Advertisement
ಹಲ್ಲಿನ ಬಣ್ಣ- ಹಲ್ಲಿನ ಮೇಲೆ ತಂಬಾಕು ಕಲೆಗಳು
ಎಲೆ – ಅಡಿಕೆ/ಜತೆಗೆ ಹೊಗೆಸೊಪ್ಪು ಅಥವಾ ಧೂಮ್ರಾಪಾನ (ಸಿಗರೇಟ್ ಅಥವಾ ಬೀಡಿ ಸೇದುವವರಲ್ಲಿ) ಹಲ್ಲಿನ ರಂಗೇ ಬದಲಾಗುತ್ತದೆ. ಕಪ್ಪು, ಕಂದು ಬಣ್ಣದ ಕಲೆಗಳು ಹಲ್ಲನ್ನು ಸುತ್ತುವರಿದಿರುತ್ತವೆ. ದಿವಸವೂ ಎಡೆಬಿಡದೆ ಸಿಗರೇಟ್/ಬೀಡಿ ಸೇದುವವರಲ್ಲಿ ಹಲ್ಲಿನ ಯಾವುದೇ ಭಾಗ ಕಾಣದ ಹಾಗೆ ಧೂಮಪಾನದ ಕಲೆಗಳು ತುಂಬಿರುತ್ತವೆ. ಕ್ರಮೇಣ ಕಲೆಯಿಂದ ಕೂಡಿದ ಈ ಹಲ್ಲು ಒರಟಾಗಿ, ಇದರ ಮೇಲೆ ಹಲ್ಲು ಪಾಚಿ (ಬ್ಯಾಕ್ಟೀರಿಯಾಗಳಿಂದ ಕೂಡಿದ ಫಲಕ) ತುಂಬಿ, ಅದು ಕ್ರಮೇಣ ಕಿಟ್ಟ ವಾಗಿ, ವಸಡು ರೋಗಕ್ಕೆ ಕಾರಣವಾಗುವುದು. ಹಲ್ಲು ಒರಟಾಗುವುದರಿಂದ, ಬ್ರಶ್ ಮಾಡಿದರೂ ಬಾಯಿಯಲ್ಲಿ ತಾಜಾತನವು ಕಾಣುವುದಿಲ್ಲ.
Related Articles
Advertisement
ತಡೆಗಟ್ಟುವುದು ಹೇಗೆ?ಮತ್ತು ಚಿಕಿತ್ಸೆಯೇನು?
1. ಎಲೆ ಅಡಿಕೆ/ ಹೊಗೆಸೊಪ್ಪು/ಧೂಮಪಾನವನ್ನು ನಿಲ್ಲಿಸಿ – ಈ ಚಟದಿಂದ ದೂರವಿರಿ.
2. ನಿಮ್ಮ ದಂತ ವೈದ್ಯರಲ್ಲಿ ಹೋಗಿ – ಹಲ್ಲು ಸ್ವತ್ಛಗೊಳಿಸಿಕೊಳ್ಳಿ ಮತ್ತು ಇದಾದ ಅನಂತರ ಮತ್ತೆ ಈ ಅಭ್ಯಾಸದಿಂದ ದೂರವಿರಿ.
