇ 15ರ ಮಂಗಳವಾರ ಬೆಳಗ್ಗೆ 8ರಿಂದ ಸಂಜೆ 4 ಗಂಟೆ ನಗರದ ಹಲವು ಭಾಗಗಳಲ್ಲಿ ನೀರು ಪೂರೈಕೆಯಲ್ಲಿ ಭಾಗಶಃ ವ್ಯತ್ಯಯವಾಗಲಿದೆ. 

Advertisement

ಜಯನಗರ, ಜೆ.ಪಿ.ನಗರ, ಬಸವನಗುಡಿ, ಕೆ.ಎಸ್‌.ಬಡಾವಣೆ, ಬನಶಂಕರಿ 2 ಮತ್ತು 3ನೇ ಹಂತ, ಚಾಮರಾಜಪೇಟೆ, ಬನಗಿರಿನಗರ, ಹೊಸಕೆರೆಹಳ್ಳಿ, ಎಂ.ಎನ್‌.ಕೆ., ವಿ.ವಿ.ಪುರ, ಕುಮಾರಸ್ವಾಮಿ ಬಡಾವಣೆ, ಪದ್ಮನಾಭನಗರ, ಭೈರಸಂದ್ರ, ಜಾನ್ಸನ್‌ ಮಾರುಕಟ್ಟೆ, ಆಡುಗೋಡಿ, ದೊಮ್ಮಲೂರು, ಬಿಟಿಎಂ ಬಡಾವಣೆ, ಸಿ.ಎಲ್‌.ಆರ್‌., ಬಾಪೂಜಿನಗರ, ಮೈಸೂರು ರಸ್ತೆ, ಶ್ರೀರಾಂಪುರ, ಓಕಳಿಪುರ, ಇಂದಿರಾನಗರ 1ನೇ ಹಂತ, ಶ್ರೀನಗರ, ಹಲಸೂರು, ಶಾಂತಿನಗರ ಭಾಗಗಳಲ್ಲಿ ಮಂಗಳವಾರ ನೀರು ಪೂರೈಕೆಯಾಗುವುದಿಲ್ಲ. 

ಕೋರಮಂಗಲ, ಜಯನಗರ, ಚೋಳೂರು ಪಾಳ್ಯ, ಮೈಸೂರು ರಸ್ತೆ, ಜೀವನ್‌ ಭೀಮಾನಗರ, ವಿಲ್ಸನ್‌ ಗಾರ್ಡನ್‌ ರಸ್ತೆ, ಹೊಂಬೇಗೌಡನಗರ, ನೀಲಸಂದ್ರ, ಕೆ.ಆರ್‌.ಮಾರುಕಟ್ಟೆ ಪ್ರದೇಶ, ಯಶವಂತಪುರ, ಮಲ್ಲೇಶ್ವರ, ಮತ್ತಿಕೆರೆ, ಗೋಕುಲ್‌ ಎಕ್ಸ್‌ಟೆನನ್‌, ಜಯಮಹಲ್‌, ವಸಂತನಗರ, ಆರ್‌.ಎಸ್‌.ಪಾಳ್ಯ, ಜಾನಕಿರಾಮ ಬಡಾವಣೆ, ಲಿಂಗರಾಜಪುರ, ಮುತ್ಯಾಲನಗರ, ಆರ್‌.ಟಿ.ನಗರ, ಸಂಜಯ್‌ ನಗರ, ಸದಾಶಿವನಗರ, ಹೆಬ್ಟಾಳ,

ಪಾಲೆಸ್‌ ಗುಟ್ಟಳ್ಳಿ, ಭಾರತಿನಗರ, ಸುಧಾಮನಗರ, ಮಚಲೀಚೆಟ್ಟ, ಫ್ರೆಜರ್‌ಟೌನ್‌, ಪಿಳ್ಳಪ್ಪ ಗಾರ್ಡನ್‌, ಬನ್ನಪ್ಪ ಪಾರ್ಕ್‌, ಶಿವಾಜಿನಗರ, ಚಿಕ್ಕಲಾಲ್‌ಬಾಗ್‌, ಗವಿಪುರ, ಬ್ಯಾಟರಾಯನಪುರ, ಮೆಜೆಸ್ಟಿಕ್‌, ಕಸ್ತೂರಬಾ ರಸ್ತೆ, ಮಡಿವಾಳ, ಯೆಲಚೇನಹಳ್ಳಿ, ಇಸ್ರೋ ಬಡಾವಣೆ, ಪೂರ್ಣ ಪ್ರಜ್ಞಾ ಬಡಾವಣೆ, ಸಂಪಂಗಿರಾಮನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next