Advertisement

Fraud Case ಡ್ರಮ್‌ ಪೂರೈಕೆ ಮಾಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ

12:23 AM Jun 02, 2024 | Team Udayavani |

ಪುತ್ತೂರು: ನೀರು ತುಂಬಿಸುವ ಡ್ರಮ್‌ಗಳನ್ನು ಸರಬರಾಜು ಮಾಡುವುದಾಗಿ ನಂಬಿಸಿ ಕೃಷಿ ಉತ್ಪನ್ನ ಮಾರಾಟ ಸಂಸ್ಥೆಗೆ ಅಪರಿಚಿತರು ಲಕ್ಷಾಂತರ ರೂ. ವಂಚಿಸಿದ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಪುರುಷರಕಟ್ಟೆಯಲ್ಲಿರುವ ಅಗ್ರೋ ಉತ್ಪನ್ನಗಳನ್ನು ಮಾರಾಟ ಮಾಡುವ ಗಣೇಶ್‌ ಭಟ್‌ ವಂಚನೆಗೊಳಗಾದವರು.

ಗಣೇಶ್‌ ಭಟ್‌ ಅವರನ್ನು Unity Poly Barrels PVT Ltd Ashoka Nagar Shivaji Nagar Pune Maharsasthra ಎಂಬ ಹೆಸರಿನಿಂದ ಸಂಪರ್ಕಿಸಿದ ಅಪರಿಚಿತರು ಆನ್‌ ಲೈನ್‌ ಮೂಲಕ ಡ್ರಮ್‌ಗಳನ್ನು ಮಾರಾಟ ಮಾಡುವುದಾಗಿ ಹೇಳಿದ್ದರು. ಇದನ್ನು ನಂಬಿದ ಗಣೇಶ್‌ ಭಟ್‌ ಅವರು ಮೇ 8ರಿಂದ ಮೇ 10ರ ಒಳಗಡೆ 1,30,500 ರೂ. ಅನ್ನು ಮೂರು ಹಂತಗಳಲ್ಲಿ ಫೋನ್‌ ಪೇ ಮೂಲಕ ಅಪರಿಚಿತರ ಖಾತೆಗೆ ಕಳುಹಿಸಿದ್ದಾರೆ. ಹಣ ಪಾವತಿಸಿ 20 ದಿನ ಕಳೆದರೂ ಡ್ರಮ್‌ ಸರಬರಾಜು ಮಾಡಿಲ್ಲ ಎಂದು ಗಣೇಶ್‌ ಭಟ್‌ ಪುತ್ತೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next