Advertisement
ಅಂದಹಾಗೆ, ಕಾರ್ಟೂನ್‌ನಲ್ಲಿರುವ “ಟಾಮ್ ಅಂಡ್ ಜೆರ್ರಿ’ಗೂ ಸಿನಿಮಾವಾಗಿ ತೆರೆಗೆ ಬರುತ್ತಿರುವ “ಟಾಮ್ ಅಂಡ್ ಜೆರ್ರಿ’ಗೂ ಯಾವುದೇ ಸಂಬಂಧವಿಲ್ಲ. ಇದೊಂದು ಕಂಪ್ಲೀಟ್ ಯೂಥ್‌ಫುಲ್ ಸಬ್ಜೆಕ್ಟ್ ಸಿನಿಮಾವಾಗಿದ್ದು, “ಟಾಮ್ ಅಂಡ್ ಜೆರ್ರಿ’ ಥರದ ಕಿತ್ತಾಟ, ಗುದ್ದಾಟ, ಮುದ್ದಾಟ ಎಲ್ಲವೂ ಈ ಕಥೆಯಲ್ಲಿರುವುದರಿಂದ, ಸಿನಿಮಾದ ಸಬ್ಜೆಕ್ಟ್ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ತಮ್ಮ ಚಿತ್ರಕ್ಕೆ ಈ ಹೆಸರು ಇಟ್ಟಿದೆಯಂತೆ.
Related Articles
Advertisement
“ಟಾಮ್ ಅಂಡ್ ಜೆರ್ರಿ’ಯ ಬಗ್ಗೆ ಮಾತನಾಡುವ ನಿರ್ದೇಶಕ ರಾಘವ್ ವಿನಯ್ ಶಿವಗಂಗೆ, “ಜೀವನದ ಬೇರೆ ಬೇರೆ ಆಯಾಮಗಳ ಬಗ್ಗೆ ಈ ಸಿನಿಮಾದಲ್ಲಿ ಹೇಳಿದ್ದೇವೆ. ಗುರಾಯಿಸಿದವರಿಗೆ ಹೊಡೆಯುವಂತ ಹುಡುಗ, ಗುರಾಯಿಸಿದವರಿಗೆಲ್ಲ ಸ್ಮೈಲ್ ಮಾಡುವ ಹುಡುಗಿ – ಇವರಿಬ್ಬರ ಕೋಪ, ತಾಪ, ತರಲೆ, ತಮಾಷೆ, ತುಂಟತನವೇ “ಟಾಮ್ ಅಂಡ್ ಜೆರ್ರಿ’ ಸಿನಿಮಾದ ಹೈಲೈಟ್ಸ್.
ಸಿನಿಮಾದ ಪ್ರತಿ ಕ್ಯಾರೆಕ್ಟರ್, ಡೈಲಾಗ್ಸ್ ಮತ್ತು ಸೀನ್ಸ್ ನಮ್ಮ ನಡುವೆಯೇ ನಡೆಯುವಂತಿದ್ದು, ನೋಡುಗರ ಮನಮುಟ್ಟುತ್ತದೆ. ಸಂಪೂರ್ಣ ಮನರಂಜನಾತ್ಮಕ ಅಂಶಗಳನ್ನು ಇಟ್ಟುಕೊಂಡು ಒಂದೊಳ್ಳೆ ಸಿನಿಮಾವನ್ನು ನೋಡುಗರ ಮುಂದೆ ತರುತ್ತಿದ್ದೇವೆ’ ಎನ್ನುತ್ತಾರೆ. ಇನ್ನು ಕುಂದಾಪುರ ಮೂಲದ ಉದ್ಯಮಿ ರಾಜು ಶೇರಿಗಾರ್, “ರಿದ್ಧಿ ಸಿದ್ಧಿ ಫಿಲಂಸ್’ ಬ್ಯಾನರ್‌ನಲ್ಲಿ “ಟಾಮ್ ಅಂಡ್ ಜೆರ್ರಿ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಸದ್ಯ ಪ್ರಚಾರ ಕಾರ್ಯದಲ್ಲಿ ಬಿಝಿಯಾಗಿರುವ “ಟಾಮ್ ಅಂಡ್ ಜೆರ್ರಿ’ ಟೀಮ್ ಇದೇ ನವಂಬರ್ ಅಂತ್ಯದೂಳಗ ಚಿತ್ರವನ್ನು ತೆರೆಗೆ ತರುವ ಪ್ಲಾನ್ ಹಾಕಿಕೊಂಡಿದೆ.