Advertisement

ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗೆ ಪಣ

03:46 PM May 05, 2017 | |

ಧಾರವಾಡ: ಮುಂಬರುವ ಅಕ್ಟೋಬರ್‌ 2ರೊಳಗಾಗಿ ಧಾರವಾಡ ಜಿಲ್ಲೆಯನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸುವ ಪಣದೊಂದಿಗೆ ಜಿಲ್ಲಾದ್ಯಂತ ಸ್ವತ್ಛ ಭಾರತ್‌ ಮಿಷನ್‌ ಚಟುವಟಿಕೆಗಳನ್ನು ಆಂದೋಲನ ರೂಪದಲ್ಲಿ ಕೈಗೊಳ್ಳಲಾಗಿದೆ ಎಂದು ಜಿಪಂ ಸಿಇಒ ಸ್ನೇಹಲ್‌ ರಾಯಮಾನೆ ಹೇಳಿದರು. 

Advertisement

ಇಲ್ಲಿನ ಜಿಪಂ ಸಭಾಂಗಣದಲ್ಲಿ ಧಾರವಾಡ ತಾಲೂಕು ಮಟ್ಟದ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ “ನಮ್ಮನೆಯ ಶೌಚಾಲಯ ನಮ್ಮ ಸ್ವಾಭಿಮಾನ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಯಲು ಮಲವಿಸರ್ಜನೆಯು ಕೆಟ್ಟ ಪರಿಪಾಠವಾಗಿದೆ.

ಇದರಿಂದ ಆರೋಗ್ಯ ಸಂಬಂಧಿತ ಸಮಸ್ಯೆಗಳು ತೀವ್ರವಾಗಿ ಉಲ್ಬಣಿಸಲಿವೆ. ಗ್ರಾಮಗಳು ದೊಡ್ಡದಾಗುತ್ತಿದ್ದು, ಬಯಲು ಬಹಿರ್ದೆಸೆಗೂ ಸಹ ಸ್ಥಳವಿಲ್ಲದಂತಾಗಿದೆ. ಹೀಗಾಗಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಿಕ್ಷಕರು ಹಾಗೂ ಪಿಡಿಒಗಳ ಸಹಕಾರದೊಂದಿಗೆ ಎಲ್ಲ ಗ್ರಾಮಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ.

ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಶೌಚಾಲಯ ಹೊಂದುವದು ಸ್ವಾಭಿಮಾನದ ಸಂಕೇತವಾಗಿದೆ. ಸಾಮಾನ್ಯ ವರ್ಗದ ಕುಟುಂಬಗಳಿಗೆ 12 ಸಾವಿರ, ಪ.ಜಾ ಹಾಗೂ ಪ.ಪಂ. ಕುಟುಂಬಗಳಿಗೆ 15 ಸಾವಿರ ಮತ್ತು ಸ್ನಾನಗೃಹ ಸಹಿತವಾದ ಶೌಚಾಲಯ ನಿರ್ಮಾಣಕ್ಕೆ 19 ಸಾವಿರ ರೂಪಾಯಿಗಳ ಅನುದಾನ ನೀಡಲಾಗುತ್ತಿದೆ ಎಂದರು. 

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌.ಎಚ್‌. ನಾಗೂರ ಮಾತನಾಡಿ, ಶೌಚಾಲಯ ನಿರ್ಮಿಸಲು ಉತ್ತೇಜನ ನೀಡುವ ಮೊದಲ ಹತ್ತು ಸಿಬ್ಬಂದಿಗೆ ತಾವೂ ಸಹ ವೈಯಕ್ತಿಕ ಬಹುಮಾನ ನೀಡುವುದಾಗಿ ಘೋಷಿಸಿದರು. ನವಲಗುಂದ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಎಸ್‌. ತಿವಾರಿ, ಜಿಪಂ ಸಹಾಯಕ ಯೋಜನಾಧಿಕಾರಿ ಭೀಮಪ್ಪ ಎಂ. ಅವರು ಕಾರ್ಯಾಗಾರದಲ್ಲ ಉಪನ್ಯಾಸ ನೀಡಿದರು.

Advertisement

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ತಾಲೂಕು ಆರೋಗ್ಯಾಧಿಕಾರಿ ಡಾ| ಅಯ್ಯನಗೌಡರ್‌, ನೀರು ಸರಬರಾಜು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬೆಟಸೂರ, ಬಿಇಒ ಶ್ರೀಶೈಲ ಕರಿಕಟ್ಟಿ ಇದ್ದರು. ಪದ್ಮಾವತಿ ನಾಗನಗೌಡರ್‌, ಶಂಕರ ಕರಿಕಟ್ಟಿ, ಬಿ.ಡಿ. ಚವರಡ್ಡಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು. ಜೋಶಿ ಸ್ವಾಗತಿಸಿದರು. ಬಿ.ಎ. ಮಡಿವಾಳರ ನಿರೂಪಿಸಿ, ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next