Advertisement

ಅಧಿಕಾರಿಗಳ ಕೈಯಲ್ಲಿ ಶೌಚಾಲಯದ ಬೀಗ

07:21 AM Jun 15, 2020 | Lakshmi GovindaRaj |

ಮಾಗಡಿ: ಪಟ್ಟಣದ ಹೃದಯ ಭಾಗದಲ್ಲಿ ಬಹು ದೊಡ್ಡ ಸರ್ಕಾರಿ ಕಚೇರಿ ಸಂಕೀರ್ಣವಿದ್ದರೂ ಮೂತ್ರ ವಿಸರ್ಜನೆಗೆ ಸಾರ್ವಜನಿಕರು ಪರದಾಡಬೇಕಾಗಿದೆ. ಈ ಕಚೇರಿ ಸಂಕೀರ್ಣದಲ್ಲಿ ಹತ್ತಾರು ಸರ್ಕಾರಿ ಇಲಾಖೆಗಳು ಕಾರ್ಯನಿರ್ವ ಹಿಸುತ್ತಿವೆ. ತಾಲೂಕಿನ ಬಹುತೇಕ ಸಾರ್ವ ಜನಿಕರು ತಮ್ಮ ದಿನ ನಿತ್ಯದ ಕೆಲಸಕ್ಕೆ ಒಂದಲ್ಲ ಒಂದು ಕಚೇರಿಗೆ ಆಗಮಿಸುತ್ತಲೇ ಇರುತ್ತಾರೆ.

Advertisement

ಅದರಲ್ಲೂ ಪ್ರಮುಖವಾಗಿ ಉಪನೊಂದಣಾ ಧಿಕಾರಿ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಶಿಶು  ಭಿವೃದಿಟಛಿ ಇಲಾಖೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬರುತ್ತಿರುತ್ತಾರೆ. ಬಹುತೇಕ ಎಲ್ಲಾ ಕಚೇರಿಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಶೌಚಾಲಯಗಳಿವೆ. ಆದರೆ ಕಚೇರಿಗೆ ಬರುವ ಸಾರ್ವಜನಿಕರು ನಿತ್ಯ ದೇಹಬಾಧೆಯ  ಕಷ್ಟ ಅನುಭವಿಸುತ್ತಿದ್ದಾರೆ.

ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರಿ ಕಚೇರಿಗಳು ಇರುವುದು. ಆದರೆ ತಮ್ಮ ದಿನ ನಿತ್ಯದ ಕೆಲಸಕ್ಕಾಗಿ ಬರುವ ಸಾರ್ವಜನಿಕರು ಮಲಮೂತ್ರ ವಿಸರ್ಜನೆ ಮಾಡಲು ಶೌಚಾಲಯವಿಲ್ಲದೆ ಪರದಾಡುತ್ತಾ ಕಚೇರಿ ಕಟ್ಟಡದ ಕೆಳಗೋ ಅಥವಾ ಗೋಡೆಯನ್ನೋ ಆಶ್ರಯಿಸಬೇಕಿದೆ. ಇನ್ನು ಮಕ್ಕಳು- ಮಹಿಳೆಯರ ಪಾಡಂತೂ ಹೇಳತೀರದು ಕಚೇರಿ ಆವರಣದಲ್ಲಿ ಶೌಚಾಲಯವಿಲ್ಲದ ಕಾರಣ ಸಾರ್ವಜನಿಕರು ದೇಹಭಾದೆ ಅನುಭವಿಸುತ್ತಿದ್ದಾರೆ.

