Advertisement

ಇಂದು ಮಹಾಲಯ ಅಮಾವಾಸ್ಯೆ, ನಾಳೆಯಿಂದ ಶರನ್ನವರಾತ್ರಿ ಉತ್ಸವ

11:14 AM Sep 25, 2022 | Team Udayavani |

ಉಡುಪಿ: ಪಿತೃಗಳಿಗೆ ವಿಶೇಷ ಮಹತ್ವವಾದ ಪಿತೃಪಕ್ಷ (15 ದಿನಗಳು) ಸೆ. 25ರಂದು ಮಹಾಲಯ ಅಮಾವಾಸ್ಯೆ ದಿನ ಮುಕ್ತಾಯಗೊಳ್ಳುತ್ತಿದ್ದು, ಸೆ. 26ರಂದು ನವರಾತ್ರಿ ಸಡಗರ ಆರಂಭಗೊಳ್ಳುತ್ತಿದೆ.

Advertisement

ಈ 15 ದಿನಗಳ ಕಾಲ ಯಾವುದೇ ಶುಭಕಾರ್ಯಗಳನ್ನು ಸಾಮಾನ್ಯವಾಗಿ ನಡೆಸುವುದಿಲ್ಲ. ಈ ದಿನಗಳಲ್ಲಿ ಏನಿದ್ದರೂ ಅಗಲಿದ ಹಿರಿಯರ ಸ್ಮರಣೆ ಸಂಬಂಧಿತ ಕರ್ಮಾಂಗಗಳು ನಡೆಯುತ್ತವೆ. ಮಹಾಲಯ ಅಮಾವಾಸ್ಯೆಯಂದು ಕಡಲ ಕಿನಾರೆಗಳಲ್ಲಿ ಪಿತೃ ಸಂಬಂಧಿತ ಕಾರ್ಯಕ್ರಮಗಳು ನಡೆಯುತ್ತವೆ. ಅಮಾವಾಸ್ಯೆ ದಿನ ಸಮುದ್ರಸ್ನಾನ ಪ್ರಶಸ್ತ ಆಗಿರುವುದರಿಂದ ಪಿತೃ ಕಾರ್ಯಕ್ರಮಗಳೊಂದಿಗೆ ಸಮುದ್ರ ಸ್ನಾನವನ್ನೂ ನಡೆಸುತ್ತಾರೆ.

ನವರಾತ್ರಿ ಆರಂಭವಾಗುತ್ತಿದ್ದಂತೆ ಮತ್ತೆ ಮಾರುಕಟ್ಟೆಗಳು ಚೇತರಿಸಿಕೊಳ್ಳುತ್ತವೆ. ಒಂಬತ್ತು ದಿನಗಳ ಕಾಲ ದೇವಿ ದೇವಸ್ಥಾನಗಳಲ್ಲಿ ತ್ರಿಕಾಲ ಪೂಜೆ, ಚಂಡಿಕಾ ಪಾರಾಯಣ, ಚಂಡಿಕಾ- ದುರ್ಗಾ ಹವನಗಳು, ವಿಶೇಷ ಪೂಜೆಗಳು, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ದೀಪ ನಮಸ್ಕಾರ, ಸಾಂಸ್ಕೃ ತಿಕ ಕಾರ್ಯಕ್ರಮಗಳು, ರಾತ್ರಿ ಪೂಜೆಗಳು ನಡೆಯುತ್ತವೆ. ದೇವಿ ದೇವಸ್ಥಾನಗಳ ಆಡಳಿತ ಮಂಡಳಿಗಳು ಈಗಾಗಲೇ ಆಗಮಿಸಿದ ಭಕ್ತರಿಗೆ ಬೇಕಾದ ಮೂಲ ಸೌಕರ್ಯಗಳ ಕುರಿತು ಸಿದ್ಧತೆ ಮಾಡಿಕೊಂಡಿವೆ.

