Advertisement
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 50 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿದರೆ, ಕಿವೀಸ್ ಕೇವಲ ಮೂರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
Related Articles
Advertisement
ಲ್ಯಾಥಂ- ಕೇನ್ ದಾಖಲೆ: ಭಾರತದ ಬೃಹತ್ ಗುರಿಯನ್ನು ಬೆನ್ನತ್ತಿದ ಕಿವೀಸ್ ಗೆ ಉತ್ತಮ ಆರಂಭವೇನು ಸಿಕ್ಕಿರಲಿಲ್ಲ. ಫಿನ್ ಅಲೆನ್ 22 ರನ್ ಮತ್ತು ಡೆವೋನ್ ಕಾನ್ವೆ 24 ರನ್ ಗಳಿಸಿ ಔಟಾದರು. ಡ್ಯಾರೆಲ್ ಮಿಚೆಲ್ ಕೂಡಾ ಕೇವಲ 11 ರನ್ ಔಟಾದರು. 88 ರನ್ ಆಗುವಷ್ಟರಲ್ಲಿ ಕಿವೀಸ್ ನ ಮೂರು ಹುದ್ದರಿ ಬಿದ್ದಿತ್ತು.
ಬಳಿಕ ಜೊತೆಯಾದ ನಾಯಕ ವಿಲಿಯಮ್ಸನ್ ಮತ್ತು ಕೀಪರ್ ಟಾಮ್ ಲ್ಯಾಥಂ ನಾಲ್ಕನೇ ವಿಕೆಟ್ ಗೆ ಅಜೇಯ ಜೊತೆಯಾಟ ನಡೆಸಿದರು. ಇವರಿಬ್ಬರು 221 ರನ್ ಗಳ ದಾಖಲೆಯ ಜೊತೆಯಾಟವಾಡಿದರು.
ಆರಂಭದಲ್ಲಿ ನಿಧಾನವಾಗಿ ಇನ್ನಿಂಗ್ ಕಟ್ಟಿದ ಇಬ್ಬರು ನಂತರ ದೊಡ್ಡ ಹೊಡೆತಗಳಿಗೆ ಕೈಹಾಕಿದರು. ಅದರಲ್ಲೂ ಕೊನೆಯಲ್ಲಿ ಸ್ಫೋಟಕವಾಗಿ ಆಡಿದ ಲ್ಯಾಥಂ ಶತಕ ಬಾರಿಸಿದರು. 104 ಎಸೆತ ಎದುರಿಸಿದ ಲ್ಯಾಥಂ ಐದು ಸಿಕ್ಸರ್ ನೆರವಿನಿಂದ ಅಜೇಯ 145 ರನ್ ಗಳಿಸಿದರು. ನಾಯಕ ವಿಲಿಯಮ್ಸನ್ 94 ರನ್ ಗಳಿಸಿ ಔಟಾಗದೆ ಉಳಿದರು.
ಭಾರತದ ಪರ ಇಂದು ಪದಾರ್ಪಣೆ ಮಾಡಿದ ಉಮ್ರಾನ್ ಮಲಿಕ್ ಎರಡು ವಿಕೆಟ್ ಕಿತ್ತರು. ಒಂದು ವಿಕೆಟ್ ಶಾರ್ದೂಲ್ ಠಾಕೂರ್ ಪಾಲಾಯಿತು.
ನ್ಯೂಜಿಲೆಂಡ್ ಎರಡನೇ ಬಾರಿಗೆ ಏಕದಿನದಲ್ಲಿ ಭಾರತದ ವಿರುದ್ಧ 300+ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದೆ. ಅತ್ಯಧಿಕ: 348 ಹ್ಯಾಮಿಲ್ಟನ್, 2020
ಕೇನ್ ಮತ್ತು ಲ್ಯಾಥಂ ಭಾರತದ ವಿರುದ್ಧ ಏಕದಿನ ಪಂದ್ಯದಲ್ಲಿ ನಾಲ್ಕನೇ ವಿಕೆಟ್ ಗೆ ಅತ್ಯಧಿಕ ರನ್ ಜೊತೆಯಾಟವಾಡಿದ ಸಾಧನೆ ಮಾಡಿದರು. 2009 ರಲ್ಲಿ ಸೆಂಚುರಿಯನ್ ನಲ್ಲಿ ಮೊಹಮ್ಮದ್ ಯೂಸುಫ್ ಮತ್ತು ಶೋಯೆಬ್ ಮಲಿಕ್ ಅವರ 206 ರನ್ ದಾಖಲೆ ಮುರಿಯಿತು.