ಕಾಠ್ಮಂಡು: ನೇಪಾಳ ವಿಮಾನ ದುರಂತದಲ್ಲಿ 72 ಮಂದಿ ಸಜಿವ ದಹನವಾದ ಬಳಿಕ ಒಂದೊಂದು ಕರುಣಾಜನಕ ಕಥೆ ಹೊರಬೀಳುತ್ತಿದೆ.
ಕಳೆದ ಎರಡು ವರ್ಷದಿಂದ ಯೇಟಿ ಏರ್‌ಲೈನ್ಸ್ ನಲ್ಲಿ ಗಗನ ಸಖಿ ಆಗಿ ಕೆಲಸ ಮಾಡುತ್ತಿದ್ದ ಓಶಿನ್(24) 72 ಮಂದಿಯೊಂದಿಗೆ ಸಜೀವ ದಹನವಾಗಿದ್ದಾಳೆ.
ಭಾರತದಲ್ಲಿ ಕಲಿತ ನೇಪಾಳದ ಚಿತ್ವಾನ್ ನ ಮಡಿ ಪ್ರದೇಶದ ಓಶಿನ್ ಭಾನುವಾರ ಸಂಕ್ರಾಂತಿ ಹಬ್ಬದಂದು ಕೆಲಸಕ್ಕೆ ಹೋಗಿದ್ದರು. ಮುಂಜಾನೆ ಓಶಿನ್ ಅವರ ತಂದೆ ಇವತ್ತು ವಿಶೇಷವಾದ ದಿನ ಕೆಲಸಕ್ಕೆ ಹೋಗುವುದು ಬೇಡ, ಕುಟುಂಬದೊಂದಿಗೆ ಇದ್ದು ಸಮಯ ಕಳಿ ಎಂದು ಹೇಳಿದ್ದಾರೆ. ಎರಡು ವಿಮಾನಯಾನವನ್ನು ಮುಗಿಸಿ ಮನೆಗೆ ಬಂದು ಹಬ್ಬವನ್ನು ನಿಮ್ಮೊಂದಿಗೆ ಆಚರಿಸುತ್ತೇನೆ ಎಂದು ಅಪ್ಪ – ಅಮ್ಮನ ಬಳಿ ಹೇಳಿ ಹೋಗಿದ್ದಾಳೆ. ಆದರೆ ಮರಳಿ ಬಂದದ್ದು ಮಾತ್ರ ಆಕೆಯ ಸುಟ್ಟು ಕರಕಲಾದ ಮೃತದೇಹ ಮಾತ್ರ.
ಇದನ್ನೂ ಓದಿ: ಮನೆ ಮೇಲೆ ಗುಂಡಿನ ದಾಳಿ: 6 ತಿಂಗಳ ಹಸುಳೆ, ತಾಯಿ ಸೇರಿ ಆರು ಮಂದಿ ದುರಂತ ಅಂತ್ಯ
ಮಗಳನ್ನು ಹೋಗಬೇಡ ಎಂದು ಹೇಳಿದರೂ ಆಕೆ, ಮಾತು ಕೇಳದೆ ಈಗ ಬರುತ್ತೇನೆ ಎಂದು ಹೇಳಿ ಹೋದಳು ಎಂದು ದುಃಖಿಸುತ್ತಾ ಸ್ಥಳೀಯ ಮಾಧ್ಯಮವೊಂದಕ್ಕೆ ಓಶಿನ್ ತಂದೆ ಮೋಹನ್ ಅಲೆ ಮಗರ್ ಹೇಳಿದ್ದಾರೆ.
ಎರಡು ವರ್ಷದ ಹಿಂದೆ ಮದುವೆಯಾದ ಓಶಿನ್ ಕೆಲಸದ ನಿಮಿತ್ತ ಊರಿನಲ್ಲೇ ಇದ್ದರು. ಇವರ ಪತಿ ಅಮೆರಿಕಾದಲ್ಲಿ ನೆಲೆಸಿದ್ದಾರೆ.
ಟಿಕ್ ಟಾಕ್ ನಲ್ಲೂ ಓಶಿನ್ ಅವರು ಖ್ಯಾತಿಯನ್ನು ಪಡೆದಿದದ್ದರು. ಸಾವಿರಾರು ಫಾಲೋವರ್ಸ್ ಗಳನ್ನು ಹೊಂದಿದ್ದರು.