Advertisement

ಮುಂದಿನ ವರ್ಷ ಜುಲೈ 23 ರಿಂದ ಆಗಸ್ಟ್ 8ರವರೆಗೆ ನಡೆಯಲಿದೆ ಟೋಕಿಯೋ ಒಲಂಪಿಕ್ಸ್

09:45 AM Mar 31, 2020 | Hari Prasad |

ಟೋಕಿಯೋ: ವಿಶ್ವವ್ಯಾಪಿಯಾಗಿರುವ ಕೋವಿಡ್ 19 ವೈರಸ್ ಮಹಾಮಾರಿಯಿಂದಾಗಿ ಮುಂದೂಡಲ್ಪಟ್ಟಿದ್ದ ಒಲಂಪಿಕ್ಸ್ ಕ್ರೀಡಾಕೂಟ 2021ರ ಜುಲೈ ತಿಂಗಳಿನಿಂದ ಆಗಸ್ಟ್ ವರೆಗೆ ನಡೆಯಲಿದೆ. ಅಂತಾರಾಷ್ಟ್ರೀಯ ಒಲಂಪಿಕ್ಸ್ ಸಮಿತಿ ಮತ್ತು ಕ್ರೀಡಾಕೂಟ ಆಯೋಜಕರು ಜಂಟಿಯಾಗಿ ಈ ನಿರ್ಧಾರವನ್ನು ಇಂದು ಪ್ರಕಟಿಸಿದ್ದಾರೆ.

Advertisement

ಈ ಮೂಲಕ ಕಳೆದ 124 ವರ್ಷಗಳಲ್ಲಿ ಇದೇ ಮೊದಲ ಬಾರಿಗೆಂಬಂತೆ ಆಧುನಿಕ ಒಲಂಪಿಕ್ಸ್ ಕ್ರೀಡಾಕೂಟವು ಮುಂದೂಡಲ್ಪಟ್ಟಂತಾಗಿದೆ. ಮತ್ತು ಇದರಿಂದ ಕ್ರೀಡಾಕೂಟವನ್ನು ಆಯೋಜಿಸುತ್ತಿರುವ ಜಪಾನ್ ದೇಶಕ್ಕೆ ಆರ್ಥಿಕವಾಗಿ ಭಾರೀ ಹೊಡೆತ ಬೀಳಲಿದೆ. ಜಪಾನ್ ಈಗಾಗಲೇ ಈ ಮಹಾನ್ ಕೂಟವನ್ನು ನಡೆಸುವುದಕ್ಕಾಗಿ 13 ಬಿಲಿಯನ್ ಡಾಲರ್ ಗಳಷ್ಟು ಬಂಡವಾಳವನ್ನು ವಿನಿಯೋಗಿಸಿದೆ ಮಾತ್ರವಲ್ಲದೇ ದೇಶೀ ಪ್ರಾಯೋಜಕರಿಂದ 3 ಬಿಲಿಯನ್ ಡಾಲರ್ ಗಳಷ್ಟು ಮೊತ್ತದ ಪ್ರಾಯೋಜಕತ್ವವನ್ನು ಪಡೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next