Advertisement

ಟಾಯ್ಲೆಟ್‌ ಕೆಫೆ ತೆರೆದ ಸಾಧ್ವಿ

12:30 AM Jan 20, 2019 | Team Udayavani |

ಪ್ರಯಾಗ್‌ರಾಜ್‌: ಅಮೆರಿಕದ ಸ್ಟಾನ್‌ಫೋರ್ಡ್‌ ವಿವಿ ಪದವೀಧರೆಯೊಬ್ಬರು ಸಾಧ್ವಿಯಾಗಿ ಬದಲಾಗಿದ್ದು, ಕುಂಭಮೇಳದಲ್ಲಿ “ಟಾಯ್ಲೆಟ್‌ ಕೆಫೆಟೇರಿಯಾ’ ಸ್ಥಾಪಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದ ರಲ್ಲೇನು ವಿಶೇಷ ಎಂದು ಕೇಳುತ್ತಿದ್ದೀರಾ?

Advertisement

ವಿಶೇಷವಿದೆ. ಇವರು ದೇಶದ ಜನತೆಗೆ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲೆಂದೇ ಇದನ್ನು ಸ್ಥಾಪಿಸಿದ್ದಾರೆ. ಇದೊಂದು ವಿಶಿಷ್ಟ ಕೆಫೆಯಾಗಿದ್ದು, ಇಲ್ಲಿರುವ ಕುರ್ಚಿಗಳು ಶೌಚಾಲಯದ ಕಮೋಡ್‌ ಮಾದರಿಯಲ್ಲಿವೆ. ಅದರ ಮೂಲಕ ಜನರಿಗೆ ಶೌಚಾಲಯವನ್ನು ಬಳಸುವಂತೆ ಮತ್ತು ಬಯಲು ಶೌಚಕ್ಕೆ ಅಂತ್ಯ ಹಾಡುವಂತೆ ಕರೆ ನೀಡುತ್ತಿದ್ದಾರೆ ಈ ಸಾಧ್ವಿ. ಈ ಕುರಿತು ಮಾತನಾಡಿದ ಅವರು, 1996 ರಲ್ಲಿ ರಿಷಿಕೇಷ್‌ಗೆ ಭೇಟಿ ಕೊಟ್ಟ ಬಳಿಕ ಹಿಂದೂ ಧರ್ಮದಿಂದ ಪ್ರೇರಿತಳಾಗಿ ಸನ್ಯಾಸಿಯಾದೆ. ಈಗ ಎಲ್ಲರೂ ನನ್ನನ್ನು ಸಾಧ್ವಿ ಭಗವತಿ ಸರಸ್ವತಿ ಎಂದು ಸಂಬೋಧಿಸುತ್ತಾರೆ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next