ಕೇಂದ್ರ ಸರ್ಕಾರ ನರೇಗಾ ಯೋಜನೆಯಡಿ ಸಹಾಯಧನ ಪಡೆದು ಉಚಿತವಾಗಿ ತಮ್ಮ ಮನೆಗಳಲ್ಲಿ ಶೌಚಾಲಯ ಕಟ್ಟಿಸಿಕೊಂಡು ಬಳಸಿ ಬಯಲು ಮುಕ್ತ ಶೌಚಾಲಯ ಮಾಡುವಂತೆ ಕರೆ ನೀಡುತ್ತಿದ್ದಾರೆ. ಜಾಗತೀಕರಣ ಮತ್ತು ಆಧುನಿಕತೆ ಯಲ್ಲಿಯೂ ಸಾರ್ವಜನಿಕರು ಮಲಮೂತ್ರ ವಿಸರ್ಜನೆಗೆ ಬಯಲನ್ನೇ ಆಶ್ರಿಯಿಸುವ ಪರಿಸ್ಥಿತಿ ಎದುರಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆಂದು ದೂರಿದರು.

ಹಾರಿಕೆ ಉತ್ತರ: ಸರ್ಕಾರಿ ಕಚೇರಿ ಸಂಕೀರ್ಣದಲ್ಲಿ ಶೌಚಾಲಯಗಳಿವೆ. ಸಂಬಂಧಪಟ್ಟ ಅಧಿಕಾರಿಗಳು ಬೀಗ ಹಾಕಿಕೊಂಡು ಅವರು ಮತ್ತು ಸಿಬ್ಬಂದಿ ಮಾತ್ರ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕರು ಕೇಳಿದರೆ ನೀರಿಲ್ಲ, ಅದಕ್ಕೆ ಬೀಗ  ಹಾಕಿದ್ದೇವೆ ಎಂದು ಹಾರಿಕೆ ಉತ್ತರ ಕೊಟ್ಟು ಬಾಯಿ ಮುಚ್ಚಿಸುತ್ತಾರೆ. ನೀರಿದ್ದರೂ ಸಾರ್ವಜನಿಕರ ಬಳಕೆಗೆ ಬೀಗ ಕೊಡುತ್ತಿಲ್ಲ, ಸಂಬಂಧಪಟ್ಟ ಶಾಸಕರು ಇತ್ತ ಗಮನಹರಿಸಿ ಶೌಚಾಲಯಕ್ಕೆ ಹಾಕಿರುವ ಬೀಗ ಕಿತ್ತೆಸೆದರೆ  ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಪ್ರತ್ಯೇಕ ಶೌಚಾಲಯವನ್ನು ಕಚೇರಿ ಆವರಣದಲ್ಲಿ ಶಾಸಕರೇ ಕಟ್ಟಿಸಿಕೊಡಲಿ ಎಂದು ರೈತಸಂಘದ ಮಧುಗೌಡ ಮನವಿ ಮಾಡಿದ್ದಾರೆ.

Advertisement

ಸರ್ಕಾರಿ ಕಚೇರಿ ಕಟ್ಟಡದಲ್ಲಿ ಶೌಚಾಲಯವಿದೆ. ಸಾರ್ವಜನಿ ಕರು ಮಲಮೂತ್ರ ವಿಸರ್ಜನೆ ಮಾಡಿ ಸರಿಯಾಗಿ ನೀರು ಹಾಕದೆ ಗಲೀಜು ಮಾಡಿ ಹೋಗುತ್ತಾರೆ. ಸ್ವಚ್ಛತೆ ಮಾಡುವ ಸಿಬ್ಬಂದಿಗಳಿಲ್ಲ, ತಾವು ಉಪಯೋಗಿಸಿದ ಮೇಲೆ  ನೀರು ಹಾಕಿ ಸ್ವಚ್ಛತೆಗೆ ಸಹರಿಸುವಂತೆ ತಿಳಿ ಹೇಳುತ್ತಿದ್ದೇವೆ. ಆದರೂ ಸ್ವಚ್ಛತೆ ಕಾಪಾಡುತ್ತಿಲ್ಲ. 
-(ಹೆಸರೇಳಲು ಇಚ್ಚಿಸದ ಅಧಿಕಾರಿ)

* ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next