Advertisement
ನಗರ, ಪಟ್ಟಣಗಳ ಹೊರವಲಯ, ಗ್ರಾಮೀಣ ಭಾಗಗಳಲ್ಲಿ ವಿವಿಧ ಗುಟ್ಕಾಗಳನ್ನು ಮೂರ್ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇವುಗಳ ಮಾರಾಟದಲ್ಲಿ ಕೆಲವು ದಿನಸಿ, ತರಕಾರಿ ಅಂಗಡಿಗಳೂ ಹಿಂದೆ ಬಿದ್ದಿಲ್ಲ. ಸಿಗರೇಟ್ ಕೂಡ ತೆರೆಮರೆಯಲ್ಲಿ ಮಾರಾಟವಾಗುತ್ತಿದೆ. ಆದರೆ ಪರಿಚಿತರಿಗೆ ಮಾರಾಟವಾಗುತ್ತಿರುವುದು ಹೆಚ್ಚು. ದ.ಕ. ಮತ್ತು ಉಡುಪಿ ಜಿಲ್ಲೆಯ ಹಲವೆಡೆ ಗ್ರಾಮೀಣ ಭಾಗಗಳಲ್ಲಿ ತಯಾರಾಗುವ ಸ್ಥಳೀಯ ತಂಬಾಕು ಪುಡಿಗೂ ಬೇಡಿಕೆ ಹೆಚ್ಚಿದೆ.
ನಿಷೇಧಿತ ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ “ಕೋಟಾ³’ ತಂಡ ನಿಗಾ ವಹಿಸುತ್ತಿತ್ತು. ಆದರೆ ಪ್ರಸ್ತುತ ಈ ತಂಡದ ಸಿಬಂದಿಗೆ ಕೋವಿಡ್ 19 ನಿಯಂತ್ರಣದ ವಿವಿಧ ಜವಾಬ್ದಾರಿಗಳನ್ನು ವಹಿಸಲಾಗಿದೆ. ಇದರ ನಡುವೆ ತಂಬಾಕು ಕಾಳಸಂತೆಯನ್ನು ಪತ್ತೆಹಚ್ಚುವುದು ಪೊಲೀಸರಿಗೂ ಸವಾಲಾಗಿದೆ. ಕೆಲವರು ಅಗತ್ಯ ವಸ್ತುಗಳ ಜತೆ ತಂಬಾಕು ಉತ್ಪನ್ನಗಳನ್ನು ಸಾಗಿಸುವ ಬಗ್ಗೆಯೂ ಗುಮಾನಿಗಳಿವೆ. ಸಂಪೂರ್ಣ ನಿಷೇಧ
ಕೋವಿಡ್ 19 ವೈರಸ್ ಉಗುಳಿನ ಮೂಲಕವೂ ಪಸರಿಸುವ ಅಪಾಯ ಇದ್ದು, ತಂಬಾಕು ಉತ್ಪನ್ನಗಳ ಮಾರಾಟ, ಬಳಕೆಯನ್ನು ನಿಷೇಧಿಸಿ ಸರಕಾರ ಆದೇಶ ಹೊರಡಿಸಿತ್ತು. ಅಲ್ಲದೆ ಸಿಗರೇಟ್, ಮದ್ಯ ಎರಡೂ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತವೆ.
Related Articles
ಸರಕಾರ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಿದೆ. ಇಂತಹ ಉತ್ಪನ್ನಗಳ ಸಾಗಾಟ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸುತ್ತಿದೆ. ಪೊಲೀಸರಿಗೂ ಸೂಚನೆ ನೀಡಲಾಗಿದೆ. ತಂಬಾಕು ಉತ್ಪನ್ನಗಳಿಂದ ಆರೋಗ್ಯಕ್ಕೆ ಹಾನಿಯಿದ್ದು, ಕೋವಿಡ್ 19 ಸೋಂಕು ಬರುವ, ಹರಡುವ ಸಾಧ್ಯತೆಗಳೂ ಹೆಚ್ಚಿವೆ. ಸಾರ್ವಜನಿಕರು ಜಾಗೃತರಾಗಬೇಕು.
-ಡಾ | ಜಗದೀಶ್ ದ.ಕ. ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ
Advertisement