ಗದ್ದೆಯಲ್ಲಿ ಮೂಡದ ಕದಿರು

ನವರಾತ್ರಿಯಲ್ಲಿ ಕದಿರು ಕಟ್ಟುವ ಸಂಪ್ರದಾಯ ಮನೆಮನೆಗಳಲ್ಲಿರುತ್ತವೆ. ಈ ಬಾರಿ ಭಾರೀ ಮಳೆ ಅಕಾಲಿಕವಾಗಿ ಬಂದ ಕಾರಣ ಹಲವೆಡೆ ನಾಟಿ ಕಾರ್ಯ ವಿಳಂಬವಾಯಿತು. ಇನ್ನು ಹಲವೆಡೆ ಮಳೆಯಿಂದ ಬೆಳೆ ನಷ್ಟವಾಯಿತು ಇಲ್ಲವೆ ನಾಟಿ ಮಾಡಿದ ಬಳಿಕ ತೆನೆ ಸರಿಯಾಗಿ ಬೆಳೆಯಲಿಲ್ಲ. ಹೋದ ವರ್ಷ ನವರಾತ್ರಿಯಲ್ಲಿ ಕದಿರು ಕಟ್ಟಲು ಯಾವುದೇ ಸಮಸ್ಯೆಯಾಗಿರಲಿಲ್ಲವಾದರೆ ಈ ಬಾರಿ ಕದಿರು ಕಟ್ಟಲು ಕದಿರುಗಳ ಕೊರತೆಯಾಗುತ್ತಿದೆ. ಕೆಲವರು ದೀಪಾವಳಿ ವೇಳೆ ಕದಿರು ಕಟ್ಟುವುದೂ ಇದೆ. ಆಗ ಕದಿರು ಬೆಳೆಯುವ ನಿರೀಕ್ಷೆ ಇದೆ.

Advertisement

ದೇವಿ ದೇವಸ್ಥಾನಗಳು

ಉಡುಪಿ ತಾಲೂಕು

ಉಡುಪಿಯ ಶ್ರೀಕೃಷ್ಣಮಠದಲ್ಲಿ ನಿತ್ಯ ದೇವಿಯ ಅಲಂಕಾರದಿಂದ ಪೂಜಿಸಲಾಗುತ್ತದೆ. ಉಡುಪಿ ಸುತ್ತ ಕಡಿಯಾಳಿ, ಬೈಲೂರು, ಕನ್ನರ್ಪಾಡಿ, ಇಂದ್ರಾಳಿ, ಪುತ್ತೂರು ದೇವಿ ಆಲಯಗಳು, ಅಂಬಲಪಾಡಿಯ ಮಹಾಕಾಳಿ, ಹೆರ್ಗದ ದುರ್ಗಾ ಪರಮೇಶ್ವರೀ, ದೊಡ್ಡಣಗುಡ್ಡೆ ಆದಿಶಕ್ತಿ, ಉದ್ಯಾವರ ಶಂಭುಕಲ್ಲು ವೀರಭದ್ರ ದುರ್ಗಾಪರಮೇಶ್ವರೀ, ಕೆಮ್ಮಣ್ಣು ಗುಡ್ಯಾಮ್‌ ಭದ್ರಕಾಳಿ, ಸನ್ಯಾಸಿಮಠ ದುರ್ಗಾಪರಮೇಶ್ವರೀ, ಮಣಿಪಾಲದ ದುರ್ಗಾಂಬಾ, ಕೋಡಿಬೆಂಗ್ರೆ ದುರ್ಗಾ ಪರಮೇಶ್ವರೀ, ಅಲೆವೂರು ಮಹಿ ಷಮರ್ದಿನಿ, ಉಪ್ಪೂರು ಗದ್ದುಗೆ ಅಮ್ಮನವರ ದೇವಸ್ಥಾನ.