3. ಧೂಮಪಾನ ಮಾಡುವವರಿಗಾಗಿಯೇ – ಹಲ್ಲಿನ ಮೇಲಿನ ಕಲೆ ಹೋಗಲು ಕೆಲವು ಟೂತ್‌ಪೇಸ್ಟ್‌ಗಳು ಲಭ್ಯ. ಇದರಿಂದಾಗಿ ಹಲ್ಲಿನ ಕಲೆಗಳಿಂದ ಸ್ವಲ್ಪ ದೂರವಿರಬಹುದು ಮತ್ತು ಹಲ್ಲು ಬಿಳಿಯಾಗಿರಲು ಸಾಧ್ಯವೂ ಕೂಡ. ಬಾಯಿಯ ವಾಸನೆ: ಧೂಮಪಾನ ಮಾಡುವವರನ್ನು ಅವರು ಮಾತನಾಡುವಾಗ, ಅವರ ಸಮೀಪವಿರುವಾಗ ಸುಲಭವಾಗಿ ಕಂಡು ಹಿಡಿಯಬಹುದು. ಹದಿಹರೆಯದ ಯುವಕ/ಯುವತಿಯರು ಮನೆಯಲ್ಲಿ ಸಿಗರೇಟ್ ಸೇವಿಸಲು ಸಾಧ್ಯವಾಗದೇ ಹೊರಗೆ ಸೇವಿಸಿ ಮನೆಗೆ ಬರುವಾಗ, ಬಾಯಿಗೆ ಮಿಂಟ್ ಅಥವಾ ಅದೇ ತರಹದ ವಸ್ತುವನ್ನು ಹಾಕಿ “”ಧೂಮಪಾನದ ವಾಸನೆ” ಮನೆಯವರಿಗೆ ಗೊತ್ತಾಗದಿರಲಿ ಎಂದು ಎಣಿಸುತ್ತಾರೆ. ಧೂಮಪಾನದಲ್ಲಿರುವ ಕಣ್ಣಿಗೆ ಕಾಣದಿರುವ ಚಿಕ್ಕ ಚಿಕ್ಕ ಕಣಗಳು ನಮ್ಮ ಗಂಟಲು ಮತ್ತು ಬಾಯಿಯ ಒಳಚರ್ಮದ ಮೇಲೆ ಕೂತು, ಈ ಬಾಯಿಯ ವಾಸನೆಗೆ ಕಾರಣ. ಇದಲ್ಲದೆ ಈ ವಿಷಯುಕ್ತ ಕಣಗಳು ನಮ್ಮ ಶ್ವಾಸಕೋಶದಲ್ಲಿ ಗಂಟೆಗಟ್ಟಲೇ ಸುತ್ತಾಡುತ್ತಿದ್ದು ಮತ್ತೂ ನಮ್ಮ ರಕ್ತದೊಳಗೆ ವಿಲೀನವಾಗಿ ಕ್ರಮೇಣ ಗಂಟೆಗಟ್ಟಲೆ ದೇಹದಿಂದ ಹೊರಹೊಮ್ಮುತ್ತಿರುತ್ತವೆೆ. ಇದರಿಂದಾಗಿ ಬಾಯಿಯ ವಾಸನೆಯೂ ಕೂಡ ಜಾಸ್ತಿಯಾಗುತ್ತದೆ. ಇದಲ್ಲದೆ, ಸಿಗರೇಟ್ ಸೇವನೆಯಿಂದ ಬಾಯಿಯ ಜೊಲ್ಲುರಸ ಸ್ರವಿಸುವಿಕೆಯು ಕಡಿಮೆಯಾಗಿ, ತಿಂದ ಆಹಾರವು, ಅಲ್ಲೇ ಶೇಖರಣೆಯಾಗಿ ಇದರಿಂದಲೂ ಬಾಯಿಯ ವಾಸನೆ ಬರುವುದು ಕೂಡ. ಇದಕ್ಕೆ ಪರಿಹಾರವಿದೆಯೇ?
ಸಿಗರೇಟ್ ಸೇವಿಸುವುದನ್ನು ಬಿಡುವುದೇ ಇದಕ್ಕೆ ಪರಿಹಾರ. ಕೆಲವು ಬಾಯಿ ಮುಕ್ಕಳಿಸುವ ಔಷಧಗಳಿಂದ ಈ ಬಾಯಿಯ ವಾಸನೆಯು ಸ್ವಲ್ಪ ಗಂಟೆಯ ಮಟ್ಟಿಗೆ ಕಡಿಮೆಯಾದರೂ ಯಾವಾಗಲೂ ಬಾಯಿ ಮುಕ್ಕಳಿಸುವ ಔಷಧ ಉಪಯೋಗಿಸುವುದು ಸೂಕ್ತವಲ್ಲ. ಧೂಮಪಾನ ನಿಲ್ಲಿಸಲು ಹೆಂಗಸರಿಗೆ, ನಿಮಗೆ, ಧೂಮಪಾನ ವಿನಾ ಬಾಯಿಯ ವಾಸನೆ ಇರದೇ ಇರುವ ಮುಕ್ತಿ ಬೇಕೆ? – ನಿಮ್ಮ ಗಂಡಸರಿಗೆ ಧೂಮಪಾನದಿಂದ ದೂರವಿರುವ ಹಾಗೇ ಮಾಡಿ ಇದು ಒಳ್ಳೆಯ ಉಪಾಯ. ಇದಕ್ಕೆ ಪರಿಹಾರವೇನು/ ಚಿಕಿತ್ಸೆಯೇನು?
