Advertisement
ಈಗಾಗಲೇ ಜಿಲ್ಲೆಯ ಖಾಸಗಿ ಬಸ್ ಮಾಲಕರನೇಕರು ತಮ್ಮ ಹೆವಿ ಮೊಟಾರು ವಾಹನಗಳನ್ನು ಮಾರಿ ಟೋಲ್ ಬರೆ ಇಳಿಸಿಕೊಳ್ಳುವ ನಿಟ್ಟಿನಲ್ಲಿ ಟಾಟಾ709, 807 ವಾಹನಗಳನ್ನು ಬಸ್ ಗಳನ್ನಾಗಿ ಪರಿವರ್ತಿಸಿ ಕರಾವಳಿ ಜಿಲ್ಲೆಗಳಲ್ಲಿ ತಮ್ಮ ಅಸ್ಮಿತೆ ಯನ್ನು ಮುಂದುವರಿಸಿದ್ದರು. ಈಗ ಅಂತಹಾ ವಾಹನಗಳಿಗೂ ಘನ ವಾಹನಗಳಷ್ಟೇ ಟೋಲ್ ಪಾವತಿಸಬೇಕಾಗಿದೆ. ಹಾಗಾಗಿ ತಾವು ಮುಂದಿನ ದಿನಗಳಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಂಡು ಸಂಪು ನಡೆಸು ವುದಾಗಿ ಬಸ್ ಮಾಲಕರ ಸಂಘಟನೆಯು ತಿಳಿಸಿದೆ.
Related Articles
ಎನ್‌ಐಟಿಕೆ ಸಮೀಪ ಸಂಚಾರ ಸರಾಗ
ಸುರತ್ಕಲ್ ಇಲ್ಲಿನ ಎನ್‌ಐಟಿಕೆ ಸಮೀಪದ ಟೋಲ್ ಕೇಂದ್ರದಲ್ಲಿ ಸುಂಕ ವಸೂಲಿ ನಿಂತ ಬಳಿಕವೂ ತುಂಬ ಸಮಯದಿಂದ ಅಪಾಯಕಾರಿಯಾಗಿ ಉಳಿದಿದ್ದ ಅವಶೇಷಗಳನ್ನು ಕೊನೆಗೂ ತೆರವು ಮಾಡಲಾಗಿದೆ. ರಸ್ತೆ ಮೇಲಿದ್ದ ಬೂತ್ ಬೆಡ್, ರಸ್ತೆ ವಿಭಾಜಕ, ರಸ್ತೆ ಉಬ್ಬುಗಳ ಸಹಿತ ಎಲ್ಲ ಪಳಿಯುಳಿಕೆಗಳು ತೆರವಾಗಿ ಸಂಚಾರ ಸುಗಮವಾಗಿದೆ.
Advertisement
ಸುಂಕ ವಸೂಲಿ ನಿಂತ ವರ್ಷಗಳ ಬಳಿಕ ಶೆಲ್ಟರನ್ನು ಇತ್ತೀಚೆಗೆ ಕಳಚಿದ್ದರೂ ರಸ್ತೆಯ ಮೇಲಿರುವ ಡಿವೈಡರ್ ಹಾಗೂ ಬೂತ್ ಬೆಡ್ ಹಾಗೆಯೇ ಉಳಿದು ಅವುಗಳಿಗೆ ವಾಹನ ಢಿಕ್ಕಿ ಹೊಡೆಯುತ್ತಿದ್ದವು. ಅವಶೇಷಗಳಿಂದಾಗಿ ಒಂದು ತಿಂಗಳಲ್ಲಿ ಬರೋಬ್ಬರಿ 6 ಅಪಘಾತಗಳು ಸಂಭವಿಸಿದ ದಾಖಲೆಯೂ ಇದೆ. ಇಲ್ಲಿ ಬೀದಿ ದೀಪವೂ ಇಲ್ಲದಿರುವುದೂ ಅಪಘಾತ ಹೆಚ್ಚಳಕ್ಕೆ ಕಾರಣವಾಗಿತ್ತು. ಈ ಬಗ್ಗೆ ಉದಯವಾಣಿ ಸವಿವರ ವರದಿ ಮಾಡಿ ಗಮನ ಸೆಳೆದಿತ್ತು.“ಶುಲ್ಕ ವಸೂಲಾತಿ ಕೇಂದ್ರ’ ಎಂಬ ಎರಡು ಬೃಹತ್ ಫಲಕಗಳು ಮಾತ್ರ ಈಗಲೂ ರಾರಾಜಿಸುತ್ತಿವೆ. ಇದರಿಂದ ವಾಹನಗಳ ಸಂಚಾರಕ್ಕೆ ಯಾವುದೇ ಸಮಸ್ಯೆ ಇಲ್ಲದಿದ್ದರೂ ಟೋಲ್ ಕೇಂದ್ರ ಇತ್ತೆಂಬ ಮಾಹಿತಿ ಕೊಡುತ್ತಿದೆ. ಈ ಭಾಗದಲ್ಲಿ ದಾರಿ ದೀಪದ ಕೊರತೆಯನ್ನು ನಿವಾರಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ. ಎನ್‌ಐಟಿಕೆಯ ನೂರಾರು ವಿದ್ಯಾರ್ಥಿಗಳು ರಸ್ತೆ ದಾಟುವ ಪ್ರಮುಖ ಸ್ಥಳ ಇದಾಗಿದ್ದು, ವಾಹನಗಳು ವೇಗವಾಗಿ ಬರುವ ಸಂದರ್ಭ ಅವಘಡ ಸಂಭವಿಸದಂತೆ ರಕ್ಷಣೆ ಒದಗಿಸಬೇಕಿದೆ.