Advertisement

‘ಟುಡೇಸ್‌ ಚಾಣಕ್ಯ’ BJP ಅಧ್ಯಕ್ಷ ಅಮಿತ್‌ ಶಾ 54; ಪ್ರಧಾನಿ ಅಭಿನಂದನೆ

11:53 AM Oct 22, 2018 | udayavani editorial |

ಪಣಜಿ  : ಕೇಂದ್ರ ಆಯುಷ್‌ ಸಚಿವ ಶ್ರೀಪಾದ್‌ ನಾಯಕ್‌ ಅವು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರನ್ನು “ಟುಡೇಸ್‌ ಚಾಣಕ್ಯ’ ಎಂದು ಕರೆಯುವ ಮೂಲಕ ಶಾ ಅವರಿಗೆ 54ನೇ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

Advertisement

ಉತ್ತರ ಗೋವೆಯ ಬಿಜೆಪಿ ಲೋಕಸಭಾ ಸದಸ್ಯರಾಗಿರುವ ನಾಯಕ್‌ ಅವರು ಟ್ವಿಟರ್‌ ಮೂಲಕ ಶಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ “ನಮ್ಮ ಪ್ರಧಾನ್‌ ಸೇವಕ್‌ (ಪ್ರಧಾನಿ ಮೋದಿ) ಅವರ ವಿಜಯ ರಥವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಇಂದಿನ ಚಾಣಕ್ಯ’ ಎಂದು ಶಾ ಅವರನ್ನು ಅಭಿನಂದಿಸಿದ್ದಾರೆ. “ಪಕ್ಷದ ಕಾರ್ಯಕರ್ತರೊಂದಿಗಿನ ನೇರ ವೈಯಕ್ತಿಕ ಸಂಬಂಧ ಮತ್ತು ನಿಮ್ಮ ಸಿದ್ಧಾಂತಗಳಿಗೆ ನೀವು ಹೊಂದಿರುವ ಬದ್ಧತೆಯಿಂದಾಗಿ ನೀವು “ಟುಡೇಸ್‌ ಚಾಣಕ್ಯ’ ಆಗಿರುವಿರಿ’ ಎಂದು ನಾಯಕ್‌ ಪ್ರಶಂಸೆಯ ಮಾತುಗಳನ್ನು ಬರೆದಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಅಮಿತ್‌ ಶಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ನಿಮ್ಮ ಕಠಿನ ಪರಿಶ್ರಮ ಪಕ್ಷಕ್ಕೊಂದು ಆಸ್ತಿ ಎಂದು ಪ್ರಶಂಸಿಸಿದ್ದಾರೆ. 

“ಅಮಿತ್‌ ಭಾಯಿ ನಾಯಕತ್ವದಿಂದಾಗಿ ಇಂದು ಬಿಜೆಪಿ ರಾಷ್ಟ್ರದ ಉದ್ದಗಲಕ್ಕೆ ವ್ಯಾಪಿಸಿಕೊಂಡಿದೆ. ಈ ದಿಶೆಯಲ್ಲಿನ ಅವರ ಪ್ರಯತ್ನ ಮತ್ತು ಕಠಿನ ಪರಿಶ್ರಮ ಪಕ್ಷಕ್ಕೆ ಆಸ್ತಿಯಾಗಿದೆ’ ಎಂದು ಹೇಳಿರುವ ಪ್ರಧಾನಿ, ಅಮಿತ್‌ ಶಾಗೆ ದೀರ್ಘ‌ ಆಯುರಾರೋಗ್ಯ ಹಾರೈಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next