Advertisement
ಹಾಗೆಯೇ ಇಂದು ವಿಶ್ವ ಆನೆಗಳ ದಿನ, ಅಥವಾ ಇದನ್ನು ನಾವು ವಿಶ್ವ ಗಜ ದಿನವೆಂದೂ ಸಹ ಕರೆಯಬಹುದು.
Related Articles
Advertisement
ಇನ್ನು ನಮ್ಮಲ್ಲಿ ಕಾಡುಗಳ್ಳರ ಹಾವಳಿಗೆ ಅತೀ ಹೆಚ್ಚು ತುತ್ತಾಗುತ್ತಿರುವುದೂ ಸಹ ಆನೆಗಳೇ. ಆನೆ ದಂತಕ್ಕೆ ಅಪಾರವಾದ ಬೇಡಿಕೆ ಮತ್ತು ಬೆಲೆ ಇರುವುದರಿಂದ ಗಂಡಾನೆಗಳು ಕಾಡುಗಳ್ಳರ ಕ್ರೂರದೃಷ್ಟಿಗೆ ತುತ್ತಾಗುತ್ತಲೇ ಇವೆ. ನಮ್ಮ ದೇಶ ಕಂಡ ಅತ್ಯಂತ ಕ್ರೂರಿ ಕಾಡುಗಳ್ಳ ವೀರಪ್ಪನ್ ಸಹ ‘ದಂತ ಚೋರ’ನೆಂದೇ ಕುಖ್ಯಾತಿಯನ್ನು ಹೊಂದಿದ್ದವ.
ಏಷ್ಯಾ ಸಹಿತ ನಮ್ಮ ದೇಶದಲ್ಲಿ ಕಾಣಸಿಗುವ ಆನೆಗಳು ಆಫ್ರಿಕಾದ ಆನೆಗಳಿಗಿಂತ ಗಾತ್ರ ಮತ್ತು ಆಕಾರದಲ್ಲಿ ಸಂಪೂರ್ಣ ಭಿನ್ನವಾಗಿವೆ. ದೊಡ್ಡ ಆನೆಗಳು ಗಾಂಭಿರ್ಯಕ್ಕೆ ಹೆಸರುವಾಸಿಯಾದರೆ ಮರಿಯಾನೆಗಳು ತಮ್ಮ ತುಂಟಾಟಗಳಿಗೆ ಪ್ರಸಿದ್ಧಿಯನ್ನು ಪಡೆದಿವೆ.
ಅವುಗಳು ತಮ್ಮ ಪುಟ್ಟ ಸೊಂಡಿಲಿನಿಂದ ಕೂಡಿದ ದೇಹದ ಮೂಲಕ ನಡೆಸುವ ತುಂಟಾಟದ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ.
ಜಗತ್ತಿನಲ್ಲಿರುವ ಒಟ್ಟು ಆನೆಗಳ ಸಂತತಿಯಲ್ಲಿ ಸರಿಸುಮಾರು 60% ಆನೆಗಳು ಭಾರತ ದೇಶದಲ್ಲಿಯೇ ಇರುವುದು ವಿಶೇಷ. ನಮ್ಮ ದೇಶದ 14 ರಾಜ್ಯಗಳಲ್ಲಿ ಇರುವ 30 ಆನೆ ಸಂರಕ್ಷಿತ ಪ್ರದೇಶಗಳಲ್ಲಿ ಈ ಗಜ ಸಂತತಿ ಹರಡಿದೆ. ಅದರಲ್ಲಿ ನಮ್ಮ ರಾಜ್ಯದ ದುಬಾರೆ ಮತ್ತು ಸಕ್ರೆಬೈಲೂ ಸಹ ಸೇರಿದೆ. ಭಾರತದಲ್ಲಿ ಸರಿಸುಮಾರು 65 ಸಾವಿರ ಚದರ ಕಿಲೋ ಮೀಟರ್ ಪ್ರದೇಶಗಳಲ್ಲಿ ಗಜ ಸಂತತಿ ವಾಸಿಸುತ್ತಿರುವುದರಿಂದ ಅವುಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವೂ ಆಗಿದೆ.
ನಮ್ಮ ಪಶ್ಚಿಮ ಘಟ್ಟ ಭಾಗಗಳಲ್ಲೂ ಆನೆಗಳ ಸಂತತಿ ಬಹಳಷ್ಟಿದೆ. ಆನೆಗಳನ್ನು ಪಳಗಿಸಿ ಅವುಗಳನ್ನು ಧಾರ್ಮಿಕ ಚಟುವಟಿಕೆಗಳಿಗೆ ಮತ್ತು ಇನ್ನಿತರ ಕೆಲಸಗಳಿಗೆ ಬಳಸಿಕೊಳ್ಳುವ ವಿಚಾರದಲ್ಲಿ ಕೇರಳ ರಾಜ್ಯ ಅಗ್ರಣಿಯಾಗಿದೆ.
ಇಂದು ವಿಶ್ವ ಗಜ ದಿನದ ಈ ಸಂದರ್ಭದಲ್ಲಿ ನಾವು ನಿಮಗೆ ಆನೆ ಮರಿಗಳ ತುಂಟಾಟಗಳ ಇಂತಹ ಕೆಲವು ವಿಡಿಯೋ ಟ್ವೀಟ್ ಗಳನ್ನು ಇಲ್ಲಿ ನೀಡುತ್ತಿದ್ದೇವೆ ನೋಡಿ ಆನಂದಿಸಿ.