Advertisement

ಟೊಮೆಟೋಗೆ ಫಸಲ್‌ ಬಿಮಾ ಬೇಡ

03:01 PM Apr 23, 2020 | mahesh |

ಕೋಲಾರ: ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಿಂದ ಜಿಲ್ಲೆಯ ಟೊಮೆಟೋ ಬೆಳೆಗಾರರಿಗೆ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಸರಕಾರ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗೆ ಅವಕಾಶ ಕಲ್ಪಿಸಬೇಕು ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ  ಬ್ಯಾಲಹಳ್ಳಿ ಗೋವಿಂದಗೌಡ ಮನವಿ ಮಾಡಿದರು.

Advertisement

ತಮ್ಮ ಕಚೇರಿಯಲ್ಲಿ ಫಸಲ್‌ ಬಿಮಾ ಯೋಜನೆ ಅಳವಡಿಕೆಗೆ ಸಂಬಂಧಿಸಿದಂತೆ ಸರ್ಕಾರದ ಸುತ್ತೋಲೆಯ ಸಾಧಕ ಬಾಧಕಗಳ ಕುರಿತು ತೋಟಗಾರಿಕಾ ಇಲಾಖೆ ಉಪನಿರ್ದೇಶಕರಾದ ಗಾಯತ್ರಿ ಅವರಿಂದ ಮಾಹಿತಿ ಪಡೆದು ಅವರು ಮಾತನಾಡಿದರು. ಜಿಲ್ಲೆಯ ರೈತರು ಟೊಮೆಟೋ ಬೆಳೆಯನ್ನು ನಿಗದಿಗಿಂತ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಫಸಲ್‌ ಬಿಮಾ ಯೋಜನೆಯಡಿ ವಿಮೆಯನ್ನು ಇಳುವರಿಗೆ ನೀಡುವುದರಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆಯ ಯಾವೊಬ್ಬ ಟೊಮೆಟೋ ಬೆಳೆಗಾರರು ಪರಿಹಾರಕ್ಕಾಗಿ ಕ್ಲೈಮ್‌ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ಬೆಳೆಯುವ ಟೊಮೆಟೋ ಹೆಕ್ಟೇರ್‌ಗೆ 4800 ರೂ. ನಂತೆ ವಿಮಾ ಕಂತು ಪಾವತಿಸಲು ರೈತರ ಸಾಲಕ್ಕೆ 16 ಕೋಟಿ ರೂ.ಗೂ ಹೆಚ್ಚು ಹಣ ಸೇರಿಕೊಳ್ಳುತ್ತದೆ. ಆದರೆ, ಪ್ರಯೋಜನ ಮಾತ್ರ ಶೂನ್ಯವಾದ್ದರಿಂದ ಇದರ ಅಳವಡಿಕೆ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಹವಾಮಾನ ಆಧಾರಿತ ವಿಮೆ ಉತ್ತಮ:
ತೋಟಗಾರಿಕಾ ಇಲಾಖೆ ಡಿಡಿ ಗಾಯತ್ರಿ ಮಾತನಾಡಿ, ಕೋಲಾರದ ರೈತರು ಟೊಮೇಟೋವನ್ನು ವಿಮೆ ಯೋಜನೆಯ ನಿಗಧಿಗಿಂತ ಉತ್ತಮ ಇಳುವರಿ ಪಡೆಯುವುದರಿಂದ ಫಸಲ್‌ ಭೀಮಾ ಯೋಜನೆ ಬದಲಿಗೆ ಹವಾಮಾನ ಆಧಾರಿತ ವಿಮಾ ಯೋಜನೆ ಅಳವಡಿಕೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದಕ್ಕೆ ಒಪ್ಪಿಗೆ ಸಿಕ್ಕರೆ ಜಿಲ್ಲೆಯ ಟೊಮೇಟೋ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದರು. ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ರವಿ, ಎಜಿಎಂಗಳಾದ ಖಲೀಮುಲ್ಲಾ, ನಾಗೇಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next