Advertisement

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

06:56 PM Nov 16, 2024 | Team Udayavani |

ಬೆಂಗಳೂರು: ಬಿಗ್‌ಬಾಸ್‌ ಮನೆಯಲ್ಲಿ ಈ ವಾರ ಕಿಚ್ಚ ಸುದೀಪ್‌ (Kiccha Sudeep) ವಾರವಿಡೀ ನಡೆದ ಅನೇಕ ವಿಚಾರಗಳ ಬಗ್ಗೆ ಮಾತನಾಡಲಿದ್ದಾರೆ.

Advertisement

ವಾರದಲ್ಲಿ ನಡೆದ ಟಾಸ್ಕ್‌, ಈ ವೇಳೆ ನಡೆದ ಮಾತಿನ ವಾಗ್ವಾದ, ನಂಬಿಕೆ, ದ್ರೋಹ ಹೀಗೆ ನಾನಾ ವಿಚಾರಗಳ ಕುರಿತು ಕಿಚ್ಚ ಸ್ಪರ್ಧಿಗಳೊಂದಿಗೆ ಮಾತನಾಡಿ ಅನೇಕ ಸಂಗತಿಗಳ ಬಗ್ಗೆ ಪಾಠ ಮಾಡಲಿದ್ದಾರೆ.

ಚೈತ್ರಾ ಕುಂದಾಪುರ ಅವರು ಈ ವಾರ ಅತೀ ಹೆಚ್ಚು ಸುದ್ದಿಯಲ್ಲಿದ್ದರು. ಜೋಡಿ ಟಾಸ್ಕ್‌ನಲ್ಲಿ ಚೈತ್ರಾ ಅವರು ಶಿಶಿರ್‌ ಅವರ ಜತೆ ಬಿಟ್ಟು ತ್ರಿವಿಕ್ರಮ್‌ ಜತೆ ಆಡುತ್ತೇನೆ ಎಂದಿದ್ದರು. ಇದು ಚೈತ್ರಾ ಅವರ ಬೆನ್ನಿಗೆ ಚೂರಿ ಹಾಕುವ ಕೆಲಸವೆಂದು ಅನೇಕರು ವಾದಿಸಿದ್ದರು.

ಇದಲ್ಲದೆ ಅವರು ತಲೆ ತಿರುಗಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಆಸ್ಪತ್ರೆಯಲ್ಲೊ ಚಿಕಿತ್ಸೆ ಪಡೆಯುವ ವೇಳೆ ಅವರು ಅಲ್ಲಿನ ಸಿಬ್ಬಂದಿಗಳ ಬಗ್ಗೆ ಬಿಗ್‌ ಬಾಸ್‌ ಆಟದ ಬಗ್ಗೆ ಕೇಳಿದ್ದಾರೆ. ಇದು ಕಿಚ್ಚ ಅವರನ್ನು ಗರಂ ಆಗುವಂತೆ ಮಾಡಿದೆ.

Advertisement

ವಿಕ್ಕಿ ಅಣ್ಣ ನಿಮಗೆ ಎಲ್ಲೂ ಬೆಲೆ ಇಲ್ಲ ಬಿಡಿ. ಎಲ್ಲರೂ ನಾಟ್‌ ಓಕೆ ಎಂದು ಹೊರಗೆ ಕೇಳಿದ ಮಾತನ್ನು ಸ್ಪರ್ಧಿಗಳ ಬಳಿ ಹೇಳಿದ್ದಾರೆ.

ಇದಕ್ಕೆ ಕಿಚ್ಚ ಪಂಚಾಯ್ತಿಯಲ್ಲಿ ಇದೆಲ್ಲ ಹೇಳುವ ಉದ್ದೇಶವೇನು. ಕಥೆ ಹೇಳಿದ್ರಾ ಡಾಕ್ಟರ್ ಎಂದು ತರಾಟೆ ತೆಗೆದುಕೊಂಡಿದ್ದಾರೆ.

“ನಾನೇ ಡಾಕ್ಟರ್‌ ಹತ್ರ ಸ್ವಲ್ಪ ಕೇಳಿದ್ದೆ. ಅಲ್ಲಿದ್ದ ನರ್ಸ್‌ ಹತ್ರ ಹೀಗೆಯೇ ಕೇಳಿದಾಗ ಪ್ರತಿಯೊಬ್ಬರು ಅಭಿಪ್ರಾಯಗಳಲ್ಲೂ ನಾನು ಯಾವುದು, ನನ್ನ ಅಭಿಪ್ರಾಯವನ್ನು ಮಿಕ್ಸ್‌ ಮಾಡಿ ಹೇಳಿಲ್ಲವೆಂದಿದ್ದಾರೆ.

ಇದಕ್ಕೆ ಕಿಚ್ಚ ಅವರು ಶ್…‌ವೆಂದು ಸುಮ್ಮನೆ ಕೂರುವಂತೆ ಸನ್ನೆ ಮಾಡಿ ಹೇಳಿದ್ದಾರೆ. ಇದಕ್ಕೆ ಕಣ್ಣೀರಿಟ್ಟ ಚೈತ್ರಾ ಉಸಿರುಗಟ್ಟುವ ವಾತಾವರಣದಲ್ಲಿ ಇರುವುದ್ದಕ್ಕಿಂತ ಮನೆಗೆ ಹೋಗಬೇಕೆಂಥ ನಿರ್ಧಾರ ಮಾಡಿದ್ದೇನೆವೆಂದು ಕ್ಯಾಮರಾದ ಮುಂದೆ ಹೇಳಿದ್ದಾರೆ.

ಶನಿವಾರ ರಾತ್ರಿ 9:30ಕ್ಕೆ (ನ.16ರಂದು) ಈ ಸಂಚಿಕೆ ಪ್ರಸಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next