ಕಾಪು ತಾಲೂಕು

ನಂದಿಕೂರು ದುರ್ಗಾಪರಮೇಶ್ವರೀ ದೇವಸ್ಥಾನ, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ, ಕುಂಜೂರು ದುರ್ಗಾದೇವಿ, ಕಾಪು ಹಳೇ ಮಾರಿಯಮ್ಮ, ಹೊಸ ಮಾರಿಗುಡಿ, ಮೂರನೇ ಮಾರಿಯಮ್ಮ, ಉಳಿಯಾರು ದುರ್ಗಾ, ಬೀಡು ಅನ್ನಪೂರ್ಣೇಶ್ವರೀ, ಮಲ್ಲಾರಿನ ಕೋಟೆ ತ್ರಿಶಕ್ತಿ ಸನ್ನಿಧಾನ, ಕೋಟೆ ಮಾರಿಯಮ್ಮ, ಕೋಟೆ ಹೊಸ ಮಾರಿಗುಡಿ, ಕೋಟೆ ಗಡು ಮಾರಿಯಮ್ಮ, ಮಡುಂಬು ಭದ್ರಕಾಳಿ, ಉಚ್ಚಿಲ ಮಹಾಲಕ್ಷ್ಮೀ, ಕೆಮ್ಮುಂಡೇಲು ದುರ್ಗಾ ಪರಮೇಶ್ವರೀ, ಕಾಪು ಕಾಳಿಕಾಂಬಾ ದೇವಸ್ಥಾನ, ಕಟ ಪಾಡಿ ಅಗ್ರಹಾರ ವೀರಸ್ತಂಭ ದುರ್ಗಾಪರಮೇಶ್ವರೀ, ವೇಣುಗಿರಿ ಕಾಳಿಕಾಂಬಾ ವಿಶ್ವಕರ್ಮೇಶ್ವರ, ಬಂಟಕಲ್ಲು ಮಹಾಲಸಾ ನಾರಾಯಣಿ, ದುರ್ಗಾಪರಮೇಶ್ವರೀ, ಮುಲ್ಕಾಡಿ ದುರ್ಗಾಪರಮೇಶ್ವರೀ, ನ್ಯಾರ್ಮ ಮಹಾಕಾಳಿ ದೇವಸ್ಥಾನ.

ಬ್ರಹ್ಮಾವರ ತಾಲೂಕು

ಮಂದಾರ್ತಿ ದುರ್ಗಾಪರಮೇಶ್ವರೀ, ನೀಲಾವರ ಮಹಿಷಮರ್ದಿನಿ, ಕನ್ನಾರು ದುರ್ಗಾಪರಮೇಶ್ವರೀ, ಚಾಂತಾರು ಗದ್ದುಗೆ ಅಮ್ಮನವರು, ಬಾಕೂìರಿನ ಕಾಳಿಕಾಂಬ, ಏಕನಾಥೇಶ್ವರಿ, ಸಿಂಹವಾಹಿನಿ ಬನ್ನಿ ಮಹಾಕಾಳಿ, ಧರ್ಮಶಾಲೆ ಅಮ್ಮ, ಧರ್ಮಶಾಲೆ ಮಾಸ್ತಿ ಅಮ್ಮ, ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ, ಕೋಟ ಅಮೃತೇಶ್ವರಿ, ಸಾೖಬ್ರಕಟ್ಟೆ- ಕಾಜ್ರಲ್ಲಿ ವನದುರ್ಗಾಪರಮೇಶ್ವರೀ, ಬಾಲ್ಕುದ್ರು ದುರ್ಗಾಪರಮೇಶ್ವರೀ, ಯಡ್ತಾಡಿ ಚಾಮುಂಡೇಶ್ವರಿ, ಗುಂಡ್ಮಿ ಭಗವತಿ ಅಮ್ಮ, ಮಣೂರು ಮಳಲು ತಾಯಿ, ಪಾಂಡೇಶ್ವರ ರಕ್ತೇಶ್ವರೀ ದೇಗುಲ.

Advertisement

Udayavani is now on Telegram. Click here to join our channel and stay updated with the latest news.

Next