Advertisement
ಶಾಲೆ ಆರಂಭವಾಗಿ 64 ವರ್ಷಗಳು ಪೂರೈಸಿದ್ದು, ಈ ದಿನವನ್ನು ‘ಸಂಭ್ರಮ 2018’ ವಾರ್ಷಿಕೋತ್ಸವವನ್ನಾಗಿ ಆಚರಿಸಲಾಗುತ್ತಿದೆ. 1954ರ ಡಿ. 24ರಂದು ಗ್ರಾಮದ ಹಿರಿಯ ಮುತುವರ್ಜಿಯಲ್ಲಿ ಏಕೋಪಾಧ್ಯಾಯರ ಮೂಲಕ ಮಣ್ಣಿನ ನೆಲ, ಮುಳಿಹುಲ್ಲಿನ ಛಾವಣಿಯ ಮೂಲಕ ಪೆರಾಬೆ ಎಂಬ ಪುಟ್ಟ ಹಳ್ಳಿಯಲ್ಲಿ ಶಾಲೆ ಆರಂಭವಾಗಿತ್ತು.
ಶಾಲೆಯ ಸುವರ್ಣ ಮಹೋತ್ಸವವನ್ನು 2014ರ ಡಿ. 26ರಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಸ್. ಅಂಗಾರ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಗಿತ್ತು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 1ರಿಂದ 7ನೇ ತರಗತಿಯ ವರೆಗೆ ಒಟ್ಟು 58 ವಿದ್ಯಾರ್ಥಿಗಳು ವಿದ್ಯಾರ್ಜನೆ ಪಡೆಯುತ್ತಿದ್ದಾರೆ. ಕಳೆದ ಸಾಲಿಗಿಂತ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಏರಿಕೆ ಕಂಡಿದೆ.
Related Articles
ಸರಕಾರಿ ಶಾಲೆಗಳು ಮುಚ್ಚುತ್ತಿವೆ ಎಂಬ ಭೀತಿ ಜನತೆಯಲ್ಲಿದೆ. ಈ ಭೀತಿಯನ್ನು ಹೋಗಲಾಡಿಸಿ ಸರಕಾರಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಸೆಳೆಯುವುದೇ ನಮ್ಮ ಮೂಲ ಉದ್ದೇಶವಾಗಿದೆ. ಪೆರಾಬೆ ಸರಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ಆ ನಿಟ್ಟಿನಲ್ಲಿ ಪೆರಾಬೆ ಶಾಲೆಯನ್ನು ಉಳಿಸುವ ಬಹುದೊಡ್ಡ ಕನಸನ್ನು ಮುಂದಿಟ್ಟುಕೊಂಡು ಈ ಬಾರಿ ‘ಸಂಭ್ರಮ 2018’ ಶಾಲಾ ವಾರ್ಷಿಕೋತ್ಸವ ನಡೆಯುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಕನಸು ಖಂಡಿತ ನನಸಾಗಲಿದೆ.
– ಹೇಮಲತಾ ಪ್ರದೀಪ್
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ
Advertisement
ವಿಶೇಷ ವರದಿ