Advertisement
ಪವಾಡ ನಡೆದರೂ ಅಗ್ರ ಮೂರರಲ್ಲಿ ಕಾಣಿಸಿಕೊಳ್ಳಲಾಗದ ಸ್ಥಿತಿಯ ಲ್ಲಿದೆ ಸ್ಮತಿ ಮಂಧನಾ ಬಳಗ. ಕೂಟದಿಂದ ಹೊರಬಿದ್ದಿರುವುದು ಅಧಿಕೃತಗೊಳ್ಳು ವುದೊಂದೇ ಬಾಕಿ. ಬುಧವಾರ ಯುಪಿ ವಾರಿಯರ್ ವಿರುದ್ಧ ಆರ್‌ಸಿಬಿ ತನ್ನ 6ನೇ ಪಂದ್ಯವಾಡಲಿದೆ. ಇಲ್ಲಿ ಸೋತರೆ ಬೆಂಗಳೂರು ವನಿತಾ ತಂಡದ ಕತೆ ಮುಗಿದೇ ಹೋಗುತ್ತದೆ. ಪ್ರತಿಷ್ಠೆಗಾದರೂ ಒಂದೆರಡು ಪಂದ್ಯ ಗೆಲ್ಲಲಿ ಎಂದು ಹಾರೈಸುವವರೂ ಇಲ್ಲದಿರುವುದು ಆರ್‌ಸಿಬಿ ತಂಡದ ಘೋರ ದುರಂತ!
ಹರಾಜಿನ ದಿನ ಆರ್‌ಸಿಬಿ ಮೇಲೆ ಎಲ್ಲರೂ ಭಾರೀ ನಂಬಿಕೆ ಇರಿಸಿದ್ದರು. ವಿಶ್ವದ ಘಟಾನುಘಟಿ ಆಟಗಾರ್ತಿಯರೆಲ್ಲ ಆರ್‌ಸಿಬಿಯಲ್ಲೇ ಬೀಡು ಬಿಟ್ಟಿದ್ದಾರೆ, ಇವರನ್ನು ಸೋಲಿಸುವುದು ಸುಲಭವಲ್ಲ, ಆರ್‌ಸಿಬಿಯೇ ಚಾಂಪಿಯನ್, ಒಂದೂವರೆ ದಶಕದಿಂದ ಪುರುಷರಿಂದಾಗದ್ದು ಮಹಿಳೆಯರು ಮೊದಲ ವರ್ಷವೇ ಸಾಧಿಸಲಿದ್ದಾರೆ… ಹೀಗೆ ಅಭಿಮಾನ, ನಂಬಿಕೆಗಳೆಲ್ಲ ಉಕ್ಕೇ ರಿದ್ದವು. ಆದರೆ ಆರ್‌ಸಿಬಿ ಸಾಮರ್ಥ್ಯವೇನಿದ್ದರೂ ಕಾಗದದ ಮೇಲೆ ಮಾತ್ರ ಎಂಬುದು ಅರಿವಾಗಲು ಹೆಚ್ಚು ವೇಳೆ ಹಿಡಿಯಲಿಲ್ಲ. ಆರ್‌ಸಿಬಿ ಮುಟ್ಟಿದ್ದೆಲ್ಲ ಮಣ್ಣಾಗುತ್ತಿದೆ. ನಾಯಕತ್ವ ಹಾಗೂ ಓಪನಿಂಗ್ ಮೂಲಕವೇ ತಂಡದ ಪತನದ ಸೂಚನೆ ಸಿಗಲಾರಂಭಿಸುತ್ತದೆ. ನಾಯಕಿ ಸ್ಮತಿ ಮಂಧನಾ ತಮ್ಮ ಬೆಲೆಗೆ ತಕ್ಕ ಸಾಮರ್ಥ್ಯ ತೋರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಪಂದ್ಯದ ಮೊದಲ ಓವರನ್ನೇ ಮೇಡನ್ ಮಾಡುವಷ್ಟರ ಮಟ್ಟಿಗೆ ಇವರ ಆಟ ಕಳೆಗುಂದಿದೆ. ಕನಿಷ್ಠ ಪಕ್ಷ ತಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲೂ ಬದಲಾವಣೆ ಮಾಡಿಕೊಳ್ಳುತ್ತಿಲ್ಲ.
