Advertisement

ಬಿಜೆಪಿ ಸೋಲಿಸಲು ಗೋವಾದ ಎಲ್ಲರೂ ಒಂದಾಗುವ : ಮಮತಾ ಬ್ಯಾನರ್ಜಿ

12:13 PM Oct 23, 2021 | Team Udayavani |

ಕೋಲ್ಕತಾ : ಗೋವಾದಲ್ಲಿ ಬಿಜೆಪಿ ಮತ್ತು ಅದರ ವಿಭಜಿಸುವ ಕಾರ್ಯಸೂಚಿಯನ್ನು ಸೋಲಿಸಲು ಎಲ್ಲಾ ವ್ಯಕ್ತಿಗಳು, ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಒಂದಾಗಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಶನಿವಾರ ಕರೆ ನೀಡಿದ್ದಾರೆ

Advertisement

”ನಾನು 28 ರಂದು ಗೋವಾಕ್ಕೆ ನನ್ನ ಮೊದಲ ಭೇಟಿಗೆ ತಯಾರಿ ನಡೆಸುತ್ತಿದ್ದು, ಬಿಜೆಪಿ ಮತ್ತು ಅದರ ವಿಭಜಿಸುವ ಕಾರ್ಯಸೂಚಿಯನ್ನು ಸೋಲಿಸಲು ಎಲ್ಲಾ ವ್ಯಕ್ತಿಗಳು, ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳಿಗೆ ಒಂದಾಗಲು ಕರೆ ನೀಡುತ್ತೇನೆ. ಕಳೆದ 10 ವರ್ಷಗಳಲ್ಲಿ ಗೋವಾದ ಜನರು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ.” ಎಂದು ಟ್ವೀಟ್ ಮಾಡಿದ್ದಾರೆ.

”ನಾವೆಲ್ಲ ಒಟ್ಟಾಗಿ ಹೊಸ ಸರ್ಕಾರವನ್ನು ರಚಿಸುವ ಮೂಲಕ ಗೋವಾಕ್ಕೆ ಹೊಸ ಉದಯವನ್ನು ತರುತ್ತೇವೆ ಅದು ನಿಜವಾಗಿಯೂ ಗೋವಾದ ಜನರ ಸರಕಾರವಾಗಿರುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

ಗೋವಾದಲ್ಲಿ ಮಾಜಿ ಮುಖ್ಯಮಂತ್ರಿ ಲುಯಿಜಿನ್ ಫಾಲೆರೊ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಈಗಾಗಲೇ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.ಫಾಲೆರೊರವರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನಿಯುಕ್ತಿಗೊಳಿಸಿದ್ದು, ಭರ್ಜರಿಯಾಗಿ ಪಕ್ಷ ಸಂಘಟನೆಯಲ್ಲಿ ನಿರತವಾಗಿದೆ. ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣಾ ಎದುರಿಸಲು ಮುಂದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next