Advertisement
ಹಿನ್ನೆಲೆ ಮತ್ತು ಉದ್ದೇಶ1944ರ ಡಿಸೆಂಬರ್ 7ರಂದು ಅಂತಾರಾಷ್ಟ್ರೀಯ ನಾಗರಿಕ ವಿಮಾನ ಯಾನ ಸಂಸ್ಥೆ (ಐಇಅO)ಸ್ಥಾಪನೆಯಾಯಿತು. ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನದ ಮಹತ್ವಪೂರ್ಣ ಒಪ್ಪಂದಕ್ಕೆ ಸಹಿ ಹಾಕಿದ 50ನೇ ವರ್ಷದ ಸವಿನೆನಪಿಗಾಗಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 1996ರಲ್ಲಿ ಪ್ರತೀವರ್ಷ ಡಿಸೆಂಬರ್ 7ರಂದು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನವನ್ನು ಆಚರಿಸುವ ನಿರ್ಣಯ ಕೈಗೊಂಡಿತು. ವಿಮಾನ ಯಾನ ಸುರಕ್ಷೆಗೆ ಇರುವ ಅಂತಾರಾಷ್ಟ್ರೀಯ ಮಾನದಂಡಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವುದು, ವಿಮಾನ ಯಾನ ಸೇವೆಯ ವೇಳೆಯ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಸುರಕ್ಷೆಯನ್ನು ಖಾತರಿಪಡಿಸುವುದು, ಯಾನಿಗಳಿಗೆ ಗುಣಮಟ್ಟದ ಸೇವೆ ನೀಡಲು ಆದ್ಯತೆ, ನಾಗರಿಕ ವಿಮಾನ ಯಾನ ಸೇವೆಯಲ್ಲಿ ಅಂತಾರಾಷ್ಟ್ರೀಯ ಸಹಕಾರವನ್ನು ಇನ್ನಷ್ಟು ಬಲಪಡಿಸುವುದು ಮತ್ತು ನಾಗರಿಕ ವಿಮಾನಗಳಲ್ಲಿ ಸುಧಾರಿತ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಇತ್ಯಾದಿಗಳ ಬಗೆಗೆ ವಿಚಾರವಿಮರ್ಶೆಗಳನ್ನು ನಡೆಸಿ ಈ ದಿಸೆಯಲ್ಲಿ ಕಾರ್ಯೋನ್ಮುಖವಾಗುವ ಉದ್ದೇಶವನ್ನು ಈ ದಿನ ಒಳಗೊಂಡಿದೆ. ಅಲ್ಲದೆ ನಾಗರಿಕ ವಿಮಾನ ಯಾನ ಕ್ಷೇತ್ರದಲ್ಲಿ ಐಇಅO ಮತ್ತು ಇನ್ನಿತರ ವಿಮಾನ ಯಾನ ಸಂಸ್ಥೆಗಳ ಸಲ್ಲಿಸುತ್ತಿರುವ ಸೇವೆ ಮತ್ತು ಕೊಡುಗೆಗೆ ಮೆಚ್ಚುಗೆ ಸೂಚಿಸುವುದರ ಜತೆಗೆ ಈ ನಿಟ್ಟಿನಲ್ಲಿ ಇನ್ನಷ್ಟು ಪ್ರೋತ್ಸಾಹ ನೀಡುವುದೇ ಈ ದಿನದ ಪ್ರಮುಖ ಉದ್ದೇಶವಾಗಿದೆ.
“ಜಾಗತಿಕ ವಾಯುಯಾನ ಅಭಿವೃದ್ಧಿಗಾಗಿ ಆವಿಷ್ಕಾರಗಳನ್ನು ಮುಂದುವರಿಕೆ’ ಎಂಬ ಧ್ಯೇಯವಾಕ್ಯದೊಂದಿಗೆ ಈ ಸಾಲಿನ ಅಂತಾರಾಷ್ಟ್ರೀಯ ನಾಗರಿಕ ವಿಮಾನ ಯಾನ ದಿನವನ್ನು ಆಚರಿಸಲಾಗು ತ್ತಿದೆ. ಅದರಂತೆ ನಾಗರಿಕ ವಿಮಾನ ಯಾನದಲ್ಲಿ ನಾವೀನ್ಯತೆಯ ಪಾತ್ರದ ಬಗ್ಗೆ ತಿಳಿಸುವ ಜತೆಗೆ ತಾಂತ್ರಿಕ ಪ್ರಗತಿ ಮತ್ತು ಸಮಸ್ಯೆಗಳಿಗೆ ಸೃಜನಾತ್ಮಕ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಚಿಂತನೆ ನಡೆಸಲಾಗುತ್ತಿದೆ. ಆಚರಣೆ ಹೇಗೆ ?
ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನವನ್ನು ಐಇಅO ನೇತೃತ್ವದಲ್ಲಿ ನಾಗರಿಕ ವಿಮಾನ ಯಾನಕ್ಕೆ ಸಂಬಂಧಿಸಿದ ವಿವಿಧ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಆಚರಿಸಲಾಗು ತ್ತದೆ. ನಾಗರಿಕ ವಿಮಾನಯಾನಕ್ಕೆ ಸಂಬಂಧಿಸಿದಂತೆ ವಿಚಾರಗೋಷ್ಠಿ, ಶೈಕ್ಷಣಿಕ ಉಪನ್ಯಾಸ, ತರಗತಿಗಳನ್ನು ಏರ್ಪಡಿಸಿ ನಾಗರಿಕರಲ್ಲಿ ಅರಿವು ಮೂಡಿಸುವ ಜತೆಯಲ್ಲಿ ನಾಗರಿಕ ವಿಮಾನ ಯಾನ ಕ್ಷೇತ್ರ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತಂತೆ ಅವಲೋಕನ ನಡೆಸಿ ಪರಿಹಾರ ಕಂಡುಕೊಳ್ಳಲು ತಜ್ಞರಿಂದ ಸಲಹೆ ಸೂಚನೆ ಗಳನ್ನು ಪಡೆದುಕೊಳ್ಳಲಾಗುತ್ತದೆ. ಜಾಗತಿಕ ಸಂಪರ್ಕದ ಕೊಂಡಿಯಾಗಿರುವ ನಾಗರಿಕ ವಿಮಾನ ಯಾನ, ಪ್ರವಾ ಸೋದ್ಯಮ, ಜಾಗತಿಕ ವ್ಯಾಪಾರ ವೃದ್ಧಿಸುವ ಜತೆಗೆ ಸಂಸ್ಕೃತಿ ವಿನಿಮಯ ದಲ್ಲಿ ತನ್ನದೇ ಆದ ಮಹತ್ತರ ಪಾತ್ರವನ್ನು ಹೊಂದಿದೆ. ತ್ವರಿತ ಸಾರಿಗೆ ಜಾಲವಾಗಿ ರುವ ನಾಗರಿಕ ವಿಮಾನ ಯಾನ ಸೇವೆಯನ್ನು ಇನ್ನಷ್ಟು ವಿಸ್ತರಿಸುವುದರ ಜತೆಯಲ್ಲಿ ಆಧುನಿಕ ಬದಲಾವಣೆಗಳಿಗೆ ತಕ್ಕಂತೆ ಇಡೀ ವ್ಯವಸ್ಥೆಯನ್ನು ಬಲಪಡಿಸು ವುದು ಅತೀ ಆವಶ್ಯಕವಾಗಿದೆ.
Related Articles
Advertisement