Related Articles
ವಿದೇಶಿ ಆಟಗಾರ್ತಿಯರಾದ ಎಲ್ಲಿಸ್ ಪೆರ್ರಿ, ಸೋಫಿ ಡಿವೈನ್, ಹೀತರ್ ನೈಟ್ ಅಲ್ಲಲ್ಲಿ ಮಿಂಚಿದರೂ ತಂಡಕ್ಕೆ ಇವರಿಂದ ಯಾವ ಲಾಭವೂ ಆಗಿಲ್ಲ. ವಿಶ್ವಕಪ್‌ನಲ್ಲಿ ಮಿಂಚಿದ ಹಾರ್ಡ್‌ಹಿಟ್ಟರ್ ರಿಚಾ ಘೋಷ್ ಇಲ್ಲಿ ಸಂಪೂರ್ಣ ಮಂಕಾಗಿದ್ದಾರೆ. ಡೆಲ್ಲಿ ವಿರುದ್ಧವಷ್ಟೇ ಇವರ ಬ್ಯಾಟ್ ಒಂದಿಷ್ಟು ಮಾತಾಡಿತ್ತು. ಕನಿಷ್ಠ 180 ರನ್ ಗಳಿಸಬಹುದಾದ ಟ್ರ್ಯಾಕ್‌ಗಳಲ್ಲಿ 150 ರನ್ ಗಡಿ ಮುಟ್ಟಲಿಕ್ಕೂ ಆರ್‌ಸಿಬಿ ಪರದಾಡುತ್ತಿದೆ. ಟಿ20ಗೆ ಅಗತ್ಯವುಳ್ಳ ಬ್ಯಾಟಿಂಗ್ ಜೋಶ್ ಆರ್‌ಸಿಬಿ ಈವರೆಗೆ ತೋರ್ಪಡಿಸಿಯೇ ಇಲ್ಲ.
Advertisement
ಬೌಲಿಂಗ್ ವಿಭಾಗದಲ್ಲಿ ಮೊನ ಚೆಂಬುದೇ ಇಲ್ಲ. ಡೆಲ್ಲಿ ವಿರುದ್ಧದ ಪಂದ್ಯವನ್ನು ಕೊನೆಯ ಓವರ್ ತನಕ ಕೊಂಡೊಯ್ದದ್ದೇ ಈ ಕೂಟದಲ್ಲಿ ಆರ್‌ಸಿಬಿ ಕಡೆಯಿಂದ ಕಂಡುಬಂದ ಉತ್ತಮ ಸಾಧನೆ! ಆರ್‌ಸಿಬಿಯನ್ನು ಮಣಿಸುವುದು ಕಷ್ಟವೇನಲ್ಲ ಎಂಬುದು ಎದುರಾಳಿಗಳಿಗೆ ಮನದಟ್ಟಾಗಿದೆ. ಹಾಗೆಯೇ ನಮ್ಮಿಂದ ಗೆಲ್ಲಲು ಸಾಧ್ಯವಿಲ್ಲ ಎಂಬುದು ಬೆಂಗಳೂರು ತಂಡವನ್ನು ಮಾನಸಿಕವಾಗಿ ಕಾಡಲಾರಂಭಿಸಿದೆ.
ಈಗಿನ ಸ್ಥಿತಿ…ಮಂಗಳವಾರದ ಪಂದ್ಯಕ್ಕೂ ಮೊದಲಿನ ಲೆಕ್ಕಾಚಾರದಂತೆ ಮುಂಬೈ ಮತ್ತು ಡೆಲ್ಲಿ ಮುಂದಿನ ಸುತ್ತು ಪ್ರವೇಶಿಸುವುದು ನಿಶ್ಚಿತ. ಇವರಲ್ಲಿ ಅಗ್ರಸ್ಥಾನ ಯಾರಿಗೆಂಬುದಷ್ಟೇ ಉಳಿದಿರುವ ಕುತೂಹಲ. ಮುನ್ನಡೆವ 3ನೇ ತಂಡದ ಲಕ್ ಯುಪಿ ವಾರಿಯರ್ಗೆ ಒಲಿದೀತು. ಹೊರಬೀಳಲಿರುವ ಆರ್‌ಸಿಬಿಗೆ ಗುಜರಾತ್ ಸಾಥ್ ನೀಡಬಹುದು.