ಮುಖ್ಯವಾಗಿ, ಸಿಗರೇಟ್/ಬೀಡಿ ಸೇವನೆ ನಿಲ್ಲಿಸುವುದು. ಬೀಡಿ , ಸಿಗರೇಟ್ ಸೇದುವವರು ಆವಾಗವಾಗ ದಂತ ವೈದ್ಯರನ್ನು ಭೇಟಿಯಾಗಬೇಕು. ಹಲ್ಲು ಸ್ವತ್ಛಗೊಳಿಸಿಕೊಳ್ಳಬೇಕು, ಬೇಕಾದಾಗ ಹಲ್ಲು ವಸಡು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು, ಈ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸಿಗರೇಟ್/ಬೀಡಿ ಸೇವನೆ ಸಂಪೂರ್ಣ ನಿಲ್ಲಿಸಬೇಕು. ಈ ಸಿಗರೇಟ್ /ಬೀಡಿ ಸೇದುವವರಲ್ಲಿ ಶಸ್ತ್ರ ಚಿಕಿತ್ಸೆಯ ಅನಂತರ ಸಂಪೂರ್ಣ ಗಾಯವು ಬೇಗ ಗುಣವಾಗದೆ, ಸಮಯ ಜಾಸ್ತಿ ತಗಲಬಹುದು. ಹೀಗಾಗಿ ಕೆಲವೊಮ್ಮೆ ವಸಡು ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವವರಲ್ಲಿ ಮತ್ತೆ ಪುನಃ ದಂತ ಸುತ್ತುಪರೆರೋಗ ಲಕ್ಷಣಗಳು ಕಾಣಸಿಗಬಹುದು. ಆದುದರಿಂದ ಸಿಗರೇಟ್/ಬೀಡಿ ಸೇವನೆ ನಿಲ್ಲಿಸುವುದು ಎಲ್ಲ ರೀತಿಯಲ್ಲೂ ಉತ್ತಮ. ಧೂಮಪಾನ ನಿಲ್ಲಿಸಬೇಕು
ವಸಡಿನ ಕೊಳೆರೋಗದ ಚಿಹ್ನೆ ಕಂಡು ಬಂದಲ್ಲಿ ದಂತ ವೈದ್ಯರನ್ನು ಭೇಟಿಯಾಗಿ ಅವರು ಈ ಕೊಳೆತು ಹೋದ ಬಿಳಿಯ ಪದರವನ್ನು ಔಷಧದ ಮೂಲಕ ತೆಗೆದು, ಆ ಜಾಗಕ್ಕೆ ಸರಿಯಾದ ರಕ್ತಸಂಚಾರ ಆಗುವ ಹಾಗೇ ನೋಡಿಕೊಳ್ಳುವರು, ಬೇಕಾದರೆ ಆ್ಯಂಟಿ ಬಯೋಟಿಕ್ ಮತ್ತು ಬಾಯಿ ಮುಕ್ಕಳಿ ಸುವ ಔಷಧವನ್ನು ಕೊಡುತ್ತಾರೆ. ಧೂಮಪಾನವನ್ನು ನಿಲ್ಲಿಸುವುದು ಅತೀ ಮುಖ್ಯ. – ಡಾ| ಜಿ. ಸುಬ್ರಾಯ ಭಟ್ ,
ಅಸೋಸಿಯೆಟ್ ಡೀನ್ ಮತ್ತು ಪ್ರೊಫೆಸರ್,
ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